ಸರಳ ವ್ಯಕ್ತಿತ್ವ ಹಾಗೂ ನ್ಯಾಯದ ಹಂಬಲ ಬಯಸಿದವರಿಗೆ ನ್ಯಾಯದ ಪರವಾಗಿ ವಾದಿಸಿ ಅವರ ಮನ ಗೆದ್ದ ನಾಗರಾಜ ನಾಯಕ ರವರು ಕೇವಲ ನ್ಯಾಯವಾದಿಯಾಗಿ ಅಷ್ಟೇ ಅಲ್ಲದೇ ಸರಳ ವ್ಯಕ್ತಿತ್ವದ ಸ್ನೇಹಜೀವಿ , ಜನ ಮನ ಗೆದ್ದ ನಾಯಕ.

ಸ್ವಾತಂತ್ರ್ಯ ಹೋರಾಟಗಾರರ ಮನೆತನ

ಉಪ್ಪಿನ ಸತ್ಯಾಗ್ರಹ, ತೆರಿಗೆ ನೀಡದೇ ಬ್ರಿಟೀಷರ ವಿರುದ್ಧ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ ಇತ್ಯಾದಿಗಳಲ್ಲಿ ಭಾಗವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ನಾಗರಾಜ ವೆಂಕಣ್ಣ ನಾಯಕ ಜನಿಸಿದವರು. ಹೀಗಾಗಿಯೇ ಇವರ ರಕ್ತದಲ್ಲಿಯೇ ನ್ಯಾಯದ ತುಡಿತವೂ ಸೇರಿದೆ ಎಂದರೂ ತಪ್ಪಾಗಲಾರದು. ದೇಶಕ್ಕಾಗಿ ಜೈಲು ಸೇರಿದ ಹಾಗೂ ಪ್ರಾಣವನ್ನೂ ಪಣಕ್ಕಿಟ್ಟ ಪೂರ್ವಜರ ದಾರಿಯಲ್ಲಿಯೇ ಮುನ್ನಡೆಯುತ್ತಿದ್ದಾರೆ ನಾಗರಾಜ ನಾಯಕ ಬೀಸಗೋಡ ರವರು.

FB IMG 1521979878550

ವೃತ್ತಿಯಲ್ಲಿಯೂ ಬಡವರ ಬಗ್ಗೆ ಕಾಳಜಿ

ನಾಗರಾಜ ನಾಯಕ ರು ಕಳೆದ 21 ವರ್ಷಗಳಿಂದ ಕಾರವಾರದಲ್ಲಿ ವಕೀಲರಾಗಿ ತನ್ನ ವೃತ್ತಿಜೀವನದಲ್ಲಿ ಹೆಸರು ಮತ್ತು ಖ್ಯಾತಿಯನ್ನು ಗಳಿಸಿದ್ದಾರೆ. ಕೇವಲ ಹಣ ಗಳಿಸುವ ಸಲುವಾಗಿ ವಕೀಲ ವೃತ್ತಿಯನ್ನು ಅವರೆಂದಿಗೂ ಬಳಸಲಿಲ್ಲ ಎಂಬುದು “ಸತ್ವಾಧಾರ ನ್ಯೂಸ್” ಜೊತೆಗೆ ಹಂಚಿಕೊಂಡ ಹಲವರ ಅಭಿಪ್ರಾಯ. ಇವರು ದುಃಖಿತ ಗ್ರಾಹಕರಿಗೆ ಸೂಕ್ತವಾದ ಸಮಾಧಾನವನ್ನು ನೀಡುವುದು ಮತ್ತು ಅವರ ಪರವಾಗಿ ಕೇಸ್ ಗೆಲ್ಲಲು ಪ್ರಾಮಾಣಿಕವಾಗಿ ವಾದಿಸುವವರೂ ಆಗಿದ್ದಾರೆ.
ಅನೇಕ ಕಂಪೆನಿಗಳು / ಸಂಸ್ಥೆಗಳಿಗೆ ಪೀನಲ್ ಅಡ್ವೊಕೇಟ್ / ಕಾನೂನು ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

FB IMG 1521979806244

ಪಹರೆ ವೇದಿಕೆ.

ಸಾಮಾಜಿಕ ಜಾಗೃತಿ ಮತ್ತು ಅದರ ಮೌಲ್ಯಗಳ ರಕ್ಷಣೆಗಾಗಿ “ಪಹರೆ ವೇದಿಕೆ ” ಹೆಸರಿನ ಸಂಘಟನೆಯೊಂದನ್ನು 2004 ರಲ್ಲಿ ಹುಟ್ಟುಹಾಕಿದ ನಾಗರಾಜ ನಾಯಕರು ಸ್ವಚ್ಛತೆಯ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ತಂಡವು ಈ “ಪಹರೆ ವೇದಿಕೆ” ಮೂಲಕ ಸತತ ಮೂರು ವರ್ಷಗಳಿಂದ ಪ್ರತಿವಾರವೂ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಸ್ವಚ್ಛತಾ ಅಭಿಯಾನವು ಕೆಲವೇ ದಿನಗಳಲ್ಲಿ 175 ನೇ ವಾರಕ್ಕೆ ದಾಪುಗಾಲನ್ನು ಇಡುತ್ತಿದ್ದು ಈ ಕಾರ್ಯಕ್ರಮವನ್ನೂ ಅರ್ಥಪೂರ್ಣವಾಗಿ ಮತ್ತು ಸ್ವಚ್ಛತೆಯ ಪ್ರಜ್ನೆ ಬೆಳೆಸುವ ಸಲುವಾಗಿ ಆಚರಿಸಲು ನಿರ್ಧರಿಸಿದೆ.150 ನೇ ವಾರವನ್ನು ಯಾಣದಲ್ಲಿರುವ ವಿಭೂತಿ ಎಂಬ ಸುಂದರ ನದಿಗೆ ಪೂಜೆ ಸಲ್ಲಿಸಿ,ಪ್ರವಾಸಿ ತಾಣ ಯಾಣದಲ್ಲಿ ಸ್ವಚ್ಛತೆ ನಡೆಸಿರುವುದೂ ಸ್ತುತ್ಯಾರ್ಹ.

RELATED ARTICLES  ಶ್ರೀಪರಿವಾರದ ಭಿಕ್ಷಾಸೇವೆ: ಐವರಿಗೆ ಸಾಧಕ ಸನ್ಮಾನಗುರಿ ಸಾಧನೆಗೆ ಶ್ರೀ ಪರಿವಾರ ಸೋಪಾನ: ರಾಘವೇಶ್ವರ ಶ್ರೀ

ಚುನಾವಣೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ, ಕೃಷಿಯಲ್ಲಿ ಸುಧಾರಣೆ, ಆಹಾರ ಕೊರತೆಯನ್ನು ತಪ್ಪಿಸುವುದು, ಪರಿಸರ ಜಾಗೃತಿ ಮತ್ತು ಹಿಂದುಳಿದ ಕಾರ್ಯಗಳಿಗೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸಲು ಪಹರೆ ವೇದಿಕೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಆದಾಯ, ಪೊಲೀಸ್, ನ್ಯಾಯಾಂಗ, ಪತ್ರಿಕೋದ್ಯಮ ಮುಂತಾದ ಇಲಾಖೆಗಳಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಶಾಲಾ ಕಾಲೇಜುಗಳಲ್ಲಿ ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ.

FB IMG 1521979964479

ಸಾಮಾಜಿಕ‌ ಸೇವೆ.

ಗ್ರಾಮೀಣ ಪ್ರದೇಶದ ಯುವಜನರನ್ನು ಪ್ರೇರೇಪಿಸಿ ಗ್ರಾಮಸ್ಥರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನಾಗರಾಜ ನಾಯಕ ರವರು ಆಗಿನ ಉಪ ಕಮೀಷನರ್ ಜೊತೆಗೆ ಕೃಷಿ ಹಬ್ಬ ಆಯೋಜಿಸಿ ವರ್ಷಂಪ್ರತಿ ನಡೆಸುತ್ತ ಬಂದವರು. 2012 ರಲ್ಲಿ ಶ್ರೀ ಹಾಲಾಡಿ ಶ್ರೀನಿವಾಸ್ ಶೆಟ್ಟಿ, 2013 ರಲ್ಲಿ ಮೋಹನ್ ಆಳ್ವ ಅವರುಗಳೂ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. 2014 ರಲ್ಲಿ ಶ್ರೀ ವೈ ಎಸ್.ವಿ. ದತ್ತಾ , 2016 ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ನವರು ಮತ್ತು ಉತ್ತರ ಕೆನರಾ ಸಂಸದ ಶ್ರೀ ಅನಂತಕುಮಾರ ಹೆಗಡೆಯವರೂ ಪಹರೆ ವೇದಿಕೆಯ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ.

ಹುಟ್ಟೂರು ಬೀಸಗೋಡ ನಲ್ಲಿ “ಜ್ಞಾನ ಸತ್ರ”ವನ್ನು (ಬುದ್ಧಿಜೀವಿಗಳ ಒಟ್ಟುಗೂಡಿಸುವಿಕೆಯನ್ನು) ನಾಗರಾಜ ನಾಯಕ ಅವರು ಆಯೋಜಿಸಿದ್ದಾರೆ. ಆಯ್ಕೆಮಾಡಿದ ವಿಭಿನ್ನ ಕ್ಷೇತ್ರಗಳ ಶ್ರೇಷ್ಟವ್ಯಕ್ತಿಗಳನ್ನು ನಿಶ್ಚಿತ ದಿನದಂದು ನಿರ್ದಿಷ್ಟಪಡಿಸಿದ ವಿಷಯಗಳ ಕುರಿತು ಸಾರ್ವಜನಿಕರಿಗೆ ಪ್ರವಚನ ನೀಡಲು ಈ “ಜ್ಙಾನ ಸತ್ರ” ಕ್ಕೆ ಆಹ್ವಾನಿಸಲಾಗುತ್ತ ಬರಲಾಗಿದ್ದು , ಈವರೆಗೂ ನಾಡಿನ ಹೆಸರಾಂತ ಸಾಹಿತಿಗಳು ,ವಿಜ್ಙಾನಿಗಳು ಮುಂತಾದ ಅನೇಕ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡು ತಮ್ಮ ತಮ್ಮ ಅನುಭವ,ಮಾರ್ಗದರ್ಶನ ಹಂಚಿಕೊಳ್ಳುತ್ತ ಬಂದಿರುತ್ತಾರೆ.

RELATED ARTICLES  ಅಕ್ರಮ ಜಾನುವಾರು ಸಾಗಾಟ : ಆರೋಪಿಗಳು ಅರೆಸ್ಟ್.

FB IMG 1521983888577

ಸಾಮಾಜಿಕ‌ ಕಾರ್ಯಗಳನ್ನು ವಿಶೇಷವಾಗಿ ನಡೆಸಲೆಂದೇ ತಮ್ಮ ಸ್ವಂತದ್ದಾದ ಸುಮಾರು 1 ಎಕರೆ ಭೂಮಿಯನ್ನು “ಸರಯೂ ಬನ” ವಾಗಿ ಅಭಿವೃದ್ಧಿಪಡಿಸಿದ್ದಾರೆ. ತೆಂಗು , ಅಡಿಕೆ , ಮಾವು ಮುಂತಾದ ಮರಗಳನ್ನು ಒಳಗೊಂಡಿರುವ ಈ ಉದ್ಯಾನ ವನವು ನೈಸರ್ಗಿಕ ಸೌಂದರ್ಯ ಹೊಂದಿದ ಮುಕ್ತ ಪ್ರಶಾಂತ ಪ್ರದೇಶವಾಗಿದ್ದು ನಾಟಕ ಅಭ್ಯಾಸ / ಕಾರ್ಯಾಗಾರ, ಬೇಸಿಗೆ ಶಿಬಿರಗಳು, ರಜಾದಿನಗಳಲ್ಲಿ ಮಕ್ಕಳಿಗಾಗಿ ಉಪನ್ಯಾಸಗಳು ಮತ್ತು ಅಂತರ್ಜಾತಿ ವಿವಾಹವನ್ನು ನಡೆಸಲು ಈ ಜಾಗ ಸದ್ಬಳಕೆಯಾಗುತ್ತಿದೆ.

FB IMG 1521982911015

ಕಲಾವಿದ ,ಸಾಹಿತ್ಯ ಪ್ರೇಮಿ

ನಾಗರಾಜ ನಾಯಕ ನ್ಯಾಯವಾದಿಯಾಗಿಯಷ್ಟೇ ಅಲ್ಲ , ಸಾಹಿತ್ಯ, ನಟನೆ,ಹಾಡುವಿಕೆ, ಕೃಷಿ, ಕಸಿ ಮಾಡುವಿಕೆ, ಕರಕುಶಲತೆ ಮುಂತಾದ ಕ್ಷೇತ್ರಗಳಲ್ಲಿಯೂ ಜನಪ್ರಿಯರಾಗಿದ್ದಾರೆ.
ನಾಗರಾಜ ನಾಯಕ ಅವರ ಅನೇಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪತ್ರಿಕೆಯಲ್ಲಿ ಇವರು ಬರೆಯುತ್ತಿದ್ದ “ವಕಲಾತ್” ಎಂಬ ಅಂಕಣಗಳು “ವಕಾಲತ್” ಎಂಬ ಪುಸ್ತಕವಾಗಿಯೂ ಪ್ರಕಟವಾಗಿದೆ.

IMG 20180325 WA0012

ಯಕ್ಷಗಾನದ ಕಲಾವಿದರಾಗಿಯೂ ಗುರುತಿಸಿಕೊಂಡವರು ನಾಗರಾಜ ನಾಯಕರವರು.

ಬೇಸಿಗೆಯ ಋತುವಿನಲ್ಲಿ ಪ್ರತಿವರ್ಷ ಮಾರ್ಚ್ ನಿಂದ ಜೂನ್ ಮಧ್ಯದವರೆಗೆ ಕುಡಿಯುವ ನೀರಿನ ಸಮಸ್ಯೆಯಿರುವ ಅಂಕೋಲಾ ತಾಲ್ಲೂಕಿನ ಬೆಳಂಬರ, ಬೆಳಸೆ ಮುಂತಾದ ಹಳ್ಳಿಗಳಿಗೆ ನೀರಿನ ಪೂರೈಕೆಯ ಸೌಲಭ್ಯ ಒದಗಿಸಿದ್ದಾರೆಂದು ಊರಿನ‌ ಗ್ರಾಮಸ್ಥರು “ಸತ್ವಾಧಾರ ನ್ಯೂಸ್” ಗೆ ತಿಳಿಸಿದ್ದಾರೆ. ಈ ಹಳ್ಳಿಗಳಲ್ಲಿ ಅಸ್ತಿತ್ವದಲ್ಲಿರುವ ಬಹುತೇಕ ಬಾವಿಗಳು ಒಣಗಿ ಹೋಗುವುದು ಅಥವಾ ನೀರು ಉಪ್ಪಾಗಿರುತ್ತದೆ ಎಂಬುದನ್ನು ನಾಗರಾಜ ನಾಯಕ ಗಮನಿಸಿ ಅವರ ಸ್ವಂತ ಖರ್ಚಿನಿಂದ ಕುಡಿಯುವ ನೀರನ್ನು ಸರಬರಾಜು ವ್ಯವಸ್ಥೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಬಿಜೆಪಿಯಲ್ಲಿ ನ್ಯಾಯ ವಿಭಾಗದ ಮುಂದಾಳುವಾಗಿ ಅನೇಕ ಹೋರಾಟಗಾರರಿಗೆ ಹಾಗೂ ಹಿಂದುಗಳಿಗೆ ಆಪತ್ತು ಎದುರಾದಾಗ ಹಾಗೂ ಬಂಧನದ ಭೀತಿ ಎದುರಾದಾಗಲೆಲ್ಲ ಅವರನ್ನು ನ್ಯಾಯಯುತವಾಗಿ ಗೆಲ್ಲಿಸಿ ಸುಭದ್ರ ಪಕ್ಷ ಸಂಘಟನೆಯಲ್ಲಿಯೂ ಸಕ್ರಿಯವಾಗಿ ಕಾಣಿಸಿಕೊಂಡ ನಾಗರಾಜ ನಾಯಕರು ನಾಗರಿಕರ ನೆಚ್ಚಿನ ನಾಯಕರಾಗಿರುವುದು ಜನತೆಯ ಮಾತಾಗಿದೆ.

ಸಹಕಾರ :ಜಯದೇವ ಬಳಗಂಡಿ
ವರದಿ : ಸತ್ವಾಧಾರಾ ನ್ಯೂಸ್.