ವಿಜಯಪುರ: ಧಮ್ ಇದ್ರೆ ವೀರಶೈವ ಸಮಾವೇಶಕ್ಕೆ ಬಂದು ಹೋಗಿ ಅಂತ ದಿವ್ಯಾ ಹಗರಣಿ ಎಂಬವರು ಸಚಿವ ಎಂ.ಬಿ ಪಾಟೀಲರಿಗೆ ಸವಾಲೆಸೆದಿದ್ದಾರೆ.

ವಿಜಯಪುರದಲ್ಲಿ ನಡೆಯುತ್ತಿರುವ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಅವರು, ನೀವು ಇಲ್ಲಿ ಬಂದಿದ್ದೇ ಆದರೆ ಬರೀ ಒಂದು ರೌಂಡ್ ಹಾಕಿ ತೋರಿಸಿ. ನೀವು ನಮ್ಮ ಧರ್ಮಕ್ಕೆ ನೀವು ಕೈ ಹಾಕಿದ್ದು ಸರಿಯಲ್ಲ. ಅದಕ್ಕೆ ಪುರುಷರು ಯಾರು ಬೇಡ. ನಾವು ಮಹಿಳೆಯರು ಸಾಕು. ಒಂದು ಒನಕೆ ಅಥವಾ ಖಡ್ಗ ಕೊಟ್ರೆ ಸಾಕು ನಿಮ್ಮಂಥ ಎಷ್ಟೇ ಧರ್ಮ ವಿರೋಧಿಗಳು ಬಂದರೂ ಅವರನ್ನು ಪಿಸ್ ಪಿಸ್ ಮಾಡುತ್ತೇವೆ ಎಂದು ಎಂ.ಬಿ ಪಾಟೀಲರಿಗೆ ಎಚ್ಚರಿಕೆ ನೀಡಿದ್ದಾರೆ.

RELATED ARTICLES  ವಿಷ ಕುಡಿಯುವವರಿಗೆ ಹಾಲೆಂಬ ಅಮೃತ ನೀಡುವುದಕ್ಕಾಗಿ ಈ ಹೋರಾಟ- ರಾಘವೇಶ್ವರ ಶ್ರೀ