1. ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಈ ಉತ್ಸವಕ್ಕೆ ಆಯ್ದುಕೊಳ್ಳಲಾಗಿದೆ. ತನ್ಮೂಲಕ ಸಮಗ್ರ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆ.

2. ಮಲೆನಾಡು ಜಿಲ್ಲೆಗಳ ಗ್ರಾಮೀಣ ಮಟ್ಟದ ಹಿರಿ ಕಿರಿಯ ಕಲಾವಿದರನ್ನು ವೇದಿಕೆಗೆ ತರುವುದರ‌ ಮೂಲಕ ಅವರ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು.

3. ಅಳಿಯುತ್ತಿರುವ ಸಂಸ್ಕ್ರತಿಯನ್ನು ಉಳಿಸುವಲ್ಲಿ ಮುಂದಿನ ಯುವ ಪೀಳಿಗೆಯನ್ನು ತೊಡಗಿಸುವುದು.

4. ರಾಜ್ಯ ರಾಷ್ಟ್ರ ಮಟ್ಟದ ವ್ಯಕ್ತಿಗಳನ್ನು ವೇದಿಕೆಗೆ ಕರೆ ತರುವ ಮೂಲಕ ಅವರ ಜೀವನದ ಶ್ರೇಷ್ಠ ಆದರ್ಶಗಳನ್ನು ಗ್ರಾಮೀಣ ಮಟ್ಟದ ಯುವ ಜನತೆ ಮೈಗೂಡಿಸಿಕೊಳ್ಳುವಂತೆಸಗುವುದು.

5. ವಿವಿಧ ಜಿಲ್ಲೆಗಳ ಕಲೆ, ಉತ್ಪಾದನೆಗಳ ಪ್ರದರ್ಶನಕ್ಕೆ ಮತ್ತು ಪರಸ್ಪರ ಪರಿಚಯಿಸಿಕೊಳ್ಳಲು ಅವಕಾಶ ಕಲ್ಪಿಸುವುದು.

6. ದೇವರು , ಧರ್ಮ, ಜಾತಿ, ಮತ ಎಲ್ಲವನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಶಕ್ತಿ ಸಂಸ್ಕ್ರತಿಗೆ ಇದೆ.ಹಾಗಾಗಿ ಈ ಮಲೆನಾಡ ಉತ್ಸವ ಒಂದು ಸಾಂಸ್ಕೃತಿಕ ವಿನಿಮಯ.

7. ಈ ಉತ್ಸವ ಕೇವಲ ಸಾಂಸ್ಕೃತಿಕ ಸಂಗತಿಯನ್ನೊಳಗೊಳ್ಳದೆ ಸಾಹಿತ್ಯಿಕ, ಧಾರ್ಮಿಕ, ಶೈಕ್ಷಣಿಕ, ಭೌಗೋಳಿಕ ಚಿಂತನೆಗಳನ್ನೊಳಗೊಂಡಂತೆ ಚಿಂತನ – ಮಂಥನಗಳೂ ಇಲ್ಲಿ ನಡೆಯಲಿವೆ.

8. ಪಶ್ಚಿಮ ಘಟ್ಟ ತನ್ನ ಜೀವ ವೈವಿಧ್ಯತೆಯಿಂದಲೇ‌ ಹೆಸರುವಾಸಿಯಾಗಿದೆ. ಇಲ್ಲಿಯ ಕಲೆಗಳಿಗೆ ರಾಷ್ಟ್ರೀಯ ಮಟ್ಟದ ತಾರಾ ಮೌಲ್ಯವನ್ನು ಒದಗಿಸಿಕೊಡುವ ಒಂದು ಪ್ರಯತ್ನ ಈ ಸಂಸ್ಕ್ರತಿ ಕುಂಭ – ಮಲೆನಾಡ ಉತ್ಸವ.

RELATED ARTICLES  ಭಟ್ಕಳ ತಾಲೂಕಾ‌ ಕಸಾಪದಿಂದ ಸಂಸ್ಥಾಪನಾ ದಿನಾಚರಣೆ.

9. ಮಲೆನಾಡಿನ ಆರಾಧನಾ ಕಲೆಗಳು, ಧಾರ್ಮಿಕ ಪರಂಪರೆಗಳನ್ನು ಉಳಿಸಿವೆ.ಇಲ್ಲಿಯ ಬುಡಕಟ್ಟು ಜನಾಂಗದ ಕಲೆ ವೈಶಿಷ್ಟ್ಯಪೂರ್ಣವಾದಂತವು. ಒಟ್ಟಾರೆ 7 ದಿನಗಳ ಕಾಲ ನಡೆಯುವ ಈ ಉತ್ಸವ ಕೇವಲ ಕಲೆಯ ಅಭಿವ್ಯಕ್ತಿ ಒಂದೇ ಆಗದೆ ಕರ್ನಾಟಕದ ಇಡುಗ೦ಟಿನ ಸಂಸ್ಕ್ರತಿಗೆ ಮೌಲ್ಯ ತಂದುಕೊಡುವ ಒಂದು ಪ್ರಾಮಾಣಿಕ ಪ್ರಯತ್ನವಾಗಲಿದೆ.

ಭಾಗವಹಿಸಬಹುದಾದ ಪ್ರತಿಭೆಗಳು :-2000

ಕಾರ್ಯಕ್ರಮದ ದಿನಾಂಕ :- 25-03-2018 ರಿಂದ 31-03-2018 ರವರೆಗೆ.

ಸ್ಥಳ:- ಶ್ರೀ ವೀರಾಂಜನೇಯ ಸಭಾಭವನ, ಶ್ರೀ ಕ್ಷೇತ್ರ ಬಂಗಾರಮಕ್ಕಿ, ಗೇರಸೊಪ್ಪಾ, ತಾ:- ಹೊನ್ನಾವರ (ಉ.ಕ.)

ದಿನಾಂಕ 30-03-2018 ಶುಕ್ರವಾರ ಶ್ರೀ ವೀರಾಂಜನೇಯ ದೇವರ ಪುಷ್ಪ ರಥೋತ್ಸವ ಮತ್ತು 31-03-2018 ರ ಮಧ್ಯಾಹ್ನ 12:30 ರ ಅಭಿಜಿನ್ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ದೇವರ ಬ್ರಹ್ಮ ರಥೋತ್ಸವ ಹಾಗೂ ಅದೇ ದಿನ ಸಂಜೆ 06-00 ರಿಂದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.

ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್ , ಹೇಮಪುರ ಮಹಾಪೀಠಮ್ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರು ಈ ಎಲ್ಲಾ ಕಾರ್ಯಕ್ರಮದ ರೂವಾರಿಗಳು ಆಗಿದ್ದು , ಅವರ ಸರ್ವಾಧ್ಯಕ್ಷತೆಯಲ್ಲಿಯೇ ವಿವಿಧ ಸಮಿತಿಗಳ ಮೂಲಕ ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ.ಆದ‌‌ ಕಾರಣ ಸಮಸ್ತರೂ ಸಾಧ್ಯವಾದ ಎಲ್ಲ ರೀತಿಯಿಂದ ಪಾಲ್ಗೊಂಡು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಬೇಕಾಗಿ ಶ್ರೀ ಕ್ಷೇತ್ರದ ಆಡಳಿತಾಧಿಕಾರಿಗಳು ವಿನಂತಿಸಿದ್ದಾರೆ.

RELATED ARTICLES  ಭಟ್ಕಳದ ಸರಕಾರಿ ಅಸ್ಪತ್ರೆ ವೈದ್ಯ ಡಾಕ್ಟರ್ ಅರುಣ ಕುಮಾರ್ ಅವರಿಗೆ ಸನ್ಮಾನ

ಅಧ್ಯಕ್ಷರು ಹಾಗೂ ಉತ್ಸವ ನಿರ್ವಹಣಾ ಸಮಿತಿಯ
ಸದಸ್ಯರುಗಳು
ಹಾಗೂ
ಸಿಲೆಕ್ಟ್ ಫೌಂಡೇಶನ್ (ರಿ.)
ಶ್ರೀ ಕ್ಷೇತ್ರ ಬಂಗಾರಮಕ್ಕಿ, ಪೋ:- ಗೇರಸೊಪ್ಪಾ,
ತಾ:- ಹೊನ್ನಾವರ – 581334
ಉತ್ತರ ಕನ್ನಡ, ಕರ್ನಾಟಕ ರಾಜ್ಯ.
ದೂರವಾಣಿ:-08387-268544, 268545, 268333.

SYNDICATE BANK
K.P.C.Colony, Jyoti Nagar, Gerasoppa –
581334
A/c Name:CELECT Foundation®
SB A/c No: 03392200053952
IFSC Code: SYNB0000339
Email:[email protected]
[email protected]

ಮಾರ್ಗ :-
ಶಿವಮೊಗ್ಗ > ಸಾಗರ > ಗೇರಸೊಪ್ಪಾ

ಶ್ರೀ ಕ್ಷೇತ್ರ ಬಂಗಾರಮಕ್ಕಿ ಸಂಸ್ಕ್ರತಿ ಕುಂಭ ಮಲೆನಾಡ ಉತ್ಸವ. ^
|‌‌

ಭಟ್ಕಳ > ಹೊನ್ನಾವರ < ಕುಮಟಾ

ವರದಿ:-ಎಮ್.ಎಸ್.ಶೋಭಿತ್ ಮೂಡ್ಕಣಿ