1)ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ(ರಿ.)ಶ್ರೀ ಕ್ಶೇತ್ರ ಬಂಗಾರಮಕ್ಕಿ
2)ಶ್ರೀ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ(ರಿ.)ಶ್ರೀ ಕ್ಶೇತ್ರ ಬಂಗಾರಮಕ್ಕಿ
3)ಸಿಲೆಕ್ಟ್ ಫೌಂಡೇಶನ್ (ರಿ.)ಶ್ರೀ ಕ್ಶೇತ್ರ ಬಂಗಾರಮಕ್ಕಿ.

ಈ ಮೂರು ಸಂಸ್ಥೆಗಳಿಗೆ ಸ್ವತಃ ಶ್ರೀ ಗುರೂಜಿಯವರೇ ಅಧ್ಯಕ್ಷರಾಗಿ ಎಲ್ಲಾ ಯೋಜನೆಗಳ ಬೆನ್ನೆಲುಬಾಗಿ ಮುನ್ನಡೆಸುತ್ತಿದ್ದಾರೆ.

ಧಾರ್ಮಿಕ ದತ್ತಿ ಸಂಸ್ಥೆಯ ಚಟುವಟಿಕೆಗಳು:-
1)ಶ್ರೀ ಕ್ಶೇತ್ರದಲ್ಲಿ ನಡೆದು ಬಂದ ಸಂಪ್ರದಾಯದಂತೆ ಶ್ರೀ ವೀರಾಂಜನೇಯ ದೇವರ ಸನ್ನಿಧಿಯಲ್ಲಿ ಪ್ರತಿನಿತ್ಯ ತ್ರಿಕಾಲ ಪೂಜೆ (ಮೊದಲ ಪೂಜೆ ಬ್ರಾಹ್ಮಿ ಮುಹೂರ್ತದಲ್ಲಿ)

2)ಪ್ರತಿ ವರ್ಷ ನಾಲ್ಕು ಸಲ ಭಜನೆ (ಜಾಗರಣೆ)

3)ಕಾರ್ತೀಕ ಮಾಸದಲ್ಲಿ ಭಕ್ತರ ಹರಕೆಯ ದೀಪೋತ್ಸವಗಳು ಕಾರ್ತೀಕ ಅಮವಾಸ್ಯೆಯ ದಿನ ಮಹಾದೀಪೋತ್ಸವ,ಸಿಡಿಮದ್ದು ಸಿಡಿಸುವುದು

4)ಅಯನೋತ್ಸವ ಹಾಗೂ ವರ್ಧಂತಿ ಉತ್ಸವಗಳು

5)ಭಕ್ತ ಮಹಾಜನರ ಗ್ರಹದೋಶಗಳ ಪರಿಹಾರಕ್ಕಾಗಿ ಹೋಮಹವನ,ಜಪಪಾರಾಯಣ ಮುಂತಾದವುಗಳನ್ನು ನಡೆಸುವುದು

6)ಪ್ರತಿ ವರ್ಷ ಚೈತ್ರ ಶುದ್ಧ ಹುಣ್ಣಿಮೆ ಹನುಮ ಜಯಂತಿಯಂದು (2006 ನೇ ಇಸ್ವಿಯಲ್ಲಿ ಸುಮಾರು 40 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಾಜಮಹಾರಾಜರುಗಳಿಗಶ್ಟೇ ಸಾಧ್ಯವಾಗಬಹುದಾದ ಮಹಾಸಂದ್ಯನ ಬ್ರಹ್ಮ ರಥವನ್ನು ನಿರ್ಮಿಸಲಾದ) ರಥೋತ್ಸವವನ್ನು ನಡೆಸುವುದು, ಸತತ ಏಳು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ಹಾಗೂ ಧರ್ಮ ಸಭೆ ನಡೆಸುವುದು

7)ಲೋಕಕಲ್ಯಾಣಕ್ಕಾಗಿ ಮತ್ತು ನಿಸರ್ಗ ವಿಕೋಪ ಶಮನಕ್ಕಾಗಿ ಕಾಲಕಾಲಕ್ಕೆ‌ ಬೃಹತ್ ಯಜ್ಞ ಯಾಗಾದಿಗಳನ್ನು ನಡೆಸುವುದು

8)ಅನ್ನ ದಾಸೋಹ:-ಶ್ರೀ ಕ್ಶೇತ್ರದಲ್ಲಿ ಸದಾ ಇವರ ಸುಮಾರು 75 ಜನ ಸಿಬ್ಬಂದಿಗಳ ಹೊರತಾಗಿ ನಿತ್ಯವೂ ಭಕ್ತರಿಗೆ,ಯಾತ್ರಾರ್ಥಿಗಳಿಗೆ ಎಲ್ಲಾ ಸೇರಿ ದಿನವೂ 500 ಜನರಿಗೆ ಉಚಿತ ಅನ್ನದಾಸೋಹ ನಡೆಸಲಾಗುತ್ತಿದೆ. ಡಿಸೆಂಬರ್ ಜನವರಿ ತಿಂಗಳುಗಳಲ್ಲಿ ದೂರದೂರದಿಂದ ಬರುವ ಪ್ರವಾಸಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಅನ್ನದಾಸೋಹವಿದೆ.

9)ವಿವಿಧ ಧಾರ್ಮಿಕ ಉತ್ಸವಗಳಲ್ಲಿ ಯಜ್ಞ ಯಾಗಾದಿಗಳ ಅಂಗವಾಗಿ ವಿದ್ವತ್ ಸಭೆ, ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿವಿಧ ಕ್ಶೇತ್ರಗಳಲ್ಲಿ ಪ್ರತಿಭೆ ಪಾಂಡಿತ್ಯ ಸಾಧನೆ ತೋರಿದ ಹಿರಿಯ ವಿದ್ವಾಂಸರನ್ನು ಕರೆಸಿ ಅವರಿಗೆ ವೇದಿಕೆ ಒದಗಿಸಿ ಅವರನ್ನು ಸನ್ಮಾನಿಸಲಾಗುತ್ತಿದೆ

ಶ್ರೀ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ (ರಿ.) ಬಂಗಾರಮಕ್ಕಿ ಇದರ ಚಟುವಟಿಕೆಗಳು:-

1)2010 ಜುಲೈ ತಿಂಗಳಲ್ಲಿ 117 ಜನ ವಿದ್ಯಾರ್ಥಿಗಳ ಸೇರ್ಪಡೆಯಿಂದ ಆರಂಭಗೊಂಡ ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ (ಸಿ.ಬಿ.ಎಸ್.ಇ.ಆಂಗ್ಲ ಮಾಧ್ಯಮ) ಇದರಲ್ಲಿ ಎರಡನೇ ವರ್ಷದಲ್ಲಿಯೇ 240 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಅವರೆಲ್ಲರಿಗೂ ಮಧ್ಯಾಹ್ನ ಉಚಿತ ಊಟ ನೀಡಲಾಗುತ್ತಿದೆ. 12 ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಇದೊಂದು ಡೊನೇಶನ್ ಫ್ರೀ ಆಂಗ್ಲ ಮಾಧ್ಯಮ ಶಾಲೆಯಾಗಿರುತ್ತದೆ.

2)ಶ್ರೀ ಗಣೇಶ ಸವೇದ ಸಂಸ್ಕ್ರತ ಪಾಠಶಾಲೆಯಲ್ಲಿ ಈಗಾಗಲೇ 20 ವಿದ್ಯಾರ್ಥಿಗಳು ಯಜುರ್ವೇದವನ್ನು ಕಲಿಯುತ್ತಿದ್ದಾರೆ.3 ಜನ ಶಿಕ್ಷಕರುಗಳಿದ್ದಾರೆ.

3)”ಸಂಗೀತಗಂಗಾ”,”ಹಿಂದೂಸ್ತಾನಿ ಸಂಗೀತ ಶಾಲೆ ” ಯಲ್ಲಿ ಆಸುಪಾಸಿನ ವಿದ್ಯಾರ್ಥಿಗಳು ಸೇರಿ 50 ಜನ ಸಂಗೀತ ಕಲಿಯುತ್ತಿದ್ದಾರೆ.

4) “ಯಕ್ಷಗಾಂಗಣ ವಿಹಾರ” ಎಂಬ ಹೆಸರಿನ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಕಲಿತ ವಿದ್ಯಾರ್ಥಿಗಳು ಬೆಂಗಳೂರಿನಂಥ ನಗರಗಳಲ್ಲಿ ಪ್ರದರ್ಶನ ನೀಡಿದ್ದಾರೆ.

5)ಪ್ರತಿ ವರ್ಷ ಮೇ ತಿಂಗಳ ರಜೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಬೇಸಿಗೆ ಶಿಬಿರ, ಪ್ರತಿಭಾ ಪುನಶ್ಚೇತನ ಶಿಬಿರ, ಡಯಟ್ ನಲ್ಲಿ ತರಬೇತಿ ಪಡೆಯುತ್ತಿರುವ ಶಿಕ್ಷಕ ವಿದ್ಯಾರ್ಥಿಗಳಿಗಾಗಿ ಎನ್.ಎಸ್.ಎಸ್.ಶಿಬಿರ, ಕಾನೂನು ಕಮ್ಮಟ, ಸುಲಭ ಸಂಸ್ಕ್ರತ ಸಂಭಾಷಣ ಶಿಬಿರಗಳನ್ನು ಈ ಟ್ರಸ್ಟಿನ ಆಶ್ರಯದಲ್ಲಿ ನಡೆಸಲಾಗುತ್ತದೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಊಟ,ವಸತಿ,ಕಲಿಕಾ ಸಾಮಾಗ್ರಿಗಳನ್ನು ಪೂರೈಸಲಾಗುತ್ತದೆ.

ಯಕ್ಷಗಾನ:-
ಯಕ್ಷಗಾನದ ಹೃದಯ ಪ್ರದೇಶವೆಂದರೆ ರೌದ್ರರಸ. ಅದು ಯಕ್ಷಗಾನದ ತುರೀಯವೂ ಹೌದು. ಶಿವನು ರುದ್ರನಾಗಿ ತಾಂಡವ ನೃತ್ಯವನ್ನು ಗೈದಾಗ ಅದು ಮೊಟ್ಟಮೊದಲು ಪ್ರಕಟವಾಯಿತು. ಆದ್ದರಿಂದಲೇ ರುದ್ರಾಂಶ ಸಂಭೂತ ಆಂಜನೇಯ ಯಕ್ಷಗಾನ ಪ್ರಿಯನೆನ್ನಿಸಿದ್ದಾನೆ.ರುದ್ರ ರುದ್ರಾಂಶ ಸಂಭೂತ ಇಬ್ಬರು ಅಬ್ಬರಕ್ಕೇ ಕಣ್ದೆರೆಯುವವರು.ಆರ್ಭಟವೇ ಅವರ ವೈಖರಿ. ಆದ್ದರಿಂದಲೇ ಇರಬಹುದು ಯುದ್ದವಿಲ್ಲದ ಯಕ್ಷಗಾನ ಕಥಾನಕಗಳು ವಿರಳ.ಶ್ರೀ ಕ್ಶೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಪ್ರೀತ್ಯರ್ಥವಾಗಿ ಹರಕೆಯ ಆಟಗಳು ನಡೆಯುತ್ತದೆ. ಶರನ್ನವರಾತ್ರಿಯ ಸಂದರ್ಭದಲ್ಲಿ ಪ್ರತಿ ವರ್ಷವೂ ಯಕ್ಷಪೌರ್ಣಿಮೆಯ 15 ದಿನಗಳ ಸರಣಿ ಆಟಗಳ‌ ಕಾರ್ಯಕ್ರಮ ಶ್ರೀ ವೀರಾಂಜನೇಯ ಸಭಾಭವನದಲ್ಲಿ ಜರುಗುತ್ತದೆ.

ಅಂಬ್ಯುಲೆನ್ಸ್:- ಗೇರಸೊಪ್ಪಾದಿಂದ 15 ಕಿ.ಮೀ. ಅಂತರದಲ್ಲಿರುವ ರೋಗಿಗಳು ಹಾಗೂ ಗರ್ಭಿಣಿ ಸ್ತ್ರೀಯರನ್ನು ಶುಶ್ರೂಷೆಗಾಗಿ ಪ್ರಾಥಮಿಕ ಆರೋಗ್ಯ ಘಟಕಕ್ಕೆ ಹಾಗೂ ಅವಶ್ಯವಿದ್ದರೆ ದೂರದ ಆಸ್ಪತ್ರೆಗಳಿಗೆ ಸಾಗಿಸಲು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

RELATED ARTICLES  ವಿಧಾನಸಭಾ ಚುನಾವಣೆಗೆ 50 ಕ್ಷೇತ್ರಗಳಲ್ಲಿ ಸಾಧು- ಸಂತರು ಸ್ಪರ್ಧಿಸಲಿದ್ದಾರೆ : ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ 

ಆಸೇತು ಪ್ರಕಾಶನ:-
ಕಳೆದ ಅಗಸ್ಟ್ 2008 ರಿಂದ ಭಾರತೀಯ ಸನಾತನ ಮೌಲ್ಯಗಳನ್ನು, ಸಮಕಾಲೀನ ಜ್ಞಾನವನ್ನು ಹಾಗೂ ಶ್ರೀ ಕ್ಶೇತ್ರದ ಎಲ್ಲಾ ಸದುದ್ದೇಶದ ಕಾರ್ಯಗಳ ವಿವರಗಳನ್ನು ಜನತೆಗೆ ತಲುಪಿಸುವುದಕ್ಕಾಗಿ “ಹೇಮಪುರ” ಎಂಬ ಹೆಸರಿನ ಮಾಸ ಪತ್ರಿಕೆಯೊಂದನ್ನು ಆರಂಭಿಸಲಾಗಿದೆ.ಶ್ರೀ ಕ್ಶೇತ್ರದ ಸರ್ವತೋಮುಖ ಅಭಿವೃದ್ಧಿಯೇ ಗುರಿಯಾಗಿರುವ ಈ ಪತ್ರಿಕೆಗೆ ಪೋಷಕರಾಗುವ ಮೂಲಕ ಪತ್ರಿಕೆಯನ್ನು ಬಲಪಡಿಸಬೇಕಾಗಿ ವಿನಂತಿ.

ಸಮೃದ್ಧಿ:-
ಶ್ರೀ ವೀರಾಂಜನೇಯ ಗ್ರಾಮೀಣ ಅಭಿವೃದ್ಧಿ ಯೋಜನೆ ಎಸ್.ವಿ.ಎಸ್.ಆರ್.ಡಿ. ಸ್ಕೀಮ್ ಮೂಲಕ ಶ್ರೀ ಮಾರುತಿ ಗುರೂಜಿಯವರು ಈ ಕೆಳಗಿನ ಯೋಜನೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿರುತ್ತಾರೆ.
1. ಸೌರ ವಿದ್ಯುತ್ ಯೋಜನೆ
2. ಸಾರಿಗೆ ಸಂಪರ್ಕ ಅಭಿವೃದ್ಧಿ ಯೋಜನೆ.
3. ಕೃಷಿ ಅಭಿವೃದ್ಧಿ ಯೋಜನೆ.
4. ಜಲ ಸಂಪನ್ಮೂಲ ಅಭಿವೃದ್ಧಿ ಯೋಜನೆ.
5.ಗ್ರಾಮೀಣ ನೈರ್ಮಲ್ಯ ಯೋಜನೆ.
6.ನಿರಾಶ್ರಿತರರಿಗೆ ಆಶ್ರಯ ಯೋಜನೆ.
7.ನಿರುದ್ಯೋಗಿಗಳಿಗೆ ಸೂಕ್ತವಾದ ವೃತ್ತಿ ತರಬೇತಿ ಯೋಜನೆ.
8.ಗ್ರಾಮೀಣ ಜನರಿಗೆ ಕನಿಷ್ಠ ಶಿಕ್ಷಣ ಯೋಜನೆ.

ಸಿಲೆಕ್ಟ್ ಫೌಂಡೇಶನ್ (ರಿ.) ಬಂಗಾರಮಕ್ಕಿ ಇದರ ಚಟುವಟಿಕೆಗಳು.
ಪರಿವರ್ಧಿನಿ:-
ಸರ್ವ ಶಕ್ತನಾದ ಭಗವಂತ ಮನುಷ್ಯರಾದ ನಮಗೆಲ್ಲರಿಗೂ ನಮ್ಮ ಬದುಕನ್ನು ನಾವೇ ನಿರ್ಮಿಸಿಕೊಳ್ಳಲು ಸ್ವಾವಲಂಬಿಗಳಾಗಿ ಬದುಕಲು ಅವಶ್ಯವಿರುವ ಎಲ್ಲಾ ಅಂಗಾಂಗಗಳನ್ನು ದಯಪಾಲಿಸಿದ್ದಾನೆ. ಅಂತೆಯೇ ದೈಹಿಕ ಮಾನಸಿಕ ಆರೋಗ್ಯದಿಂದ ವಂಚಿತರಾದವರನ್ನೂ ಹುಟ್ಟಿಸಿದ್ದಾನೆ. ಅವರೆಲ್ಲರಿಗೂ ಮನಸ್ಸು ಎಂಬುದೊಂದಿದೆ.ಆಶೆ ಆಕಾಂಕ್ಷೆಗಳಿವೆ.ಎಲ್ಲರಂತೆಯೇ ತಾವು ಸಹ ಯಾರಿಗೂ ಭಾರವಾಗದೆ ತಮ್ಮ ಅನ್ನವನ್ನು ತಾವೇ ಸಂಪಾದಿಸಿಕೊಂಡು ಸಮಾಜದಲ್ಲಿ ಗೌರವದಿಂದ ಬದುಕಬೇಕೆಂಬ ವಾಂಛೆಯಿದೆ.ಆದರೆ ಅವರು ಅವಕಾಶ ವಂಚಿತರಾಗಿದ್ದಾರೆ.ಅಂಥವರ ಸೀಮಿತ ಸಾಮರ್ಥ್ಯದ ಉದಾತ್ತೀಕರಣ ಮಾಡಿ ಅವರ ಸಾಮರ್ಥ್ಯಕ್ಕೆ ಸಮವಾಗಿ ಕೆಲಸವನ್ನು ಚಟುವಟಿಕೆಗಳನ್ನು ಒದಗಿಸಿ ಅವರೂ ಸಹ ತಮ್ಮ ಕಾಲ ಮೇಲೆ‌ ತಾವು ನಿಂತು ಸಮಾಜದಲ್ಲಿ ತಲೆ‌ ಎತ್ತಿ ಬದುಕುವಂತೆ ಮಾಡಲು ಕುಂಟರು, ಕಿವುಡರು, ಕುರುಡರು, ಬುದ್ಧಿಮಾಂದ್ಯರು ಇವರೆಲ್ಲರ ಯೋಗಕ್ಷೇಮ ನೋಡಲು ಒಟ್ಟಿನಲ್ಲಿ ಅಸಹಾಯಕರಿಗೆ ಅಷ್ಟಿಷ್ಟು ಸಹಾಯ ಹಸ್ತವನ್ನು ನೀಡುವ ಪ್ರಯತ್ನವಾಗಿ ಪರಿವರ್ಧಿನಿ ಎಂಬ ವಿಶಿಷ್ಟ ಪ್ರಯೋಗ ಆರಂಭಗೊಳ್ಳಲಿದೆ.ಇದು ಶ್ರೀ ಗುರೂಜಿಯವರ ಕನಸಿನ ಕೂಸಾಗಿದ್ದು ಅದನ್ನು ನನಸುಗೊಳಿಸುವ ಪ್ರಯತ್ನಕ್ಕೆ ಉದಾರಹಸ್ತದಿಂದ ಸಿರಿವಂತರು ನೆರವು ನೀಡಬೇಕು.

ಶ್ರೀ ಕ್ಶೇತ್ರ ಬಂಗಾರಮಕ್ಕಿಯ ಮುಂದಿನ ಯೋಜನೆಗಳು:-
ಸುಕೃತಿ:- ಈಗಾಗಲೇ 3 ಸಾವಿರದಷ್ಟು ಪುಸ್ತಕಗಳುಳ್ಳ ಗ್ರಂಥಾಲಯವೊಂದು ಇರುತ್ತಿದ್ದು, ಅದರಲ್ಲಿ ಹೆಚ್ಚಿನ ಪುಸ್ತಕಗಳು ಭಾರತೀಯ ಸನಾತನ ಸಾಹಿತ್ಯಗಳಿಗೆ ಸಂಬಂಧಪಟ್ಟವುಗಳಾಗಿವೆ.ಈ ಗ್ರಂಥಾಲಯವನ್ನು ಸಮಕಾಲೀನ ಸಾಹಿತ್ಯ ಮತ್ತು ಆಧುನಿಕ, ವೈಜ್ಞಾನಿಕ ಹಾಗೂ ತಾಂತ್ರಿಕ ಪುಸ್ತಕಗಳನ್ನು ಹೊಂದಿದ ಸುಸಜ್ಜಿತ ಗ್ರಂಥಾಲಯವನ್ನಾಗಿ ಬೆಳೆಸುವ ಉದ್ದೇಶವನ್ನು ಶ್ರೀ ಮಾರುತಿ ಗುರೂಜಿಯವರು ಹೊಂದಿರುತ್ತಾರೆ. ದಾನಿಗಳು ಪುಸ್ತಕ ರೂಪದಲ್ಲಿ ಅಥವಾ ಹಣದ ರೂಪದಲ್ಲಿ ಸಹಕಾರ ನೀಡಬಹುದು.

ಸಾಕೇತ ಮ್ಯೂಸಿಯಂ :-
ಈಗಾಗಲೇ ಶ್ರೀ ಕ್ಶೇತ್ರದಲ್ಲಿ ಹಳೇ ನಾಣ್ಯಗಳು, ದೇಶ ವಿದೇಶಗಳ ಚಲಾವಣೆಯ ನೋಟುಗಳು, ತಾಳೆಗರಿಯ ಗ್ರಂಥಗಳು, ಪ್ರಾಚೀನ ಕಲಾಕೃತಿಗಳು ಶ್ರೀ ಕ್ಶೇತ್ರದ ವಸ್ತು ಸಂಗ್ರಹಾಲಯದಲ್ಲಿದೆ.ಅಂಥ ಅಪರೂಪದ ವಸ್ತುಗಳನ್ನು ಈ ಸಂಗ್ರಹಾಲಯಕ್ಕೆ ನೀಡಿದವರ ಹೆಸರುಗಳನ್ನು ಉಚಿತ ರೀತಿಯಲ್ಲಿ ಸ್ಮರಿಸಲಾಗುತ್ತದೆ.

ಸಂಜೀವಿನಿ ವನ :-
ಈಗಾಗಲೇ ವಿನಾಶದ ಅಂಚಿನಲ್ಲಿರುವ ಹಲವಾರು ಅಮೂಲ್ಯವಾದ ಔಷಧಿ ಸಸ್ಯಗಳನ್ನು ಕಾಪಾಡುವ ಸಲುವಾಗಿ ಗಿಡ ಮೂಲಿಕೆಗಳನ್ನು ಬೆಳೆಸುವ ನಕ್ಷತ್ರ ವನವೊಂದನ್ನು ಬೆಳೆಸುವ ಯೋಜನೆಯೊಂದನ್ನು ಹಮ್ಮಿಕೊಳ್ಳಲಾಗಿದೆ. ವನ ಮಹೋತ್ಸವದ ಮೂಲಕ ಕೃಷಿಗೆ ಉಪಯುಕ್ತವಾದ ಗಿಡಗಳನ್ನು ಗ್ರಾಮೀಣ ರೈತರಿಗೆ ಹಂಚಲಾಗುತ್ತದೆ.ಈ ಸಂಜೀವಿನಿ ವನವನ್ನು ಪರಿಪೂರ್ಣಗೊಳಿಸುವಲ್ಲಿ ಅವಶ್ಯವುಳ್ಳ ಅಪರೂಪದ ಅಥವಾ ವಿನಾಶದ ಅಂಚಿನಲ್ಲಿರುವ ಸಸ್ಯ ವಿಶೇಷಗಳು ಯಾರಲ್ಲಿಯೇ ಇದ್ದರೂ ಅದನ್ನು ಶ್ರೀ ಕ್ಶೇತ್ರಕ್ಕೆ ತಂದುಕೊಡುವ ಅಥವಾ ಪರಿಚಯಿಸುವ ಮೂಲಕ ಈ ಯೋಜನೆಗೆ ಸಹಕರಿಸುವುದು.

ಪ್ರಜ್ಞಾ :-
ಇಂದಿನ ಈ ಸ್ಪರ್ಧಾ ಯುಗದಲ್ಲಿ ಕಂಪ್ಯೂಟರ್ ಜ್ಞಾನವಿಲ್ಲದವನು ನಿರಕ್ಶರಿಗೆ ಸಮಾನ ಎನ್ನುವ ಹಾಗೆ ಕಂಪ್ಯೂಟರ್ ಜ್ಞಾನ ಅನಿವಾರ್ಯ ಆಗಿದೆ. ಆದ್ದರಿಂದ ಪ್ರಜ್ಞಾ ಎಂಬ ಹೆಸರಿನ ಕಂಪ್ಯೂಟರ್ ಕಲಿಕಾ ಕೇಂದ್ರವೊಂದನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ನಗದು ಅಥವಾ ಕಂಪ್ಯೂಟರ್ ರೂಪದಲ್ಲಿ ನೀಡಿ ಸಹಕರಿಸಬಹುದು.

ಮೆಗಾ ಎಜ್ಯುಕೇಶನ್ ಸಿಟಿ :-
ಸ್ಪರ್ಧಾತ್ಮಕವಾದ ಇಂದಿನ ಈ ಜಗತ್ತಿನಲ್ಲಿ ಗ್ರಾಮೀಣ ಭಾಗದ ಹೊಸ ಪೀಳಿಗೆಯನ್ನು ಮುಂದುವರಿದ ವೈಜ್ಞಾನಿಕ ಸವಾಲುಗಳನ್ನು ಎದುರಿಸಲು ಸಮರ್ಥಗೊಳಿಸುವ ದಿಶೆಯಲ್ಲಿ ಶ್ರೀ ಕ್ಶೇತ್ರ ಬಂಗಾರಮಕ್ಕಿಯ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ (ರಿ.) ಇದು ಇಟ್ಟಿರುವ ದಿಟ್ಟ ಹೆಜ್ಜೆ ಇದಾಗಿರುತ್ತದೆ.ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಹಾಗೂ ಗ್ರಾಮೀಣ ಭಾಗದ ಹೈದ ಹೈದೆಯರನ್ನು ಸ್ವಾವಲಂಬಿಗಳನ್ನಾಗಿಸಲು ಅಗತ್ಯವುಳ್ಳ ಕಂಪ್ಯೂಟರ್ ಟ್ರೇನಿಂಗ್, ಟೇಲರಿಂಗ್ ತರಬೇತಿ ಮುಂತಾದ ತರಬೇತಿ ಕೇಂದ್ರಗಳನ್ನು ತೆರೆಯುವ ಉದ್ದೇಶದಿಂದ ಹೊನ್ನಾವರ ಆಸುಪಾಸಿನಲ್ಲಿ 200 ಕೋಟಿ ರೂ.ಗಳ ಈ ಯೋಜನೆಯನ್ನು ಅಣಿಗೊಳಿಸಲಾಗುತ್ತಿದೆ.

RELATED ARTICLES  ಯಶಸ್ವಿಯಾದ ಉಚಿತ ಮನೆಪಾಠ ಮತ್ತು ಸಂಸ್ಕಾರ ಕೇಂದ್ರದ "ವಾರ್ಷಿಕೋತ್ಸವ".

ಧ್ವಜ ಸ್ತಂಭ :-
ದೇವತ್ವ ಬರೀ ಮೂರ್ತಿಯಲ್ಲಿ ಪೂರ್ಣತ್ವವನ್ನು ಹೊಂದುವುದಿಲ್ಲ.ಅಲಂಕಾರ, ಅರ್ಚಕ, ಭಕ್ತರು, ಮುಖದ್ವಾರದ ಗೋಪುರ, ಧ್ವಜ ಸ್ತಂಭ, ರಥ ‌ಇವೆಲ್ಲವೂ ಇರಬೇಕು. 2006 ರಲ್ಲಿ ಸುಮಾರು 40 ಲಕ್ಷ ರೂ.ಗಳಲ್ಲಿ ನಿರ್ಮಿತವಾದ ಐತಿಹಾಸಿಕ ರಥದೊಂದಿಗೆ ಧ್ವಜಸ್ತಂಭಕ್ಕಾಗಿ 3ft×3ft×52ft ಉದ್ದಳತೆಯ ಬೃಹತ್ ಶಿಲೆಯೊಂದನ್ನು ಬೆಂಗಳೂರು ಸಮೀಪದ ಊರಿಂದ ತರಿಸಲಾಗಿದೆ.ಅದರ ಮೇಲೆ ಕೆತ್ತನೆ ಕೆಲಸ ಮಾಡಿ ನಿಲ್ಲಿಸುವುದಕ್ಕೆ ಇನ್ನೂ ಸುಮಾರು 15 ಲಕ್ಷ ರೂ.ಗಳು ಬೇಕಾಗಿರುತ್ತವೆ.ಸಮರ್ಥರು ಈ ಕೆಲಸದ ಹೊಣೆ ಹೊತ್ತು ಕೃತಾರ್ಥರಾಗಬಹುದು.

ಭೋಜನಾಲಯ :-
ಪಾಕಗೃಹ ಹಾಗೂ ಉಗ್ರಾಣಗಳ ಕೆಲಸ ಅರ್ಧವಾಗಿರುತ್ತದೆ.ಅದನ್ನು ಪೂರ್ಣಗೊಳಿಸಲು ಇನ್ನೂ ಸುಮಾರು 10 ಲಕ್ಷ ರೂ.ಗಳ ಅವಶ್ಯಕತೆಯಿದೆ.

ವಸತಿ ಗೃಹ :-
ಶ್ರೀ ಕ್ಶೇತ್ರಕ್ಕೆ ಆಗಮಿಸುವ ಹಾಗೂ ತೀರ್ಥಸ್ನಾನಕ್ಕಾಗಿ ಇಲ್ಲಿ ಉಳಿಯುವ ಭಕ್ತರು, ಹತ್ತಿರದ ಬಸದಿ ಮುಂತಾದ ಸ್ಥಳಗಳಿಗಾಗಿ ಬರುವ ಯಾತ್ರಾರ್ಥಿಗಳಿಗೆ ಶ್ರೀ ಕ್ಶೇತ್ರದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಾದ ರಥೋತ್ಸವ, ಮಲೆನಾಡ ಉತ್ಸವ ಹಾಗೂ ಯಜ್ಞ ಯಾಗಾದಿಗಳ ಸಂದರ್ಭಗಳಲ್ಲಿ ಒಂದು ವಾರವಿಡೀ ಉಳಿಯುವ ಭಕ್ತರಿಗಾಗಿ ಅನಿವಾರ್ಯವಾದ ಮೂಲಭೂತ ಅವಶ್ಯಕತೆಗಳಲ್ಲೊಂದಾದ ಅತಿಥಿಗೃಹದ ಕೆಲಸ ಆರಂಭಗೊಂಡಿದೆ.ಸುಮಾರು 3 ಕೋಟಿ ರೂ.ಗಳ ಅಂದಾಜು ವೆಚ್ಚದ 52 ಸುಸಜ್ಜಿತ ಕೋಣೆಗಳುಳ್ಳ 6 ಅಂತಸ್ತಿನ ಈ ವಸತಿ ಗೃಹದ ನಿರ್ಮಾಣದಲ್ಲಿ ಸಾವಿರ ರೂ.ಗಳಿಗೆ ಕಡಿಮೆಯಿಲ್ಲದ ಮೊತ್ತವನ್ನು ದಾನ ಮಾಡಿ ಪಾಲ್ಗೊಳ್ಳಬಹುದು.50 ಸಾವಿರ ರೂ.ಗಳಿಗಿಂತ ಮೇಲ್ಪಟ್ಟು 2 ಲಕ್ಷ ರೂ.ಗಳವರೆಗೆ ದಾನ ಮಾಡಿದವರ ಹೆಸರನ್ನು ನಾಮಫಲಕದಲ್ಲಿ ಬರೆದು ಸ್ಮರಿಸಲಾಗುವುದು.ಮೂರು ಲಕ್ಷಕ್ಕೂ ಮೇಲ್ಪಟ್ಟು ರೂ.ಗಳ ದಾನ ನೀಡಿದವರ ಹೆಸರನ್ನು ಒಂದು ರೂಮಿನಲ್ಲಿ ಬರೆಸಲಾಗುವುದು.

ಸತ್ಸಂಗ – ರಾಮಮಂದಿರ :-
ಶ್ರೀ ಕ್ಶೇತ್ರದ ಧರ್ಮಾಧಿಕಾರಿಗಳಾದ ಪ.ಪೂ.ಶ್ರೀ ಮಾರುತಿ ಗುರೂಜಿಯವರು ನಡೆಸುವ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀ ಗುರೂಜಿಯವರು “ಶ್ರೀ ರಾಮ ಜಯ ರಾಮ ಜಯ ಜಯ ರಾಮ” ಈ ತ್ರಯೋದಶಾಕ್ಶರ ಜಪದ ಉಪದೇಶ ನೀಡುವರು.ಯಾವುದೇ ಜಾತಿ, ಮತ , ಭೇದವಿಲ್ಲದೆ ಯಾರೂ ಜಪಿಸಬಹುದಾದ ಅತಿ ಸುಲಭವೂ, ಪವಿತ್ರವಾದ ಜಪದ ಉಪದೇಶವನ್ನು ಪಡೆದು ದೀಕ್ಷಾ ಬದ್ದರಾದವರು ಅಥವಾ ಯಾರೇ ಆದರೂ 5000 ಜಪವನ್ನು ಬರೆಯಬಹುದಾದ ಪುಸ್ತಕವನ್ನು ಪಡೆದು ಹಿಂತಿರುಗಿಸಬಹುದು.ಅಂಥ ಒಂದು ಲಕ್ಷ 16 ಸಾವಿರ ಪುಸ್ತಕಗಳನ್ನು ಬರೆದಾದ ಮೇಲೆ ನಿರ್ಮಿಸಲಾಗುವ ರಾಮ ಮಂದಿರದ ಅಡಿಯಲ್ಲಿ ಈ ಪುಸ್ತಕಗಳನ್ನು ಇಡಲಾಗುವುದು.ಶ್ರೀ ಕ್ಶೇತ್ರದಲ್ಲಿ ನಿರ್ಮಿಸಲಾಗುವ ಈ ರಾಮಮಂದಿರಕ್ಕೆ ಸುಮಾರು 20 ಕೋಟಿ ರೂ.ಗಳು ತಗಲಬಹುದೆಂದು ಅಂದಾಜಿಸಲಾಗಿದೆ. ಸೂಕ್ತ ಸ್ಥಳದ ಆಯ್ಕೆ ಮಾಡಿ ಆಮಂತ್ರಿಸಿದಲ್ಲಿ ಶ್ರೀ ಗುರೂಜಿಯವರ ಸವಾರಿ ಅಲ್ಲಿ ಆಗಮಿಸಿ ಸತ್ಸಂಗವನ್ನು ನಡೆಸಿಕೊಡುವರು.

ಅಂಜನಾ ಪುಷ್ಕರ್ಣಿ :-
ನಡುವೆ ದೇಗುಲವುಳ್ಳ ಕೆರೆಗೆ ಪುಷ್ಕರ್ಣಿ ಎನ್ನುತ್ತಾರೆ. ಶ್ರೀ ಕ್ಶೇತ್ರದ ಸಮೀಪವಿರುವ ಸುಮಾರು 12 ಗುಂಟೆ ವಿಸ್ತಾರವುಳ್ಳ ಕೆರೆಯೊಂದನ್ನು ಸುಂದರವಾದ ಪುಷ್ಕರ್ಣಿಯನ್ನಾಗಿ ಪರಿವರ್ತಿಸುವ ಯೋಜನೆಯೊಂದನ್ನು ಹಮ್ಮಿಕೊಂಡಿದ್ದು ಸುಮಾರು 80 ಲಕ್ಷ ರೂ.ಗಳಷ್ಟು ಖರ್ಚು ತಗಲಬಹುದೆಂದು ಅಂದಾಜು ಮಾಡಲಾಗಿದೆ.
ಈ ಮೇಲಿನ ಎಲ್ಲಾ ಯೋಜನೆಗಳು ಪೂರ್ತಿಗೊಳ್ಳಲು ಶ್ರೀ ಕ್ಷೇತ್ರದ ಸೀಮಿತ ಆದಾಯ ಸಾಲುವುದಿಲ್ಲ.ಶ್ರೀಮಂತರು, ದಾನಿಗಳು, ಆಸ್ತಿಕರೂ ಆದವರು ತಮ್ಮ ಉದಾರ ಹಸ್ತದಿಂದ ಸಹಕರಿಸಿಯೇ ಈ ಎಲ್ಲಾ ಪುಣ್ಯಪ್ರದ ಕಾರ್ಯಕ್ರಮಗಳು ಪೂರ್ಣವಾಗಬೇಕಿದೆ.ಹೆಚ್ಚಿನ ಮೊತ್ತದ ಹಣವನ್ನು ದಾನ ಮಾಡಿದವರ ಹೆಸರನ್ನು ಸೂಕ್ತ ಸ್ಥಳದಲ್ಲಿ ಬರೆದು ಪ್ರಕಟಿಸಲಾಗುವುದು.

ವಿಶೇಷ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ :

ಶ್ರೀ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ (ರಿ.).

ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ (ರಿ.)

ಶ್ರೀ ಕ್ಷೇತ್ರ ಬಂಗಾರಮಕ್ಕಿ.
ಪೋ:-ಗೇರಸೊಪ್ಪಾ, ತಾ:- ಹೊನ್ನಾವರ – 581334
ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ ರಾಜ್ಯ
ದೂರವಾಣಿ:- 08387-268333, 268544, 268545

ವರದಿ:-ಎಮ್.ಎಸ್.ಶೋಭಿತ್ ಮೂಡ್ಕಣಿ