ಕಾರವಾರ :ಶ್ರೀ ಜೇನುಗೂಡು ಹೊನ್ನ ಗೆಳೆಯರ ಬಳಗ ಕಾರೇಬೈಲ್ ತಾಲ್ಲೂಕು ಅಂಕೋಲಾ ಇವರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ‌ ಹೊನಲು ಬೇಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಿತು.

ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಹಾಗೂ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿಯಾದ ಶ್ರೀಮತಿ ರೂಪಾಲಿ ನಾಯ್ಕ ಮಾತನಾಡಿ ಊರಿನ ಅಭಿವೃದ್ಧಿಯಲ್ಲಿ ರಾಜಕೀಯವನ್ನು ಬಳಸಿಕೊಳ್ಳಬೇಕೇ ಹೊರತು ವೈಯುಕ್ತಿಕ ವಿಚಾರಗಳಲ್ಲಿ ಅಲ್ಲ ಎಂದರು.ಯುವಕರು ಇಷ್ಟೊಂದು ಉತ್ಸುಕರಾಗಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವುದು ಖುಷಿಯ ವಿಚಾರ ಎಂದರು.

RELATED ARTICLES  ವಿಧಾನಸಭಾ ಚುನಾವಣೆಗೆ 50 ಕ್ಷೇತ್ರಗಳಲ್ಲಿ ಸಾಧು- ಸಂತರು ಸ್ಪರ್ಧಿಸಲಿದ್ದಾರೆ : ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ 

ಇಷ್ಟೇ ಉತ್ಸುಕರಾಗಿ ತಮ್ನ ಕಾಲ ಮೇಲೆ ನಿಂತು ದುಡಿದು ತಮ್ಮ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಂಡಲ್ಲಿ ನಿಮ್ಮ ಜೀವನ ಸಾರ್ಥಕ ಎಂದರು.ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಎಲ್ಲ ತಂಡಗಳನ್ನು ಹುರಿದುಂಬಿಸಿ ಧನ್ಯವಾದ ಹೇಳಿದರು.

RELATED ARTICLES  ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪರ ನಟಿ ಪೂಜಾ ಗಾಂಧಿ ಪ್ರಚಾರ