ಬೇಲೂರು, – ಶಾಸಕ ವೈ.ಎನ್. ರುದ್ರೇಶ್‍ಗೌಡರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ಶಾಸಕರ ಸ್ವಗ್ರಾಮ ಚೀಕನಹಳ್ಳಿಯ ತೋಟದ ಮನೆಯ ಹಿಂಭಾಗದಲ್ಲಿ ನೆರವೇರಿಸಲಾಯಿತು. ಶಾಸಕ ವೈ.ಎನ್.ರುದ್ರೇಶ್‍ಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಶಾಸಕರ ತೋಟದ ಮನೆಯಲ್ಲಿಯೇ ಸಾರ್ವಜನಿಕರಿಗೆ ಹಾಗೂ ಗಣ್ಯರಿಗೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯಿಂದಲೆ ಸಾವಿರಾರು ಸಂಖ್ಯೆಯಲ್ಲಿ ಅಕ್ಕಪಕ್ಕದ ಗ್ರಾಮಸ್ಥರು, ಅವರ ಅಭಿಮಾನಿಗಳು ಬಂಧುಗಳು ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಅಗಲಿದ ನಾಯಕನಿಗೆ ಕಂಬನಿ ಮಿಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೇಟಿ.:-
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಬೇಲೂರಿಗೆ ಆಗಮಿಸಿ ಶಾಸಕ ವೈ.ಎನ್ ರುದ್ದೇಶ್‍ಗೌಡರ ಅಂತಿಮ ದರ್ಶನ ಪಡೆದರು. ಮೈಸೂರಿನಿಂದ ನೇರವಾಗಿ ಬೇಲೂರಿನ ವೈ.ಡಿ.ಡಿ ಕಾಲೇಜು ಮೈದಾನದ ಹೆಲಿಪ್ಯಾಡ್‍ಗೆ ಬಂದಿಳಿದು, ಬಿಗಿ ಭದ್ರತೆಯ ನಡುವೆ ರಸ್ತೆ ಮಾರ್ಗದ ಮೂಲಕ ಕಾರಿನಲ್ಲಿ ಶಾಸಕರ ಸ್ವಗ್ರಾಮವಾದ ಚೀಕನಹಳ್ಳಿಯ ತೋಟದ ಮನೆಗೆಶ ಆಗಮಿಸಿ ಶಾಸಕರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಶ್ರದ್ದಾಂಜಲಿ ಸಲ್ಲಿಸಿದ ನಂತರ ಶಾಸಕ ವೈ.ಎನ್.ರುದ್ರೇಶ್‍ಗೌಡರ ಪತ್ನಿ, ಮಗಳು ಮತ್ತು ಸಹೋದರರೊಂದಿಗೆ ಸುಮಾರು 10 ನಿಮಿಷಗಳ ಕಾಲ ಮಾತನಾಡಿ ಅವರುಗಳಿಗೆ ದೈರ್ಯ ತುಂಭಿ ಸಾಂತ್ವಾನ ಹೇಳಿದರು.

RELATED ARTICLES  ಬಿ.ಎಸ್‌ ಯಡಿಯೂರಪ್ಪ ನಾಳೆ ಮುಖ್ಯಮಂತ್ರಿಯಾಗ್ತಾರೆ!

ಮನೆಯ ಹೊರಗೆ ಸೇರಿದ್ದ ಅಪಾರ ಜನಸ್ತೋಮ ಕಂಡು ಕೈ ಮುಗಿದ ರಾಹುಲ್ ಗಾಂಧಿ, ಸಾರ್ವಜನಿಕರತ್ತ ಧಾವಿಸಿ ಬಂದರು. ಆದರೆ ಜನರ ಗುಂಪು ರಾಹುಲ್ ಗಾಂಧಿಯವರತ್ತ ಮುಗಿಬಿದ್ದ ಕಾರಣ ಭದ್ರತಾ ಸಿಬ್ಬಂದಿಗಳು ರಾಹುಲ್ ಗಾಂದಿಯವರನ್ನು ಹಿಂದಕ್ಕೆ ಕರೆದೊಯ್ದರು. ಅಂತಿಮ ವಿಧಿವಿದಾನ ಪೂಜಾ ಕಾರ್ಯಗಳ ನಂತರ ಮೂರು ಸುತ್ತು ಕುಶಾಲು ತೋಪು ಸಿಡಿಸುವ ಮೂಲಕ ರುದ್ರೇಶ್‍ಗೌಡರ ಚಿತೆಗೆ ಅಗ್ನಿ ಸ್ಪರ್ಷ ಮಾಡಲಾಯಿತು. ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ನಾನೂ ಸಹ ಜಿಪಂ ಸದಸ್ಯನಾಗಿದ್ದ ಸಂದರ್ಭದಲ್ಲೆ ಶಾಸಕರಾದ ರುದ್ರೇಶ್‍ಗೌಡರು ಸಹ ಜಿಪಂ ಸದಸ್ಯರಾಗಿದ್ದರು. ನಂತರ ಲೋಕಸಭಾ ಸದಸ್ಯರಾಗಿ, ಎರಡು ಬಾರಿ ನಮ್ಮ ಕಾಂಗ್ರೆಸ್ ಪಕ್ಷದಿಂದ ಜನಪ್ರಿಯ ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು.

RELATED ARTICLES  ರಾಮಚಂದ್ರಾಪುರ ಮಠದ ವಿರುದ್ದದ ಪಿಐಎಲ್ ಮರು ಪರಿಶೀಲನಾ ಅರ್ಜಿಯನ್ನೂ ವಜಾಗೊಳಿಸಿದ ನ್ಯಾಯಾಲಯ

ಇವರು ಸಂಭಾವಿತ ರಾಜಕಾರಣಿ ಮತ್ತು ಉತ್ತಮ ಸ್ವಭಾವದವರಾಗಿದ್ದರು. ಇಂತಹ ಸಜ್ಜನರನ್ನು ಕಳೆದು ಕೊಂಡಿರುವುದು ನಮ್ಮ ಪಕ್ಷಕ್ಕೆ ಮತ್ತು ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಕುಟುಂಬಕ್ಕೆ ವೈ.ಎನ್.ರುದ್ರೇಶ್‍ಗೌಡರ ಸಾವಿನ ದುಃಖವನ್ನು ಬರಿಸುವ ಶಕ್ತಿ ನೀಡಲಿ ಎಂದರು. ಶಾಸಕ ವೈ.ಎನ್.ರುದ್ರೇಶ್‍ಗೌಡರ ಅಂತಿಮ ದರ್ಶನವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಲೋಕಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ,ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್, ಕರ್ನಾಟಕ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಂತಿಮ ದರ್ಶನ ಪಡೆದರು