ಕುಮಟಾ: ಉತ್ತರ ಕನ್ನಡ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಕಾರವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಿ.ಆರ್. ಎಸ್. ಹೆಲ್ತ್ ಮತ್ತು ರಿಸರ್ಚ್ ಇನ್ಸಟಿಟ್ಯೂಟ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ”ಸಾರ್ವಜನಿಕ ಆಸ್ಪತ್ರೆ ಕುಮಟಾದಲ್ಲಿ ಡಯಾಲಿಸಿಸ್ ಘಟಕವನ್ನು ಉದ್ಘಾಟಿಸಲಾಯಿತು.
ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಶೆಟ್ಟಿ
ಡಯಾಲಿಸಿಸ್ ಘಟಕವನ್ನು ಉದ್ಘಾಟಿಸಿದರು.
ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವವರ ಕುಶಲೋಪಚರಿ ವಿಚಾರಿಸಿ ಶಾಸಕರು ಮಾತನಾಡಿದರು. ಜನತೆಗೆ ಈ ಕೇಂದ್ರದ ಅಗತ್ಯತೆ ತುಂಬಾ ಇದ್ದು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು.
ಡಯಾಲಿಸಿಸ್ ಕೇಂದ್ರದ ಸದುಪಯೋಗವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಪಡೆಯುವಂತೆ ವೈದ್ಯಾಧಿಕಾರಿ ಶ್ರೀನಿವಾಸ ನಾಯಕ ವಿನಂತಿಸಿದರು.
ಈ ಸಂದರ್ಭದಲ್ಲಿ ಮಧುಸೂದನ್ ಶೇಟ್, ಅನಿತಾ ಮಾಪಾರಿ, ಸಚಿನ್ ನಾಯ್ಕ, ಮನೋಜ್ ನಾಯಕ್, ವೈದ್ಯಾಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.