ಗೋಕರ್ಣ: ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಅನುಗ್ರಹ ರೂಪದಲ್ಲಿ ಶ್ರೀ ಕ್ಷೇತ್ರ ಗೋಕರ್ಣ ಹಾಗೂ ಸುತ್ತಮುತ್ತಲಿನ ಊರುಗಳಿಗೆ ಉಚಿತವಾಗಿ ನೀರು ವಿತರಿಸುವ ತೃತೀಯ ವರ್ಷದ ಕಾರ್ಯಕ್ರಮಕ್ಕೆ ಶ್ರೀ ರಾಮನವಮಿಯ ಶುಭದಿನದಂದು ಚಾಲನೆ ನೀಡಲಾಯಿತು .

RELATED ARTICLES  ನಡೆದಾಡುವ ದೇವರು ದೇವರೆಡೆಗೆ ನಡೆದರು:ಸಿದ್ಧಗಂಗಾ ಶ್ರೀಗಳ ಒಡನಾಟ ಸ್ಮರಿಸಿದ ಶ್ರೀ ಶ್ರೀ ರಾಘವೇಶ್ವರಭಾರತೀ ಶ್ರೀಗಳು.

ಇಂದು ಗೋಕರ್ಣದ ಸಮೀಪದ ತಿಪ್ಪಸಗಿ ಗ್ರಾಮದಲ್ಲಿ ನೀರು ವಿತರಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು . ಈ ಸಂದರ್ಭದಲ್ಲಿ ವೇ. ಶಿವರಾಮ ಮಯ್ಯರ್ , ಶ್ರೀ ಮಂಗಲಮೂರ್ತಿ ಸಭಾಹಿತ – ವಕೀಲರು – ಗೋಕರ್ಣ, ಶ್ರೀ ಲಕ್ಷ್ಮಣ ಪಟಗಾರ ಬರ್ಗಿ , ಶ್ರೀ ಲಂಬೋಧರ ಸಭಾಹಿತ , ಶ್ರೀ ಜಿ ವಿ ಹೆಗಡೆ ಹಾಗೂ ತಿಪ್ಪಸಗಿ , ಕಡಿಮೆ ಗ್ರಾಮಸ್ಥರು ಉಪಸ್ಥಿತರಿದ್ದರು .

RELATED ARTICLES  ವಿದ್ಯೆಯನ್ನು ನೀಡಿದ ಶಾಲೆ ತಾಯಿಗೆ ಸಮಾನ:ವಾಮನ ರಾಮನಾಥ ಶಾನಭಾಗ

ಕಾರ್ಯಕ್ರಮವನ್ನು ಉದ್ಘಾಟಿಸಿದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಮಹಾಬಲೇಶ್ವರ ದೇವಾಲಯದ ವತಿಯಿಂದ ಜರುಗುತ್ತಿರುವ ಈ ಸಮಾಜಮುಖಿ ಯೋಜನೆಯ ಸದುಪಯೋಗ ಪಡೆಯುವಂತೆ ಕೋರಿದರು .