ನ್ಯೂಯಾರ್ಕ್: ವಾರಕ್ಕೊಮ್ಮೆ ಗ್ರಿಲ್ಡ್ ಚಿಕನ್, ರೋಸ್ಟೆಡ್ ಪಿಶ್ ತಿನ್ನುವವರಿಗೊಂದು ಆಘಾತಕಾರಿ ಸುದ್ದಿಯಿದೆ. ಅತ್ಯಧಿಕ ಉಷ್ಣಾಂಶದಲ್ಲಿ ಬೇಯಿಸಿದ ಮಾಂಸಾಹಾರವನ್ನು ಸೇವಿಸುವುದರಿಂದ ರಕ್ತದೊತ್ತಡ ಮಟ್ಟದಲ್ಲಿ ಏರಿಕೆಯಾಗುತ್ತದೆ, ಜೊತೆಗೆ ಹಲವು ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.
ತಿಂಗಳಲ್ಲಿ 15 ಬಾರಿ ಗ್ರಿಲ್ಡ್ ಚಿಕನ್, ಫಿಶ್ ಸೇವನೆ ಮಾಡಿದರೇ ಶೇ, 17 ರಷ್ಟು ರಕ್ತದೊತ್ತಡ ಪ್ರಮಾಣಏರುತ್ತದೆ ಎಂದು ಹಾರ್ವರ್ಡ್ ಅಧ್ಯಯನ ಕಂಡು ಹಿಡಿದಿದೆ.
ಅಪರೂಪಕ್ಕೆ ಈ ರೀತಿಯ ಮಾಂಸಾಹಾರ ಸೇವಿಸುವವರಿಗಿಂತ ಇವರಿಗೆ ಅಪಾಯ ಹೆಚ್ಚು ಇರುತ್ತದೆ. ಅಧಿಕ ಉಷ್ಣತೆಗೆ ಮಾಂಸಾಹಾರವನ್ನು ಒಡ್ಡಿದಾಗ ಅದರಿಂದ ಬಿಡುಗಡೆಯಾಗುವ ಪ್ರೋಟೀನ್ ನಿಂದ ರಸಾಯನಿಕ ಉತ್ಪತ್ತಿಯಾಗುತ್ತದೆ ಈ ಆಹಾರ ಪದಾರ್ಥ ಸೇವಿಸುವದರಿಂದ ಅಧಿಕ ರಕ್ತದೊತ್ತಡ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಮಾಂಸಾಹಾರದಲ್ಲಿ ಉತ್ಪತ್ತಿಯಾಗುವ ರಾಸಾಯನಿಕಗಳಿಂದ ಒತ್ತಡ, ಊರಿಯೂತ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಬೋಸ್ಟನ್ ಟಿ.ಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ವಿಭಾಗದ ಲೇಖಕರು ಹೇಳಿದ್ದಾರೆ.
ಹೀಗಾಗಿ ತೆರೆದ ಬೆಂಕಿಯಲ್ಲಿ ಮಾಂಸ ಸುಡುವುದು, ಅಧಿಕ ಉಷ್ಣಾಂಶದಲ್ಲಿ ಬೇಯಿಸುವ ಮಾಂಸಾಹಾರಗಳಿಂದ ದೂರ ಇರುವಂತೆ ಅವರು ಸಲಹೆ ನೀಡಿದ್ದಾರೆ.