ಚೆನ್ನೈ: ಮಾರ್ಚ್ 29ರಿಂದ ಏಪ್ರಿಲ್ 2ರವರೆಗೂ ಬ್ಯಾಂಕ್‌ಗಳಿಗೆ ಸತತ 5 ದಿನ ಸರಣಿ ರಜೆ ಇರುವುದಿಲ್ಲ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ.
ಮಾರ್ಚ್ 31 ಶನಿವಾರದಂದು ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಂತೆ ಬ್ಯಾಂಕ್‌ಗಳಿಗೆ ಸರಣಿ ರಜೆ ಇರುವುದಿಲ್ಲ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ ಥಾಮಸ್ ಫ್ರಾನ್ಕೋ ರಾಜೇಂದ್ರ ದೇವ್ ತಿಳಿಸಿದ್ದಾರೆ.
ಗುರುವಾರ ಮತ್ತು ಶುಕ್ರವಾರದಂದು ಮಹಾವೀರ ಜಯಂತಿ ಮತ್ತು ಗುಡ್ ಫ್ರೈಡೆ ಅಂಗವಾಗಿ ಬ್ಯಾಂಕ್‌ಗಳಿಗೆ ರಜೆ ಇದೆ. ಇದನ್ನು ಹೊರತುಪಡಿಸಿದರೆ ಬ್ಯಾಂಕ್ ಗಳಿಗೆ ತಿಂಗಳ ನಾಲ್ಕನೇ ಶನಿವಾರ ರಜೆ ಇದ್ದು, ಮಾರ್ಚ್ 31ರ ಶನಿವಾರ ಐದನೇ ಶನಿವಾರವಾಗಿರುವದರಿಂದ ಅಂದು ಬ್ಯಾಂಕ್‌ಗೆ ರಜೆ ಇರುವುದಿಲ್ಲ. ಇದಲ್ಲದೆ ಏಪ್ರಿಲ್ 2ರಂದು ವಾರ್ಷಿಕ ಖಾತೆಗಳ ಪರಿಶೀಲನೆ ನಿಮಿತ್ತ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ ಎಂದು ತಿಳಿಸಿದ್ದಾರೆ.