ಬೆಂಗಳೂರು: ರಾಜ್ಯಾದ್ಯಂತ 53 ಕೇಂದ್ರಗಳಲ್ಲಿ ಸೋಮವಾರದಿಂದ ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಿದ್ದು, ಮೊದಲ ದಿನ ಶೇ.30ರಷ್ಟು ಮೌಲ್ಯಮಾಪಕರು ಗೈರು ಹಾಜರಾಗಿದ್ದರು.

ಮೌಲ್ಯಮಾಪನಕ್ಕೆ ಒಟ್ಟು 3,773 ಉಪ ಮುಖ್ಯ ಮೌಲ್ಯಮಾಪಕರು ಹಾಗೂ 20,281 ಸಹಾಯಕ ಮೌಲ್ಯಮಾಪಕರನ್ನು ನೇಮಿಸಲಾಗಿದೆ.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 19-11-2018 ರ ರಾಶಿ ಭವಿಷ್ಯ ಇಲ್ಲಿದೆ.

ಸುಮಾರು 16,000 ಮೌಲ್ಯಮಾಪಕರು ಹಾಜರಾಗಿದ್ದಾರೆ. ಶೇ.30ರಷ್ಟು ಉಪನ್ಯಾಸಕರು ಗೈರು ಹಾಜರಾಗಿದ್ದು, ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.

RELATED ARTICLES  ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಚಾಲನೆ.

ಮೌಲ್ಯಮಾಪಕರು ಭೌತಶಾಸOಉ ವಿಷಯಕ್ಕೆ 11 ಕೃಪಾಂಕ ನೀಡಬೇಕು ಎಂದು ಭಾನುವಾರ ಒತ್ತಾಯಿಸಿದ್ದರು. ಆದರೆ, ಮೌಲ್ಯಮಾಪನ ಪರಿಶೀಲನಾ ಸಮಿತಿಯು ಈಗಾಗಲೇ ಆರು ಅಂಕ ನೀಡಿರುವುದೇ ಅಂತಿಮ ಎಂದು ಪಿಯು ಇಲಾಖೆ ಸ್ಪಷ್ಟಪಡಿಸಿದ್ದರಿಂದ ಮೌಲ್ಯಮಾಪಕರು ಮೌಲ್ಯಮಾಪನಕ್ಕೆ ಮುಂದಾಗಿದ್ದಾರೆ.