ವರದಿ :- ಎಮ್.ಎಸ್.ಶೋಭಿತ್ ಮೂಡ್ಕಣಿ
ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕೆ 1940 ವಿಲಂಬಿನಾಮ ಸಂವತ್ಸರದ ಚೈತ್ರ ಕೃಷ್ಣ ದ್ವಿತೀಯ ದಿನಾಂಕ 01.04.2018 ರವಿವಾರದಿಂದ ದಿನಾಂಕ 04.04.2018 ಬುಧವಾರದ ತನಕ ಹೊನ್ನಾವರ ತಾಲೂಕ ಹೆರಂಗಡಿ ಗ್ರಾಮದ ಕಳಿಮಠ ಶ್ರೀ ಶಂಭುಲಿಂಗೇಶ್ವರ ದೇವರ ದೇವಸ್ಥಾನವನ್ನು ನೂತನವಾಗಿ ಗ್ರಾಮಸ್ಥರ ಸಲಹೆ ಸಹಕಾರದೊಂದಿಗೆ ನಿರ್ಮಿಸಿದ್ದು, ಶ್ರೀ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವವನ್ನು ಗುರು- ಹಿರಿಯರ ಹಾಗೂ ಗ್ರಾಮಸ್ಥರ ಒಪ್ಪಿಗೆಯ ಮೇರೆಗೆ ವೇ.ಮೂ.ಶ್ರೀ ಜಯರಾಮ ಅಡಿಗಳ್ ಮುರುಡೇಶ್ವರ ಇವರ ಮುಂದಾಳತ್ವದ ಆಗಮಶಾಸ್ತ್ರದ ತಾಂತ್ರಿಕ ವಿಧಿವಿಧಾನದೊಂದಿಗೆ ಶ್ರೀ ದೇವರ ಅಷ್ಟಬಂಧ ಹಾಗೂ ಪುನರ್ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಆದ ಕಾರಣ ತಾವೆಲ್ಲರೂ ಧರ್ಮ ಭೇದ ಮರೆತು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಪ್ರಕಟಣೆ ತಿಳಿಸಿದೆ.
ಧಾರ್ಮಿಕ ಕಾರ್ಯಕ್ರಮಗಳ ವಿವರ :-
ದಿನಾಂಕ 01.04.2018 ರವಿವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಗಣೇಶ ಪೂಜೆ, ಪುಣ್ಯಾಹ, ನಾಂದಿ, ಕುಲದೇವತಾ ಸ್ಥಾಪನೆ, ಬ್ರಹ್ಮ ಕೂರ್ತ ಹವನ, ಗಣಹವನ, ಲಿಂಗಶುದ್ಧಿ ಕರ್ಮಗಳು, ಜಲಾಭಿವಾಸ.
ಆ ದಿನ ಸಂಜೆ ಗಣೇಶ ಪೂಜೆ, ಪುಣ್ಯಾಹ ಸ್ಥಾನಶುದ್ಧಿ, ಪೂರಕ ಪ್ರಸಾದ ಶುದ್ಧಿ, ರಾಕ್ಷೋಘ್ನ, ವಾಸ್ತು ಹವನ, ಬಲಿ ಮಂಟಪ ಸಂಸ್ಕಾರ, ಯಾಗಾಂಗ ಕುಂಬೇಶ ಪೂಜೆ, ಅಗ್ನಿ ಜನನ, ಅದಿವಾಸಾದಿ ಹವನ, ಸಪ್ತದಿವಾಸ ಕ್ರಿಯೆಗಳು- ಸಂಕೋಚ ಬೀಜವಾಪನ
ದಿನಾಂಕ 02.04.2018 ಸೋಮವಾರ ಬೆಳಿಗ್ಗೆ ಗಣೇಶ ಪೂಜೆ, ಪುಣ್ಯಾಹ, ಪ್ರತಿಷ್ಠಾಪನಾ, 8-14 ಘಂಟೆ ಮುಂಜಾನೆ ಶ್ರೀ ಶಂಭುಲಿಂಗೇಶ್ವರ ದೇವರ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಕಲಾವೃದ್ಧಿ ಹವನ, ನಿರೀಕ್ಷ ಪೂಜೆ, ಧ್ವಜಾರೋಹಣ, ಧ್ವಜಬಲಿ
ಆ ದಿನ ಸಂಜೆ ಭೇರಿತಾಡನ ಮುಹೂರ್ತ, ಬಲಿ, ಅಧಿವಾಸ ಹವನ
ದಿನಾಂಕ 3.04.2018 ಬೆಳಿಗ್ಗೆ ಉದಯ ಬಲಿ, ಅಧಿವಾಸ, ಪಂಚಬ್ರಹ್ಮ ಮೂರ್ತಿ ಸಾಂಕಿತ ಹವನ ಹಾಗೂ ಮಧ್ಯಾಹ್ನ ಬಲಿ ನಡೆಯಲಿದೆ.
ಆ ದಿನ ಸಂಜೆ ಗಣೇಶ ಪೂಜೆ, ಪುಣ್ಯಾಹ, ಬ್ರಹ್ಮ ಕಲಶ ಸ್ಥಾಪನೆ, ದಿಶಾಹವನ, ರಂಗಪೂಜೆ, ಬಲಿ, ಭೂತಬಲಿ,ದಂಡಬಲಿ, ಗ್ರಾಮಬಲಿ ನಡೆಯಲಿದೆ.
ದಿನಾಂಕ 04.04.2018 ಬೆಳಿಗ್ಗೆ ಗಣೇಶ ಪೂಜೆ, ಪುಣ್ಯಾಹ, ಬಲಿ, ಬ್ರಹ್ಮಕಲಶಾಭಿಷೇಕ, ಅವಶಿಷ್ಠ ಹವನ, ರುದ್ರಹವನ, ಪ್ರಾಯಶ್ಚಿತ್ತ ಶಾಂತಿ, ಹವನಗಳು, ಪೂರ್ಣಾಹುತಿ, ಪೂರ್ಣಕಲಾ ಸಾನಿಧ್ಯ, ಬ್ರಹ್ಮ ಕಲಶಾಭಿಷೇಕ, ಬಲಿ ಧ್ವಜಾ ಅವರೋಹಣ, ಪ್ರಾರ್ಥನೆ, ಮಹಾ ಅನ್ನ ಸಂತರ್ಪಣೆ, ವೈದಿಕ ಮಂತ್ರಾಕ್ಷತೆ ಹಾಗೂ ಆಶೀರ್ವಚನ ನಡೆಯಲಿದೆ.
ಶ್ರೀ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಪರವಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳು :-
ದಿನಾಂಕ 04.04.2018 ರ ರಾತ್ರಿ 8 ಗಂಟೆಯಿಂದ 9:30ರ ವರೆಗೆ “ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ” ಹಾಗೂ ರಾತ್ರಿ 10 ಗಂಟೆಯಿಂದ ಕಲಾಧರ ಯಕ್ಷರಂಗ ಬಳಗ ಇವರಿಂದ “ದಕ್ಷಯಜ್ನ” ಮತ್ತು “ಶ್ವೇತಕುಮಾರ ಚರಿತ್ರೆ “ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ವಿ.ಸೂ. :- ಸೂಕ್ತ ಸಲಹೆ ಸೂಚನೆಗಳಿಗಾಗಿ ಸಂಪರ್ಕಿಸಿ – 9448893826