ಹಾಸನ, -ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾ ಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳಲಾಗದ ಅನೇಕರಿಗಾಗಿ ಭಾನುವಾರ ಹಾಗೂ ವಿಶೇಷ ದಿನಗಳಲ್ಲಿ ಪಂಚಾಮೃತ ಅಭಿಷೇಕ ಏರ್ಪಡಿಸಲಾಗುತ್ತಿದೆ ಎಂದು ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ. ವಿಶೇಷ ಮಸ್ತಕಾಭಿಷೇಕ ನಂತರ ಮಾತನಾಡಿದ ಅವರು, ಈ ವಿಶೇಷ ಮಸ್ತಕಾಭಿಷೇಕದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಜೈನ ಭಕ್ತರು ಹಾಗೂ ಯಾತ್ರಾರ್ಥಿಗಳು ಅಭಿಷೇಕವನ್ನು ಕಣ್ತುಂಬಿಕೊಂಡರು ಎಂದರು. ಮುಂಜಾನೆ ಇಂದಲೇ ಜಲಾಭಿಷೇಕ ಜರುಗುತ್ತಿದ್ದು, ನಂತರ ಎಳನೀರು, ಇಕ್ಷುರಸ, ಕ್ಷೀರ ಕಲ್ಕಚೂರ್ಣ ಅರಿಶಿನ ಕಷಾಯ ಮುಂತಾದ ಅಭಿಷೇಕ ನೆರವೇರಿದೆ. ಜೂನ್ ತಿಂಗಳವರೆಗೆ ಭಾನುವಾರ ಹಾಗೂ ವಿಶೇಷ ದಿನಗಳಲ್ಲಿ ಅಭಿಷೇಕ ಜರುಗಲಿದೆ ಎಂದು ಹೇಳಿದರು.

RELATED ARTICLES  ಇಂದಿನ ನಿಮ್ಮ ದಿನ ಹೇಗಿದೆ ಗೊತ್ತೇ? ಇಲ್ಲಿದೆ ನೋಡಿ 09/05/2019ರ ರಾಶಿಫಲ