ಉತ್ತರ ಕನ್ನಡ: ಬಿತ್ತನೆ ಬೀಜಗಳ ಉತ್ಪಾದನೆ, ಮಾರಾಟ ಮತ್ತು ಅವುಗಳ ನಿರ್ವಹಣೆಯ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶನ ನೀಡಿದ ಶಿರಸಿಯ ವನಸ್ತ್ರೀ ಮಹಿಳಾ ಸಂಘಕ್ಕೆ ಕೇಂದ್ರ ಸರ್ಕಾರ ನಾರೀ ಶಕ್ತಿ ಪ್ರಶಸ್ತಿ ನೀಡಿ ಗೌರವಿಸಿದೆ.
ರಾಷ್ಟ್ರಪತಿ ಅವರು ವನಸ್ತ್ರೀ ಮಹಿಳಾ ಸಂಘಕ್ಕೆ ನಾರೀ ಶಕ್ತಿ ಕೇಂದ್ರ ಪ್ರಶಸ್ತಿ ನೀಡಿ ಗೌರವಿಸಿದ್ದರು. ಶಿರಸಿ ತೋಟಗಾರಿಕಾ ಇಲಾಖೆ ಸಭಾಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಂಘದ ಹಿರಿಯ ಸದಸ್ಯೆ ಗೌರಜ್ಜಿ ಮತ್ತೊಮ್ಮೆ ಪುರಸ್ಕಾರ ಸ್ವೀಕರಿಸಿದರು. ಸಂಘದ ಮಹಿಳಾ ಸದಸ್ಯೆಯರು ಸೇರಿದಂತೆ ಇತರರು ಭಾಗಿಯಾಗಿದ್ದರು. ವನಸ್ತ್ರೀ ಸಂಘದ ಚಟುವಟಿಕೆಗಳ ಬಗ್ಗೆ ಸದಸ್ಯರು ವಿವರಣೆ ನೀಡಿದರು. ಪ್ರಶಸ್ತಿ ನೀಡಿ ಗೌರವಿಸಿದಕ್ಕೆ ಸಂಘದ ಸದಸ್ಯೆಯರು ಸಂತಸಗೊಂಡರು.

RELATED ARTICLES  ಮಾತೃ ಹೃದಯದ ನಿಪುಣ ಶಾಸಕಿ “ಶಾರದಮ್ಮ”