ತಪಸ್ಯ ಕಲಾ ಸಾಹಿತ್ಯ ವೇದಿಕೆ ಕೇರಳ ಕಾಸರಗೋಡು ಜಿಲ್ಲೆ ಇವರು ಕಣ್ಣೂರು ಕಾಸರಗೋಡು ಜಿಲ್ಲೆಯ ಉತ್ತಮ ಸಾಮಾಜ ಸೇವಕ ಪ್ರಶಸ್ತಿಯನ್ನು ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ತಾಲೂಕಿನ ಪನತ್ತಡಿ ಗ್ರಾಮದ ಕೋಯತ್ತಡ್ಕ ಶ್ರೀಯುತ ಕಿಳಿಂಗಾರು ರಾಮಚಂದ್ರ ಭಟ್ ಮತ್ತು ಸಾವಿತ್ರಿ ಅಮ್ಮ ಇವರ ಪುತ್ರ ಶ್ರೀಯುತ ಸೂರ್ಯನಾರಾಯಣ ಇವರಿಗೆ ಪ್ರಧಾನ ಮಾಡಿದರು. ಕಾರ್ಯಕ್ರಮವು ತಾ. 3-6-2017 ನೇ ಶನಿವಾರ ಕಾಞಂಗಾಡು ವ್ಯಾಪಾರಿ ಭವನದಲ್ಲಿ ನಡೆಯಿತು. ಕಾಞಂಗಾಡು – ಕಾಣಿಯೂರು ರೈಲ್ವೇ ಪಾಜೆಕ್ಟ್ ಕೋರ್ಡಿನೇಶನ್ ಕಮಿಟಿಯ ಕನ್ವೀನರ್ ಆಗಿ, ಕಾಞಂಗಾಡು – ಕರಿಕ್ಕೆ – ಭಾಗಮಂಡಲ – ಮಡಿಕೇರಿ – ಮೈಸೂರು – ಚೆನೈ ರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಟ್ ನ ಕೋರ್ಡಿನೇಟರ್ ಆಗಿ, ಗೋಕರ್ಣ – ಕನ್ಯಾಕುಮಾರಿ “ಹಿಲ್ ಹೈವೇ ಪ್ರಾಜೆಕ್ಟ್ ಕಮಿಟಿ” ಸದಸ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರಕಾರದಿಂದ ಸಿಗುವ ಫಂಡ್ ಉಪಯೋಗಿಸಿ ಕೋಯತ್ತಡ್ಕ ಹರಿಜನ ಕಾಲನಿ ಅಭಿವೃದ್ಧಿ ಪಡಿಸುವಲ್ಲಿ ದುಡಿದಿರುತ್ತಾರೆ. ಚಾಮುಂಡಿಕುನ್ನು ಸರಕಾರಿ ಶಾಲಾ ಅಭಿವೃದ್ಧಿ ಸಮಿತಿಯಲ್ಲಿ ದುಡಿದು ಶಾಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿರುತ್ತಾರೆ. ಪೆರುದಡಿ ಮಹಾದೇವ ಶಿವ ಕ್ಷೇತ್ರ, ಮಾನಡ್ಕ ಮಹಾವಿಷ್ಣು ಅನ್ನಪೂರ್ಣೇಶ್ವರಿ ಕ್ಷೇತ್ರ, ಮಾಯೆತ್ತಿ ಭಗವತಿ ಕ್ಷೇತ್ರಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಸಕ್ರಿಯವಾಗಿ ದುಡಿದಿರುತ್ತಾರೆ.

RELATED ARTICLES  ವಿಶ್ವಕಪ್ ಗೆದ್ದ ಭಾರತ ಕಿರಿಯರಿಗೆ ಬಿಸಿಸಿಐ ಬಹುಮಾನ ಘೋಷಣೆ! ಯಾರಾರಿಗೆ ಎಷ್ಟೆಷ್ಟು?