ಉತ್ತರ ಕನ್ನಡ, – ಪರಿಚಯಸ್ಥರಂತೆ ಬಾಗಿಲು ತಟ್ಟಿ ಒಳ ನುಗ್ಗಿದ ಏಳು ಮಂದಿಯ ಡಕಾಯಿತರ ತಂಡ ಮನೆಯವರನ್ನೆಲ್ಲಾ ಬೆದರಿಸಿ ಹಣ, ಆಭರಣ ದೋಚಿರುವ ಘಟನೆ ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಕರ್ಕಿ ಗ್ರಾಮದ ರವಿ ಎಂಬುವರ ಮನೆಗೆ ತಡರಾತ್ರಿ ಈ ದರೋಡೆಕೋರರ ತಂಡ ಬಂದು ಬಾಗಿಲು ತಟ್ಟಿದೆ. ಪರಿಚಯಸ್ಥರೇ ಬಂದಿರಬಹುದೆಂದು ರವಿ ಅವರು ಬಾಗಿಲು ತೆಗೆಯುತ್ತಿದ್ದಂತೆ ಏಕಾಏಕಿ ಒಳ ನುಗ್ಗಿದ ದರೋಡೆಕೋರರು ಮನೆಯವರನ್ನೆಲ್ಲಾ ಮಾರಕಾಸ್ತ್ರಗಳಿಂದ ಬೆದರಿಸಿ 60 ಗ್ರಾಂ ಚಿನ್ನಾಭರಣ ಹಾಗೂ 25 ಸಾವಿರ ಹಣದೊಂದಿಗೆ ಪರಾರಿಯಾಗಿದ್ದಾರೆ. ತದನಂತರ ರವಿ ಹೊನ್ನಾವರ ಠಾಣೆ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಕುಮಾರಸ್ವಾಮಿ ಮತ್ತು ಸಿಬ್ಬಂದಿ ಶ್ವಾನದಳದೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ. ದರೋಡೆಯಿಂದಾಗಿ ಈ ಗ್ರಾಮದ ನಿವಾಸಿಗಳು ಭಯಭೀತಗೊಂಡಿದ್ದಾರೆ.

RELATED ARTICLES  ಕಾಂಗ್ರೆಸ್ ಗೆಲುವಿಗೆ ಹಿರಿಯರ ಪ್ರಚಾರ: ಕಾರ್ಯಕರ್ತರಲ್ಲಿ ಮೂಡುತ್ತಿದೆ ಗೆಲುವಿನ ಭರವಸೆ.