ಕಾರವಾರ: ಬಿಜೆಪಿ ಮುಖಂಡರಾದ ಕುಮಟಾದ ಸೂರಜ ನಾಯ್ಕ ಹಾಗೂ ಭಟ್ಕಳದ ಶಂಕರ ನಾಯ್ಕ ಇವರ ಮೇಲೆ ದುರುದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಲಾಗಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅವರಿಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿ ಜಿಲ್ಲಾ ನಾಮಧಾರಿ ಆರ್ಯಈಡಿಗ ಅಭಿವೃದ್ಧಿ ಸಂಘದವರು ಮಂಗಳವಾರ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.

ಸೂರಜ ನಾಯ್ಕ ಕುಮಟಾ ಇವರು ತಮ್ಮ ಕಾಲೇಜು ಜೀವನದಿಂದಲೂ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಗುರತಿಸಿಕೊಂಡು ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಸಮಾಜಸೇವೆಗಳನ್ನು ಜಾತಿ ಭೇದವಿಲ್ಲದೆ ಮಾಡುತ್ತ ಬಂದಿರುವ ವ್ಯಕ್ತಿಯಾಗಿದ್ದಾರೆ. ಯಾವುದೇ ರೀತಿಯ ದೌರ್ಜನ್ಯ ಅಥವಾ ದಬ್ಬಾಳಿಕೆಯನ್ನು ಮಾಡಿಲ್ಲ. ಅದೇ ರೀತಿ ಶಂಕರ ನಾಯ್ಕ ಭಟ್ಕಳ ಇವರು ದೀನದಲಿತರ ಪರ ಸಹಾಯ ಹಸ್ತ ನೀಡಿ ಅವರ ಕುಂದು ಕೊರತೆಯ ಬಗ್ಗೆ ಸ್ಪಂದಿಸುವವರಾಗಿದ್ದಾರೆ. ಆದರೆ ದುರುದ್ದೇಶ ಪೂರ್ವಕವಾಗಿ ಇವರೀರ್ವರ ಮೇಲೆ ದಾಖಲಿಸಲಾದ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಅವರಿಗೆ ನ್ಯಾಯ ದೊರಕಿಸಿ ಕೊಟ್ಟು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

RELATED ARTICLES  ಸರಸ್ವತಿ ಮಂದಿರದಲ್ಲಿ ಯೋಗಾರಾಧನ

ಈ ಸಂದರ್ಭದಲ್ಲಿ ಗಜಾನನ ಆರ್. ನಾಯ್ಕ ಅಂಕೋಲಾ, ಸೋಮೇಶ್ವರ ನಾಯ್ಕ ಯಲ್ಲಾಪುರ, ವಾಸು ನಾಯ್ಕ ಭಟ್ಕಳ,ಹರೀಶ ನಾಯ್ಕ ಬಂಕಿಕೊಡ್ಲ, ನವೀನ ನಾಯ್ಕ ಭಟ್ಕಳ, ದಿವಾಕರ ನಾಯ್ಕ ಕುಮಟಾ ಮುಂತಾದವರು ಹಾಜರಿದ್ದರು.

RELATED ARTICLES  ಹೊನ್ನಾವರ ತಾಲೂಕಿನಲ್ಲಿ ಕೊರೋನಾ ಏರಿಕೆ..!