ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಯು ಘೋಷಣೆಯಾಗಿದ್ದು ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ತಲಾ ಒಂದು ತಂಡ ಹಾಗೂ ಕಂಟ್ರೋಲ್ ರೂಂ ನ್ನು ತೆರೆಯಲಾಗಿದೆ.
ಚುನಾವಣೆ ಸಂಧರ್ಭದಲ್ಲಿ ಅನಧೀಕೃತವಾಗಿ ಗೋವಾ ರಾಜ್ಯದ ಮದ್ಯ, ಫೆನ್ನಿ, ಕಳ್ಳಭಟ್ಟಿ ಸರಾಯಿ, ನಕಲಿ ಸರಾಯಿ ಮುಂತಾದವುಗಳನ್ನು ದಾಸ್ತನು ಮಾಡಿ ವಿತರಿಸುವಂತಹ ಅಕ್ರಮಗಳನ್ನು ತಡೆಗಟ್ಟಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು.
ಜಿಲ್ಲಾ ನಿಯಂತ್ರಣ ಕೊಠಡಿಯನ್ನು ಉಪ ವಿಭಾಗ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದು ದಿನದ 24 ಗಂಟೆಯು ಜಿಲ್ಲಾ ಕೊಠಡಿಯ ದೂರವಾಣಿ ಸಂಖ್ಯೆ 08382-227094 ಕಾರ್ಯ ನಿರ್ವಹಿಸುತ್ತದೆ. ಜಿಲ್ಲೆಯ ಮುಖ್ಯಸ್ಥರಾಗಿ ಜಿಲ್ಲಾ ಅಬಕಾರಿ ಡೆಪ್ಯೂಟಿ ಕಮೀಷನರ್ ಆಪ್ ಎಕ್ಸೈಜ್ ಮಂಜುನಾಥ ವಿ ಅರೆಗುಳಿ ದೂರವಾಣಿ ಸಂಖ್ಯೆ 9449597116 ಕಾರ್ಯ ನಿರ್ವಹಿಸಲಿದ್ದಾರೆ.
ತಾಲೂಕ ತಂಡಗಳ ಮುಖ್ಯಸ್ಥರುಗಳಾಗಿ ಅಬಕಾರಿ ನಿರೀಕ್ಷಕರನ್ನು ನೇಮಿಸಲಾಗಿದೆ, ಕಾರವಾರ ವಲಯ ದಾಮೋದರ ಎನ್ ನಾಯ್ಕ 08382-228751, 9449955896, ಅಂಕೋಲಾ ವಲಯ ಆರ್. ಎನ್ ನಾಯ್ಕ 08388-230440, 9448818540, ಕುಮುಟಾ ವಲಯ ಶ್ರೀಧರ ಮಡಿವಾಳ 08386-220367, 9739251199, ಹೊನ್ನಾವರ ವಲಯ ಶ್ರೀಮತಿ 08387-222806, 9901320012, ಭಟ್ಕಳ ವಲಯ ಶುಭದಾ ಸಿ ನಾಯಕ 08385-222235, 9731860034, ಶಿರಸಿ ವಲಯ ಡಿ. ಎನ್ ಸಿರ್ಸಿಕರ 08389-230127, 9448738261, ತಹಶೀಲ್ದರ ಕಚೇರಿ ಸಿದ್ದಾಪುರ (ಸಿರ್ಸಿ ವಲಯ) ಮಹೇಂದ್ರ ಎಸ್ ನಾಯ್ಕ 08384-224168, 9449596122, ಯಲ್ಲಾಪುರ ವಲಯ ಗಣೇಶ ಎಸ್ ನಾಯ್ಕ 08419-261510, 9449597125, ತಹಶೀಲ್ದರ ಕಚೇರಿ ಮುಂಡಗೋಡ ಎಂ. ವಿ. ಜೋಗಳೇಕರ 08301-222122, 9845514353, ದಾಂಡೇಲಿ ವಲಯ ಜಿ. ವಿ. ವೈದ್ಯ 08284-232805, 9845758871, ತಹಶೀಲ್ದರ ಕಚೇರಿ ಜೋಯಿಡಾ ಮಂಜುಕುಮಾರ ನಾಯಕ 08383-282723, 9535213157 ನ್ನು ದೂರುಗಳಿದ್ದಲ್ಲಿ ಸಂಪರ್ಕಿಸಬುದಾಗಿದೆ ಎಂದು ಡೆಪ್ಯೂಟಿ ಕಮೀಷನರ್ ಆಪ್ ಎಕ್ಸೈಜ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.