ಹೊನ್ನಾವರ: ಲಿಂಗಾಯತ ಸಮಾಜಕ್ಕೆ ಮೀಸಲಾತಿ ನೀಡುವ ನಿರ್ಣಯವು ಕಾಂಗ್ರೆಸ್‍ನ `ಒಡೆದು ಆಳುವ ನೀತಿ’
ಮುಂಬರುವ ಚುನಾವಣೆಯನ್ನು ಕಣ್ಣೆದುರಿಗೆ ಇಟ್ಟುಕೊಂಡು ಕರ್ನಾಟಕ ಸರಕಾರ ರಾಜ್ಯದಲ್ಲಿನ ಲಿಂಗಾಯತ ಸಮಾಜಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವ ನಿರ್ಣಯ ತೆಗದುಕೊಂಡಿದೆ. ಆ ರೀತಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ನಿರ್ಣಯವನ್ನು ಮಾರ್ಚ್ 19 ರಂದು ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ವಾಸ್ತವದಲ್ಲಿ ಶೈವರು ಮತ್ತು ವೈಷ್ಣವರು ಹಿಂದೂ ಧರ್ಮದ ಮೂಲಭೂತ ಅಂಗಗಳಾಗಿದ್ದಾರೆ. ಅವತಾರಿ ಕಾರ್ಯ ಮಾಡುವ ಮತ್ತು ಆಧ್ಯಾತ್ಮಿಕ ಉನ್ನತ ಸಂತರೇ ಧರ್ಮಸಂಸ್ಥಾಪನೆಯ ಕಾರ್ಯ ಮಾಡಬಲ್ಲರು. ಆದುದರಿಂದ ಆ ರೀತಿ ನಿರ್ಣಯ ತೆಗೆದುಕೊಳ್ಳುವ ಅಧಿಕಾರವೇ ರಾಜಕಾರಣ ಗಳಿಗಿಲ್ಲ. ಕಾಂಗ್ರೆಸ್ ಆ ರೀತಿ ಮಾಡಿ ಹಿಂದೂ ಧರ್ಮವನ್ನು ಒಡೆಯುವ ಸಂಚು ರೂಪಿಸುತ್ತಿದೆ. ಮೂಲದಲ್ಲಿ ಲಿಂಗಾಯತ ವೀರಶೈವರು ಹಿಂದೂ ಧರ್ಮದ ಅಂಗವಾಗಿದ್ದಾರೆ.

RELATED ARTICLES  ಚಿನ್ನಾಭರಣ ಹಾಗೂ ನಗದು ದೋಚಿದ ಕಳ್ಳರು..!

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ವಿಷಯವನ್ನು ವೀರಶೈವ ಧರ್ಮಗುರುಗಳು ತೀವ್ರವಾಗಿ ವಿರೋಧಿಸಿದ್ದಾರೆ. ದೇಶಾದ್ಯಂತದ ವೀರಶೈವ-ಲಿಂಗಾಯತ ಸಮಾಜವನ್ನು ಪ್ರತಿನಿಧಿಸುವ ಅಖಿಲ ಭಾರತೀಯ ವೀರಶೈವ ಮಹಾಸಭಾವು ಇದನ್ನು ವಿರೋಧಿಸಿದೆ. `ಮಹಾತ್ಮಾ ಬಸವೇಶ್ವರರ ಹೆಸರಿನಲ್ಲಿ ಧರ್ಮವನ್ನು ಒಡೆಯುವುದು ಯೋಗ್ಯವಲ್ಲ’, ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧ ಪಂಡಿತಾರಾಧ್ಯರು ಹೇಳಿದ್ದಾರೆ. ರಂಭಾಪುರಿ ಮತ್ತು ಕಾಶಿ ಜಗದ್ಗುರುಗಳು ಸಹ ಇದನ್ನು ವಿರೋಧಿಸಿದ್ದಾರೆ. ವಾಸ್ತವದಲ್ಲಿ ಲಿಂಗಾಯತ ಈ ಶಬ್ದವೇ ಧರ್ಮವಾಚಕವಲ್ಲ. ಅದು ಒಂದು ದೀಕ್ಷಾಸಂಸ್ಕಾರವಾಗಿದೆ.

2013 ರಲ್ಲಿ ಅಂದಿನ ಕಾಂಗ್ರೆಸ್‍ನ ಕೇಂದ್ರ ಸರಕಾರವು ಇದೇ ರೀತಿಯ ಪ್ರಸ್ತಾಪವನ್ನು ತಿರಸ್ಕರಿಸಿತ್ತು. ಅದೇ ಕಾಂಗ್ರೆಸ್ ಸರಕಾರ ಈಗ ಕೇವಲ ಮತಗಳ ರಾಜಕಾರಣಕ್ಕಾಗಿ ಸ್ವತಂತ್ರ ಲಿಂಗಾಯತ ಧರ್ಮದ ನಿರ್ಣಯ ತೆಗೆದುಕೊಳ್ಳುತ್ತಿದೆ. ಲಿಂಗಾಯತ ಸಮಾಜಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಿದರೆ ನಾಳೆ ಇನ್ನೂ ಕೆಲವು ಸಮಾಜವು ಸ್ವತಂತ್ರ ಧರ್ಮದ ಬೇಡಿಕೆಯನ್ನಿಟ್ಟರೆ ಮತ್ತು ಆ ರೀತಿ ಆದರೆ ಹಿಂದೂ ಸಮಾಜಯ ಐಕ್ಯತೆ ಅಪಾಯಕ್ಕೊಳಗಾಗುವುದು ಮತ್ತು ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುವುದು !s ಭಗವಾನ ಶಿವನ ಉಪಾಸನೆ ಮಾಡುವ ಭಕ್ತರು ಎರಡು ಬೇರೆ ಬೇರೆ ಧರ್ಮದವರಾಗಿರಲು ಹೇಗೆ ಸಾಧ್ಯ. ಒಂದೇ ಉಪಾಸ್ಯ ದೇವತೆಯಾಗಿರವ ಭಕ್ತರಲ್ಲಿ ದೇವರು ಭೇದ ಮಾಡುವುದಿಲ್ಲ, ಹಾಗಾದರೆ ರಾಜಕಾರಣ ಗಳು ಏಕೆ ಹೀಗೆ ಮಾಡುತ್ತಿದ್ದಾರೆ ?ಹಾಗಾಗಿ ಕರ್ನಾಟಕದ ಕಾಂಗ್ರೆಸ್ ಸರಕಾರದಿಂದ `ಲಿಂಗಾಯತ’ ಸಮಾಜಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವ ನಿರ್ಣಯ ರದ್ದುಗೊಳಿಸಬೇಕೆಂಬ ಬೇಡಿಕೆಯನ್ನು , ಈ ಸಮಯದಲ್ಲಿ ಬುಧವಾರದಂದು ಹೊನ್ನಾವರದ ತಹಶೀಲದಾರರ ಕಛೇರಿಯಲಿ ಸೌ. ವಾಸಂತಿ ಮುರ್ಡೇಶ್ವರ ಇವರು ಮಾತನಾಡಿದರು.

RELATED ARTICLES  ಸಿದ್ದಾಪುರದಲ್ಲಿ ಸಿಕ್ಕಿಬಿದ್ದರು ಶಾಲಾ ಸಿಲೆಂಡರ್ ಕಳ್ಳರು!

ಈ ಸ್ಥಳದಲ್ಲಿ ಆಂದೋಲನದ ಮೂಲಕ ಮಾಡಲಾಯಿತು. ಈ ಸಂಧರ್ಭದಲ್ಲಿ ಸೌ ಮೋಹಿನಿ ಸೇಡ, ಸೌ ಪಾರ್ವತಿ ಭಟ್, ಸೌ ನೇತ್ರಾವತಿ ಮೇಸ್ತ, ಇತರರು ಉಪಸ್ಥಿತರಿದ್ದರು.