ನವದೆಹಲಿ: ಗ್ರಾಹಕರ ಮಾಹಿತಿ ಕದ್ದ ಸೈಬರ್‌ ವಂಚಕರು 1,020 ಬ್ಯಾಂಕ್‌ ಖಾತೆಗಳಿಂದ ಹಣ ಪಡೆದ ಘಟನೆಗಳು ನಡೆದಿವೆ ಎಂದು ಲೋಕಸಭೆಗೆ ಮಾಹಿತಿ ನೀಡಲಾಗಿದೆ.

‘ಸರ್ಕಾರಿ ಮತ್ತು ಖಾಸಗಿ ವಲಯದ 13 ಬ್ಯಾಂಕ್‌ಗಳಿಗೆ ಸೇರಿದ 351 ಬ್ಯಾಂಕ್‌ ಶಾಖೆಗಳಲ್ಲಿನ ಖಾತೆಗಳಿಗೆ ಆನ್‌ಲೈನ್‌ನಲ್ಲಿ ಕನ್ನ ಹಾಕಿ ವಂಚನೆ ಎಸಗಿರುವ ಬಗ್ಗೆ ದೂರುಗಳು ದಾಖಲಾಗಿವೆ’ ಎಂದು ಐ.ಟಿ ರಾಜ್ಯ ಸಚಿವ ಕೆ. ಜೆ. ಅಲ್ಫನ್ಸ್‌ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

RELATED ARTICLES  ಸೀಬರ್ಡ ಬಸ್ ಚಾಲಕನಿಗೆ ಥಳಿತ

ಸೈಬರ್‌ ಅಪರಾಧಿಗಳು ಗ್ರಾಹಕರ ಹೆಸರು, ರಹಸ್ಯ ಸಂಖ್ಯೆ, ಕ್ರೆಡಿಟ್‌ ಕಾರ್ಡ್‌ ವಿವರಗಳನ್ನು ಅಕ್ರಮವಾಗಿ ಪಡೆದುಕೊಂಡು ಈ ವಂಚನೆ ಎಸಗಿದ್ದಾರೆ. ಬ್ಯಾಂಕ್‌ ಹೆಸರಿನಲ್ಲಿ ನಕಲಿ ಇ–ಮೇಲ್‌ ಅಥವಾ ಎಸ್‌ಎಂಎಸ್‌ ಕಳಿಸಿ ಮಾಹಿತಿ ಪಡೆದು (ಫಿಶ್ಶಿಂಗ್) ವಂಚಿಸಲಾಗಿದೆ.

ಡಿಜಿಟಲ್‌ ಪಾವತಿ ಸೇವೆ ಒದಗಿಸುವ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಸೈಬರ್‌ ಸುರಕ್ಷತೆಗೆ ಬೆದರಿಕೆ ಒಡ್ಡಿದ ಇಂತಹ ಘಟನೆಗಳನ್ನು ಭಾರತೀಯ ಕಂಪ್ಯೂಟರ್‌ ತುರ್ತು ಪ್ರತಿಕ್ರಿಯಾ (ಸಿಇಆರ್‌ಟಿ–ಇನ್‌) ತಂಡಕ್ಕೆ ವರದಿ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.

RELATED ARTICLES  ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ.

ಸೈಬರ್‌ ಸುರಕ್ಷತೆಗೆ ಸಂಬಂಧಪಟ್ಟಂತೆ ಆಗುವ ಬೆಳವಣಿಗೆಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಕಾಲಕಾಲಕ್ಕೆ ಪರಾಮರ್ಶಿಸಲಿದೆ. ಈ ಮೂಲಕ ಬ್ಯಾಂಕ್‌ಗಳ ಸೈಬರ್‌ ದಾಳಿ ನಿಯಂತ್ರಿಸುವ ಕಾರ್ಯಕ್ಷಮತೆ ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಚಿವರು ಹೇಳಿದ್ದಾರೆ.