ಮಲಪ್ಪುರಂ, -ಕರ್ನಾಟಕ ಹಾಸನದಿಂದ ಕೇರಳಕ್ಕೆ ಹೋಗುತ್ತಿದ್ದ ಸ್ಫೋಟಕ ತುಂಬಿದ ಲಾರಿಯನ್ನು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಲಾರಿ ಮತ್ತು ಸ್ಪೋಟಕಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹಾಸನದಿಂದ ಸ್ಫೋಟಕಗಳನ್ನು ತುಂಬಿದ್ದ ಲಾರಿ ಕೇರಳದ ಕೋಳಿಕೋಡ್‍ಗೆ ತೆರಳುತ್ತಿತ್ತು. ಮೊಂಗಾಮ್ ಪ್ರದೇಶದಲ್ಲಿ ಪೊಲೀಸರು ಕರ್ನಾಟಕ ನೋಂದಣಿ ಇದ್ದ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಅದರಲ್ಲಿ ಸ್ಫೋಟಕಗಳು ಪತ್ತೆಯಾದವು. ಈ ಸರಕಿಗೆ ಸಂಬಂಧಪಟ್ಟಂತೆ ಸೂಕ್ತ ದಾಖಲೆಯನ್ನು ಲಾರಿಯಲ್ಲಿದ್ದವರು ಒದಗಿಸಿಲ್ಲ. ಆರೋಪಿಗಳಿಬ್ಬರನ್ನು ಬಂಧಿಸಿ 10,000 ಡಿಟೊನೇಟ್‍ಗಳು, 3,700 ಕೆಜಿ ಜಿಲೆಟಿನ್ ಕಡ್ಡಿಗಳು ಹಾಗೂ 213 ಸುರಳಿ ಪ್ಯೂಸ್ ವೈರ್‍ಗಳನ್ನು ವಶಪಡಿಸಕೊಳ್ಳಲಾಗಿದೆ.