ಗೋಕರ್ಣ: ಪ ಪೂ ಶ್ರೀ ಶ್ರೀ ನಾಗೇಶ್ವರ ಚೈತನ್ಯ ಮಹಾಸ್ವಾಮಿಗಳು, ಸಿದ್ಧಾರೂಢಮಠ , ಗೋಕಾಕ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 445ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

RELATED ARTICLES  ಉತ್ತರ ಕನ್ನಡ ಜಿಲ್ಲೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಚಾರ ಸದನದಲ್ಲಿ ರೂಪಾಲಿ ನಾಯ್ಕ ಪ್ರಶ್ನೆ ಗೆ ಅವಕಾಶ ನೀಡದ ಕಾಗೇರಿ- ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಖಂಡನೆ

ಆರಕ್ಷಕ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿಗಳಾದ ಶ್ರೀ ಶಿವಕುಮಾರ್ ಶಿವಮೊಗ್ಗ ಇವರು ಶ್ರೀ ದೇವಾಲಯದ ಪರವಾಗಿ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಮತ್ತು ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ರಾಮಚಂದ್ರ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು .

RELATED ARTICLES  The full story of Thailand’s extraordinary cave rescue