ಮುಂಬೈ,ಮಾ.29-ಷೇರು ಮಾರಾಟ ನಿಯಮ ಉಲ್ಲಂಘನೆ ಮಾಡಿರುವುದಕ್ಕಾಗಿ ದೇಶದ ಪ್ರಮುಖ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 58.9 ಕೋಟಿ ದಂಡ ವಿಧಿಸಿದೆ. 2018ರ ಮಾ. 26ರ ತನ್ನ ಆದೇಶದಂತೆ ಐಸಿಐಸಿಐ ಬ್ಯಾಂಕ್‍ಗೆ 589 ದಶಲಕ್ಷ ಡಾಲರ್(58.9ಕೋಟಿ) ದಂಡ ಹಾಕಿರುವುದಾಗಿ ನೋಟಿಫಿಕೇಶನ್‍ನಲ್ಲಿ ತಿಳಿಸಿದೆ. ಇದು ಯಾವುದೇ ಗ್ರಾಹಕರ ಒಪ್ಪಂದಗಳಿಗಾಗಲಿ ದೂರುಗಳಿಗಾಗಲಿ ಈ ದಂಡ ವಿಧಿಸಿಲ್ಲ. ಕೇವಲ ಷೇರು ಮಾರಾಟ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ ಎಂದು ಆರ್‍ಬಿಐ ಸ್ಪಷ್ಟಪಡಿಸಿದೆ.