ಕಾರವಾರ:ಭಾರತೀಯ ನೌಕಾದಳ ಕದಂಬ ನೌಕಾ ನೆಲೆಯ ಅಧಿಕಾರಿಗಳು ಸಾಮಾಜಿಕ ಕಾರ್ಯಕ್ರಮದಡಿ ತಾಲೂಕಿನ ಚಿತ್ತಾಕುಲ ದೇವಭಾಗ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ನವೀಕರಣಗೊಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವು ಸಾಮಾಜಿಕ ಕಾರ್ಯಕ್ರಮದಡಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ನಿರ್ಮಿಸುವು ಉದ್ದೇಶದಿಂದ ನೌಕಾನೆಲೆ ಅಧಿಕಾರಿಗಳು ಶ್ರಮದಾನ ಕಾರ್ಯಕ್ರಮ ಮೂಲಕ ಶಾಲೆಯ ದುರಸ್ಥಿಯನ್ನು ಸರಿ ಪಡಿಸಿಸಲು ಸಹಕರಿಸಿದ್ದಾರೆ.
ಸುಮಾರು 2.9 ಲಕ್ಷ ಹಣವನ್ನು ಅಧಿಕಾರಿವರ್ಗ, ಸಿಬ್ಬಂದಿ, ಹಾಗೂ ಕುಟುಂಬಸ್ಥರ ಸಹಾಯದಿಂದ ಶಾಲೆಯ ಮೇಲ್ಚಾವಣೆ, ಕಂಪೌಂಡ, ಬಣ್ಣ, ಟ್ಯೂಬ್ ಲೈಟ್, ಲೈಬ್ರರಿ, ನೀರಿನ ಟ್ಯಾಂಕ್, ಪ್ಯಾನ್ ಹೀಗೆ ಇತರ ಸಾಮಗಿಗಳನ್ನು ನೀಡುವುದರ ಮೂಲಕ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ನೌಕಾದಳದ ಎಡ್ಮೀರಲ್ ಜನರಲ್ ಕೆ. ಜೆ. ಕುಮಾರ ಅವರು ಶಾಲೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿ ವರ್ಷದಂತೆ ಈ ಶಾಲೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾದ ಸಂದರ್ಭದಲ್ಲಿ ಈ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಪಣತೊಟ್ಟು ಜನೆವರಿ 22 ರಂದು ನವೀಕರಣದ ಕಾಮಗಾರಿಯನ್ನು ಪ್ರಾರಂಭಿಸಲಾಯಿತು. ಕೇವಲ ಎರಡು ತಿಂಗಳ ಅವಧಿಯಲ್ಲಿ ನೌಕಾ ನೆಲೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಸ್ವತಃ ತಾವೇ ನಿಂತು ಶಾಲೆಯ ದುರಸ್ಥಿ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ. ಇದು ನಮಗೆ ಹೆಮ್ಮೆ ಮತ್ತು ಹರ್ಷ ತರುವಂತಹ ವಿಷಯವಾಗಿದೆ ಎಂದರು.
ಶಾಲೆಯಯಲ್ಲಿ ಒಟ್ಟು 133 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಶಾಲೆಗೆ ನೀಡಿದ ಸೌಕರ್ಯ ಹಾಗೂ ಹೊಸ ರೂಪದಿಂದ ಮಕ್ಕಳ ಭವಿಷ್ಯ ಮತ್ತು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನೂಕೂಲಕರವಾಗಲಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ. ಕೆ. ಪ್ರಕಾಶ ಸೇರಿದಂತೆ ನೌಕಾ ನೆಲೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಶಾಲೆಯ ಶಿಕ್ಷಕರು ಇದ್ದರು.