ಯಲ್ಲಾಪುರ: ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ನೇತ್ರತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪಟ್ಟಣದ ವೆಂಕಟ್ರಮಣ ಮಠದ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ನೂರಾರು ಜನ ಯೋಗ ಮಾಡುವುದರ ಮೂಲಕ `ಅಂತರಾಷ್ಟ್ರೀಯ ಯೋಗ ದಿನಾಚರಣೆ’ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಶ್ರೀರಂಗ.ವೆಂ.ಕಟ್ಟಿ ಮಾತನಾಡಿ, ವಿಶ್ವಾಧ್ಯಂತ ಯೋಗ ದಿನಾಚರಣೆ ಆಚರಿಸುವ ಮೂಲಕ ಭಾರತ ತನ್ನ ಸಂಸ್ಕøತಿ ಮೌಲ್ಯದ ಮೂಲಕ ಜಗತ್ತಿಗೆ ಗುರುವಿನ ಸ್ಥಾನ ಪಡೆದುಕೊಂಡಿದೆ, ಯೋಗದ ಬಗ್ಗೆ ಜಾಗತೀಕ ಮಟ್ಟದಲ್ಲಿ ಜಾಗೃತಿ ಮೂಡಿಸುವಲ್ಲಿ ಬಾಬಾ ರಾಮದೇವ ಕೊಡುಗೆ ಪ್ರಮುಖವಾದುದು ಎಂದ ಅವರು ಯೋಗ ನಮ್ಮ ದಿನ ನಿತ್ಯದ ಕರ್ತವ್ಯವಾಗಬೇಕು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಹಶೀಲ್ದಾರ ಡಿ.ಜಿ.ಹೆಗಡೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ, ದಾಕ್ಷಾಯಣಿ ಹೆಗಡೆ, ಹೋಲಿ ರೋಝರಿ ಚರ್ಚಿನ ಫಾದರ್ ಬೆನ್ಸನ್ ಫರ್ನಾಂಡಿಸ್, ಅಧ್ಯಕ್ಷತೆ ವಹಿಸಿದ್ದ ವಿದ್ವಾನ ನಾರಾಯಣ ಭಟ್ಟ ಮೊಟ್ಟೆಪಾಲ ಕಾರ್ಯಕ್ರಮದ ಮಾತನಾಡಿದರು
ವೈಟಿಎಸ್‍ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಜಾನನ ಭಟ್, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ, ವಕೀಲರ ಸಂಘದ ಅಧ್ಯಕ್ಷ ಎನ್.ಕೆ.ಭಾಗ್ವತ, ನಿವೃತ್ತ ತೆರಿಗೆ ನಿರೀಕ್ಷಕ ಶಬ್ಬಿರ ಶೇಖ್, ಸಾಮಾಜಿಕ ಕಾರ್ಯಕರ್ತ ಬಾಬಾಸಾಬ ಆಲನ್ ವೇದಿಕೆಯಲ್ಲಿದ್ದರು.
ತಾಲೂಕಾ ಯೋಗ ವಿಸ್ತಾರಕರಾದ ಸುಬ್ರಾಯ ಭಟ್ ಹಾಗೂ ದಿವಾಕರ ಮರಾಠಿ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ಅಧ್ಯಕ್ಷ ಜಿ.ಎಸ್.ಭಟ್ಟ ಹಳವಳ್ಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ದಿವಾಕರ ಮರಾಠಿ ನಿರೂಪಿಸಿದರು. ಕೊನೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಮದ್ಗುಣಿ ವಂದಿಸಿದರು.