ಬೆಂಗಳೂರು: ಚುನಾವಣಾ ಸಂಬಂಧಿತ ಎಲ್ಲ ಮಾಹಿತಿ ಪಡೆಯಲು ಹಾಗೂ ದೂರುಗಳನ್ನು ಸಲ್ಲಿಸಲು ಬೆಂಗಳೂರು ನಗರ ಜಿಲ್ಲಾಡಳಿತವು ಕಂದಾಯ
ಭವನದಲ್ಲಿ ಸಹಾಯವಾಣಿ ಕೇಂದ್ರ ತೆರೆದಿದೆ.
ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ನೇತೃತ್ವದಲ್ಲಿ ಗುರುವಾರ ಇದಕ್ಕೆ ಚಾಲನೆ ನೀಡಲಾಯಿತು. ಆನೇಕಲ್, ಬೆಂಗಳೂರು ದಕ್ಷಿಣ, ಮಹದೇವಪುರ, ಬ್ಯಾಟರಾಯನಪುರ, ಯಲಹಂಕ, ದಾಸರಹಳ್ಳಿ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟ ದೂರುಗಳನ್ನು ಸಾರ್ವಜನಿಕರು ಇಲ್ಲಿ ಸಲ್ಲಿಸಬಹುದು.

ದಿನದ 24 ಗಂಟೆಗಳೂ ಈ ಕೇಂದ್ರ ಕಾರ್ಯನಿರ್ವಹಿಸಲಿದೆ. ಪ್ರತಿ ಪಾಳಿಯಲ್ಲಿ ಮೂವರು ಸಿಬ್ಬಂದಿ ಇರಲಿದ್ದು, ಅವರಿಗೆ ಕಂಪ್ಯೂಟರ್ ಹಾಗೂ ಸ್ಥಿರ ದೂರವಾಣಿಗಳನ್ನು ಒದಗಿಸಲಾಗಿದೆ. ಮೂರು ದೊಡ್ಡ ಟಿ.ವಿಗಳನ್ನು ಕೇಂದ್ರದಲ್ಲಿ ಅಳವಡಿಸಲಾಗಿದೆ.

RELATED ARTICLES  ದ್ರುವ ನಾರಾಯಣ ಪತ್ನಿ ವೀಣಾ ನಿಧನ

‘ಸಾರ್ವಜನಿಕರು ದೂರು ಸಲ್ಲಿಸಿದ ಕೂಡಲೇ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ. ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ದೂರುಗ
ಳಿಗೆ ಸ್ಪಂದಿಸುತ್ತಾರೆ’ ಎಂದು ಸಹಾಯವಾಣಿ ಕೇಂದ್ರದ ಅಧಿಕಾರಿಗಳು ತಿಳಿಸಿದರು.

ಸಹಾಯವಾಣಿ ಸಂಖ್ಯೆ: 080–22211157 ಹಾಗೂ 18004250138.

ವಲಯ ಅಧಿಕಾರಿ ನೇಮಕ: ಪ್ರತಿ 20 ಮತಗಟ್ಟೆಗಳಿಗೆ ಒಬ್ಬ ಸೆಕ್ಟರ್ ಅಧಿಕಾರಿಯನ್ನು ನೇಮಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಹಾಗೂ ಇವಿಎಂಗಳ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡುವುದು ಅವರ ಜವಾಬ್ದಾರಿ.

ಸಂಚಾರ ದಳ: ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ ಆರು ಸಂಚಾರ ದಳಗಳನ್ನು ರಚಿಸಿ ವಾಹನಗಳನ್ನು ನೀಡಲಾಗಿದೆ. ಚುನಾವಣಾ ನಿರ್ವಹಣಾ ಕೊಠಡಿಯಿಂದ ಅವುಗಳನ್ನು ನಿರ್ವಹಿಸಲಾಗುತ್ತದೆ.ಅವುಗಳ ನಿರ್ವಹಣೆಗೆ ಚುನಾವಣಾ ಆಯೋಗ ಪ್ರತ್ಯೇಕ ಅಪ್ಲಿಕೇಶನ್ ಅಭಿವೃದ್ಧಿ ಪಡಿಸುತ್ತಿದೆ. ಪೊಲೀಸರು ಹಾಗೂ ಅಬಕಾರಿ ಅಧಿ

RELATED ARTICLES  ಅರಿವು~ಆಕಾಶ ಮನೋವಿಕಾಸ ಕಾರ್ಯಾಗಾರ

ಕಾರಿಗಳು ಅನುಮಾನಾಸ್ಪದ ವಾಹನಗಳನ್ನು ತಪಾಸಣೆ ಮಾಡಲಿದ್ದಾರೆ. ಅದಕ್ಕಾಗಿ ಹಲವೆಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಒಬ್ಬ ಸಹಾಯಕ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅವರು ಎಲ್ಲ ಟಿವಿಗಳು ಹಾಗೂ ಪತ್ರಿಕೆಗಳ ಮೇಲೆ ನಿಗಾ ಇಡುತ್ತಾರೆ. ನಿಯಮ ಉಲ್ಲಂಘಿಸಿ ಜಾಹೀರಾತು ನೀಡಿದ್ದು ಕಂಡುಬಂದರೆ ನೋಡಲ್ ಅಧಿಕಾರಿಗಳ ಗಮನಕ್ಕೆ ತರಲಿದ್ದಾರೆ ಎಂದು ದಯಾನಂದ್‌ ತಿಳಿಸಿದರು.