ಕುಮಟಾ: ಶ್ರೀ ಬೀರದೇವ ಗೆಳಯರ ಬಳಗ ಗೋಕರ್ಣ ಇವರ ಆಶ್ರಯದಲ್ಲಿ ಹಾಲಕ್ಕಿ ಸಮಾಜದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು ಕಡಿಮೆಯ ಆಡುಕಟ್ಟೆ ಮೈದಾನದಲ್ಲಿ ದಿನಾಂಕ: 29/3/18 ರಂದು ಜರುಗಿತು.

ಈ ಕಾರ್ಯಕ್ರಮವನ್ನು ಬಿ.ಜೆ.ಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಅತ್ಯುತ್ತಮ ಸಂಘಟನೆಯೊಂದಿಗೆ ಅತ್ಯಂತ ಅಚ್ಚುಕಟ್ಟಾಗಿ ಈ ವಾಲಿಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಕ್ರೀಡೆಗಳು ಮಾನವನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಉತ್ತಮ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಏಕಾಗ್ರತೆಯನ್ನು ನೀಡುತ್ತವೆ ಅಲ್ಲದೆ ಇಂತಹ ಪಂದ್ಯಾವಳಿ ಹಮ್ಮಿಕೊಳ್ಳುವುದರಿಂದ ಸ್ಥಳೀಯ ಕ್ರೀಡಾಪಟುಗಳಿಗೆ ಸೂಕ್ತ ಅವಕಾಶ ಒದಗಿಸಿದಂತಾಗುತ್ತದೆ. ಕ್ರೀಡೆಯ ಕುರಿತು ಜನರಲ್ಲಿ ಆಸಕ್ತಿ ಬೆಳೆಸಿದಂತಾಗುತ್ತದೆ. ಯಾವುದೇ ಒಂದು ಸಮುದಾಯ ಮುಂದುವರಿಯಬೇಕಾದರೆ ಆ ಸಮುದಾಯದಲ್ಲಿ ಸದೃಢ ಸಂಘಟನೆಯನ್ನು ಹೊಂದಿರಬೇಕು. ಹಾಗೂ ಶೈಕ್ಷಣ ಕವಾಗಿ, ಸಾಮಾಜಿಕವಾಗಿ, ಸಾಂಸ್ಕøತಿಕ, ಕ್ರೀಡಾ ಹಾಗೂ ರಾಜಕೀಯವಾಗಿ ಮುಂದುವರಿದಾಗ ಮಾತ್ರ ಆ ಸಮುದಾಯವು ಸಮಾಜದ ಮುಖ್ಯವಾಹಿನಿಗೆ ಬರಲು ಸಾದ್ಯವಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಸಹ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಸಲಹೆ ನೀಡಿದರು. ಹಾಗೂ ಶ್ರೀ ಬೀರದೇವ ಗೆಳೆಯರ ಬಳಗದ ಕಾರ್ಯವನ್ನು ಶ್ಲಾಘಿಸಿದರು.

RELATED ARTICLES  ನೆನಪಿನ ಚೌಕಟ್ಟಿನಲ್ಲಿ ಸೇರಿ ಹೋದ ಚೌಪದಿ ಸರದಾರ ವಿಡಂಬಾರಿ ಸರ್.

ಜಿ. ಪಂ ಸದಸ್ಯರಾದ ಪ್ರದೀಪ ನಾಯಕ ದೇವರಬಾವಿ ಅವರು ಅಂಕಣ ಉದ್ಘಾಟಿಸಿ ತಂಡಗಳಿಗೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಕೃಷ್ಣ ಜೆ. ಗೌಡ ಅವರು ಮಾತನಾಡಿ ಪಂದ್ಯಾವಳಿಯ ಸಂಘಟನೆಯ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು.

RELATED ARTICLES  ಅಂಕೋಲಾದಲ್ಲಿ ಬೈಕ್ ಅಪಘಾತ

ಈ ಸಂದರ್ಭದಲ್ಲಿ ಉದ್ದಿಮೆದಾರರಾದ ಪ್ರವೀಣ ಆಚಾರ್ಯ, ಜನಾರ್ಧನ ಪಟಗಾರ, ಅರುಣ ಗೌಡ, ಆನಂದು ಕವರಿ, ವೆಂಕಟರಮಣ ಕವರಿ, ಮನೋಹರ ಗೌಡ, ವೆಂಕಣ್ಣ ಗೌಡ, ವಾಮನ ವಿ. ಗೌಡ, ಬೀರಪ್ಪ ಜೆ. ಗೌಡ, ಶ್ರೀಮತಿ ರಾಮಿ ಗೌಡ, ಸಂತೋಷ ಗೌಡ, ನಾಗೇಂದ್ರ ಗೌಡ, ಮುಂತಾದವರು ಉಪಸ್ಥಿತರಿದ್ದರು.