ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ರೋಟರಿ ಪ್ರಾಯೋಜಿತ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಡೆಸಲಾಯಿತು. ಯೋಗ ಪಟು ಎಲ್.ಎನ್. ಅಂಬಿಗ ವಿವಿಧ ಯೋಗಾಸನಗಳನ್ನು ಪ್ರತ್ಯಕ್ಷವಾಗಿ ಬೋಧಿಸಿದರು. 282 ವಿದ್ಯಾರ್ಥಿಗಳಿಗೆ ಬೆಳಗಿನ ಕಾಲಾವಧಿಯಲ್ಲಿ ಏಕಕಾಲದಲ್ಲಿ ತರಗತಿ ಏರ್ಪಡಿಸಾಯಿತು. ಮುಖ್ಯ ಶಿಕ್ಷಕ ಹಾಗೂ ರೋಟರಿ ಕಾರ್ಯದರ್ಶಿ ಎನ್.ಆರ್.ಗಜು ಯೋಗ ಶಿಕ್ಷಣದ ಮಹತ್ವವನ್ನು ಸಾರಿದರಲ್ಲದೇ, ಓದು ಹಾಗೂ ಏಕಾಗ್ರತೆ ಸಿದ್ಧಿಗಾಗಿ ಯೋಗ ತೀರ ಸಹಾಯಕವಾದುದೆಂದು ಅಭಿಪ್ರಾಯಪಟ್ಟರು. ಎಲ್ಲ ಶಿಕ್ಷಕರೂ ಯೋಗ ತರಬೇತಿಯಲ್ಲಿ ಕ್ರೀಯಾಶೀಲರಾಗಿ ಪಾಲ್ಗೊಂಡರು. ಶಿಕ್ಷಕ ಎಸ್.ಪಿ.ಪೈ ಸಹಕರಿಸಿದರು.