ಕುಮಟಾ :ತಾಲೂಕಿನ ಹಿರೆಗುತ್ತಿಯ ಎಣ್ಣೆಮಡಿಯ ಶ್ರೀ ವಿಠೋಬ ದೇವ ಯುವಕ ಸಂಘದ ಆಶ್ರಯದಲ್ಲಿ 16ನೇ ವರ್ಷದ ಜಿಲ್ಲಾಮಟ್ಟದ ಹೊನಲು ಬೆಳಕಿನ ಎಸ್.ಸಿ ಸಮಾಜದ ಕಬ್ಬಡಿ ಪಂದ್ಯಾವಳಿಯು ಹಿರೆಗುತ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಯಶಸ್ವಿಯಾಗಿ ಜರುಗಿತು.
ಈ ಕಾರ್ಯಕ್ರಮವನ್ನು ಬಿ.ಜೆ.ಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕಬಡ್ಡಿ ಕ್ರೀಡೆಯು ಗ್ರಾಮೀಣ ಸೊಗಡಿನ ದೆಶೀಯ ಕ್ರೀಡೆಯಾಗಿದೆ. ಈ ಕ್ರೀಡೆಯಲ್ಲಿ ಒಗ್ಗಟ್ಟು, ಚುರುಕುತನ, ಏಕಾಗ್ರತೆ ಜೊತೆಗೆ ದೈಹಿಕ ಸದೃಢತೆಯೂ ಕೂಡ ಅತ್ಯಗತ್ಯವಾಗಿದೆ. ಇಂತಹ ಕ್ರೀಡಾ ಚಟುವಟಿಕೆಗಳು ಹೆಚ್ಚೆಚ್ಚು ಜರುಗಿದಾಗ ಯುವ ಪಿಳಿಗೆಯಲ್ಲಿ ಈ ಕ್ರೀಡೆಯ ಕುರಿತು ಆಸಕ್ತಿ ಬೆಳೆಯುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಕ್ರೀಡೆ ಉಳಿಯಲು, ಬೆಳೆಯಲು ಸಾಧ್ಯವವಾಗುತ್ತದೆ. ಎಸ್.ಸಿ. ಸಮಾಜದವರು ಒಗ್ಗಟ್ಟಾಗಿ ಉತ್ತಮ ಸಂಘಟನೆಯೊಂದಿಗೆ ಈ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ. ಈ ಸಮಾಜದವರು ಇಂತಹ ಸಂಘಟನೆಗಳ ಮೂಲಕ ತಮ್ಮ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಹೋರಾಡಬೇಕು ಹಾಗೂ ಇಂತಹ ಸಂಘಟನೆಗಳು ಕೂಡ ಕೇವಲ ಕಾರ್ಯಕ್ರಮಗಳ ಆಯೋಜನೆಗೆ ಮಾತ್ರ ಸೀಮಿತವಾಗಿರದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಉದ್ಯಮಿ ಆನಂದು ಕವರಿ ಅವರು ಕ್ರೀಡಾಂಗಣ ಉದ್ಘಾಟಿಸಿ ಶುಭ ಹಾರೈಸಿದರು.
ಬಿಜೆಪಿ ಪ್ರಮುಖರಾದ ರಾಮು ಕೆಂಚನ್ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಅಚ್ಚುಕಟ್ಟಾಗಿ ಪಂದ್ಯಾವಳಿಯನ್ನು ಆಯೋಜಿಸಿದ ಶ್ರೀ ವಿಠೋಬದೇವ ಯುವಕ ಸಂಘದ ಕಾರ್ಯ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ ಸೋಮಯ್ಯ ಹಳ್ಳೇರ, ಶ್ರೀಮತಿ ಭವಾನಿ ಗಣಪತಿ ಹಳ್ಳೇರ, ಶ್ರೀ ಗಣಪತಿ ಪೊಕ್ಕಾ ಹಳ್ಳೇರ, ಶ್ರೀ ನಾರಾಯಣ ಜೋಗಿ ಹಳ್ಳೇರ, ಶ್ರೀ ಸುಬ್ಬು ರೋಪಾ ಹಳ್ಳೇರ, ಪ್ರಶಾಂತ ಶಂಭು ಹಳ್ಳೇರ, ಕೃಷ್ಣ ಈಶ್ವರ ಹಳ್ಳೇರ, ಮಂಜು ಬೀರಪ್ಪ ಹಳ್ಳೇರ, ರಮಾಕಾಂತ ರಾಜು ಹಳ್ಳೇರ, ನಾರಾಯಣ ಜೋಗಿ ಹಳ್ಳೇರ ಮುಂತಾದವರು ಉಪಸ್ಥಿತರಿದ್ದರು.