ಉತ್ತರ ಕನ್ನಡ: ರಾಜ್ಯಾದ್ಯಂತ ಮೇ 12ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಎಲ್ಲಾ ಜಿಲ್ಲೆಯಲ್ಲಿ ಚುನಾವಣಾ ತಯಾರಿ ಕೂಡಾ ನಡೀತಿದೆ. ಪ್ರತಿಯೊಬ್ಬ ವ್ಯಕ್ತಿಯೂ ಮತದಾನ ಮಾಡಬೇಕು. ಅದು ಪ್ರತಿಯೊಬ್ಬರ ಹಕ್ಕು ಎನ್ನುವ ನಿಟ್ಟಿನಲ್ಲಿ ಇಂದು ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಪ್ಯಾರಾ ಮೋಟಾರು ಡ್ರೈವಿಂಗ್ ಮೂಲಕ ಜಾಗೃತಿ ಮೂಡಿಸಲಾಯಿತು.

RELATED ARTICLES  ಕುಮಟಾ ತಾಲೂಕು 6 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ.

ಮೇ 12ರಂದು ತಪ್ಪದೆ ಮತದಾನ ಮಾಡಿ ಎನ್ನುವ ಬ್ಯಾನರ್ ಅಳವಡಿಸಿ, ಜಿಲ್ಲೆಯ ಜನತೆಗೆ ಮತದಾನ ಜಾಗೃತಿ ಮೂಡಿಸುವ ಪ್ರಯತ್ನವನ್ನ ಜಿಲ್ಲಾಡಳಿತ ನಡೆಸಿತು.

RELATED ARTICLES  ಅಘನಾಶಿನಿ ನದಿಗೆ ಬಿದ್ದು ಯುವಕ ಸಾವು.

ಇದೇ ವೇಳೆ ಅಂಗವಿಕಲರಿಗೆ ಪ್ಯಾರಾ ಮೋಟಾರು ಡ್ರೈವಿಂಗ್ ಮಾಡಿಸಿ ಇವರ ಮೂಲಕ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಯಿತು. ಮೊಟ್ಟ ಮೊದಲಬಾರಿಗೆ ಕಾರವಾರ ಜಿಲ್ಲೆಯಲ್ಲಿ ಇಂತಹ ಒಂದು ವಿನೂತನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಮಾಡಿದ್ದು ಜನರ ಸ್ಪಂದನೆಯನ್ನು ನಿರೀಕ್ಷಿಸುತ್ತಿದೆ.