ತುಮಕೂರು. ಏ.01 : ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಶ್ರೀಗಳಿಗೆ ಭಾನುವಾರ ವಾದ ಇಂದು 111ನೇ ಹುಟ್ಟುಹಬ್ಬ ಆಚರಿಸಿಕೊಂಡರು . ಈ ಸಂಭ್ರಮಾಚರಣೆಯನ್ನು ತುಮಕೂರು ಸೇರಿದಂತೆ ನಾಡಿನ ಜನತೆ ಹಬ್ಬದ ರೀತಿ ಆಚರಿಸಿದರು. ಈಗಾಗಲೇ ನಗರಾದ್ಯಂತ ಬಂಟಿಂಗ್, ಬ್ಯಾನರ್‍ಗಳು ರಾರಾಜಿಸುತ್ತಿವೆ. ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಮುಹೂರ್ತ ನಿಗದಿ ಯಾದ ಪರಿಣಾಮ ನೀತಿ ಸಂಹಿತೆ ಜಾರಿಯಾಗಿದೆ. ಶ್ರೀಯವರ 111 ನೇ ಜನ್ಮದಿನೋತ್ಸವ ಮತ್ತು ಗುರುವಂದನಾ ಮಹೋತ್ಸವಕ್ಕೆ ದೇಶದ ನೆಚ್ಚಿನ ಪ್ರಧಾನ ಮಂತ್ರಿ ಗಳಾದ ನರೇಂದ್ರ ಮೋದಿ ಯವರು ಚಾಲನೆ ನೀಡ ಬೇಕಿತ್ತು.
ಇಂದು ಬೆಳಿಗ್ಗೆ ನೆಡೆಯುವ ಕಾರ್ಯಕ್ರಮಕ್ಕೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ದಿವ್ಯ ಸಾನಿದ್ಯ ವಹಿಸಿದರೆ ಉದ್ಘಾಟನೆಯನ್ನು ಮೈಸೂರಿನ ಸುತ್ತೊರು ವೀರಸಿಂಹಾಸನ ಮಠಾಮಠಾಧಿಪತಿ ಗಳಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು. ಸಮ್ಮುಖದಲ್ಲಿ ಆದಿಚುಂಚನಗಿರಿ ಮಠದ ಅಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ವಹಿಸಿದರೆ ಅಧ್ಯಕ್ಷತೆಯನ್ನು ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರುಘಾ ಶರಣರು ವಹಿಸಿದ್ದರೆ ಬೆಂಗಳೂರು ಬೇಲಿ ಮಠದ ಶಿವರುದ್ರಸ್ಶಾಮಿಜಿಗಳು ಕನಕಪುರ ದೇಗುಲ ಮಠದ ಶ್ರೀ ಮಮ್ಮಡಿ ನಿರ್ವಾಣ ಸ್ವಾಮೀಜಿಗಳು ತುಮಕೂರು ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಬಾಗವಹಿಸಿದ್ದರೆ…ವೇದಿಕೆಯಲ್ಲಿ ಎಲ್ಲಾ ಸ್ವಾಮೀಜಿಗಳು ಸಿದ್ದಗಂಗಾ ಮಠದ ನೆಡೆದಾಡುವ ದೇವರು ಎಂದೇ ಖ್ಯಾತಿ ಪಡೆದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಕಲ್ಲು ಮುಳ್ಳಿನ ದಾರಿಯಲ್ಲಿ ನೆಡೆದು ಮಠಕ್ಕೆ ಹಾಗೂ ಒಬ್ಬ ಖಾವಿ ತೂಟ್ಟವ ಸ್ವಾಮೀಜಿ ಹೇಗೆ ಇರ ಬೇಕು ಎಂದು ಜಗತ್ತಿಗೆ ತೋರಿಸಿ ಕೊಟ್ಟ ಮಹಾನ್ ಚೇತನ ಎಂದು ಬಣ್ಣಿಸಿದರು…ವೇದಿಕೆಯಲ್ಲಿ ನೆರೆದಿದ್ದ ಲಕ್ಷಾಂತರ ಮಂದಿ ಬಕ್ತರಿಗೆ ಆಶೀರ್ವಾದ ಮಾಡಲೂ ವೀಲ್ ಚೇರ್ ವ್ಯವಸ್ಥೆ ಮಾಡಿದ್ದರು ವೀಲ್ ಚೇರ್ ನಲ್ಲಿ ಸ್ವಾಮಿಜಿಗಳನ್ನು ಕಂಡು ಬಕ್ತರು ಹರ್ಷ ವ್ಯಕ್ತಪಡಿಸಿದರು ಫುಷ್ವಗಳನ್ನು ಸ್ವಾಮೀಜಿ ಅವರ ಮೇಲೆ ಎಸೆದು ಭಕ್ತಿ ಸಮರ್ಪಿಸಿದರು..ಶ್ರೀಯವರುನ್ನು ನೋಡುವುದೇ ಒಂದು ವೈಬೋಗ ವಾಗಿತ್ತು..