ಭಟ್ಕಳ: ಇಲ್ಲಿನ ಶಿರಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವಿಚಾರವಾಗಿ ಹಲವಾರು ದಿನಗಳಿಂದ ಸಾರ್ವಜನಿಕರು 45 ಮೀ. ಅಗಲೀಕರಣವಾಗಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿದ್ದು, ಆದರೆ ಈ ಬಗ್ಗೆ ಸಾರ್ವಜನಿಕರ ಮನವಿಗೆ ಜಿಲ್ಲಾಡಳಿತದ ನಿರ್ಲಕ್ಷ ತೋರಿದ್ದು ಹೆದ್ದಾರಿ ಪ್ರಾಧಿಕಾರವು ಶಿರಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಕೇವಲ 30 ಮೀ. ಅಗಲೀಕರಣಕ್ಕೆ ಮುಂದಾಗಿದ್ದ ಪರಿಣಾಮ ಸಾರ್ವಜನಿಕರು ಶಿರಾಲಿ ಪಂಚಾಯತಗೆ ಘೇರಾವ್ ಹಾಕಿದ್ದಾರೆ.

ಶಿರಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು 45ಮೀ. ಅಗಲೀಕರಣ ಮಾಡಬೇಕು ಎಂದು ಸಾರ್ವಜನಿಕರು ಈ ಹಿಂದೆ ಸಾಕಷ್ಟು ಬಾರಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಆದರೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಇಲ್ಲಿನ ಖಾಸಗಿ ವ್ಯಕ್ತಿಗಳಿಂದ ತಮ್ಮ ಕಟ್ಟಡವನ್ನು ಉಳಿಸುವ ಸಲುವಾಗಿ ರಸ್ತೆ ಅಗಲೀಕರಣವನ್ನು 30 ಮೀ. ನಿಲ್ಲಿಸುವಂತೆ ಮನವಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಮನವಿಯಂತೆ 45 ಮೀ. ಅಗಲೀಕರಣ ಮಾಡಬೇಕೆಂದರೆ ಮನವಿ ನೀಡಿದ ಖಾಸಗಿ ವ್ಯಕ್ತಿಗಳಿಂದ ಎನ್.ಒ.ಸಿಯನ್ನು ತರಬೇಕು ಇಲ್ಲವಾದಲ್ಲಿ ರಸ್ತೆಯನ್ನು 30 ಮೀ. ಸ್ಥಿಮಿತಗೊಳಿಸಲಾಗುತ್ತದೆ ಎಂದು ನಿರ್ಲಕ್ಷದ ಹೇಳಿಕೆ ನೀಡಿದ್ದಾರೆ. ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಲಾಬಿಗೆ ಬಿದ್ದು ಸಾರ್ವಜನಿಕರನ್ನು ಸತಾಯಿಸುವ ಕೆಲಸ ಮಾಡುತ್ತಿದ್ದಾರೆಂಬ ನೇರ ಆರೋಪ ಸಾರ್ವಜನಿಕರದ್ದಾಗಿದೆ.

RELATED ARTICLES  ಕಾಂಗ್ರೆಸ್ ಗೆ ಬಲನೀಡಲು ಒಂದಾಗಿ ಬಂದ ಯುವ ಪಡೆ: ಪ್ರೀತಿಯಿಂದ ಅವರನ್ನು ಬರಮಾಡಿಕೊಂಡ ರವಿಕುಮಾರ ಶೆಟ್ಟಿ.

ಪಂಚಾಯತಗೆ ಸಾರ್ವಜನಿಕರು ಘೇರಾವ್ ಹಾಕಿದ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರು ಸ್ಥಳಕ್ಕೆ ಪ್ರಭಾರಿ ತಹಸೀಲ್ದಾರ ಅವರನ್ನು ಕಳುಹಿಸಿದ್ದು ಘಟನೆಯ ಬಗ್ಗೆ ಪರಿಶೀಲಿಸಿದ ತಹಸೀಲ್ದಾರರು ಸಾರ್ವಜನಿಕರಲ್ಲಿ ಒಂದು ದಿನದ ಸಮಯಾವಕಾಶ ಕೋರಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವದಾಗಿ ಸಾರ್ವಜನಿಕರಿಗೆ ಭರವಸೆಯನ್ನು ನೀಡಿದ್ದಾರೆ. ನಂತರ ಸಾರ್ವಜನಿಕರು ತಮ್ಮೆಲ್ಲರ ಒಕ್ಕೊರಲ ಅಭಿಪ್ರಾಯ ಹೇಳಿದ್ದು, ಒಂದು ದಿನದ ಗಡುವಿನಲ್ಲಿ ಶಿರಾಲಿಯ ಈ ರಸ್ತೆ ಸಮಸ್ಯೆಯನ್ನು ಪರಿಹರಸಿದಿದ್ದಲ್ಲಿ ಇಲ್ಲಿನ ಎಲ್ಲಾ ಸಾರ್ವಜನಿಕರು, ಸ್ಥಳಿಯರು ರಸ್ತೆಗಿಳಿದು ಬೃಹತ್ ರಸ್ತೆ ತಡೆನಡೆಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ತಿಳಿಸಿದರು. ಇತ್ತ ಕಡೆ ಇಷ್ಟೆಲ್ಲ ನಡೆಯುತ್ತಿದ್ದು ಪರಿಹಾರ ಕೋರಿ ಬಂದ ಸಾರ್ವಜನಿಕರ ಸಮಸ್ಯೆ ಕೇಳಲು ಪಂಚಾಯತ್ ಅಧ್ಯಕ್ಷ ಮಾತ್ರ ಯಾರ ಸಂಪರ್ಕಕ್ಕೂ ಸಿಗಲಿಲ್ಲವಾಗಿದೆ.

RELATED ARTICLES  ಕೇಬಲ್ ಹೊಂಡದಲ್ಲಿ ಬಿದ್ದ ಆಕಳನ್ನು ರಕ್ಷಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು

ಈಗಾಗಲೇ ಶಿರಾಲಿಯಲ್ಲಿ ರಸ್ತೆ ಅಪಘಾತ ಅಧಿಕವಾಗಿದ್ದು, ಶಿರಾಲಿ ಪೇಟೆ ಭಾಗದಲ್ಲಿ ಪಾದಚಾರಿಗಳಿಗೆ ರಸ್ತೆ ದಾಟುವುದು ದುಸ್ಥರವಾಗಿದೆ. ರಸ್ತೆ 30 ಮೀ. ನಿಗದಿಯಾದರೆ ಮುಂದಿನ ದಿನಗಳಲ್ಲಿ ಅಪಘಾತದ ಪ್ರಮಾಣ ಇನ್ನೂ ಹೆಚ್ಚಾಗಲಿದ್ದು, ಸಾವು ನೋವುಗಳ ಸಂಖ್ಯೆಯಲ್ಲು ಏರಿಕೆಯಾಗಲಿವೆ ಎಂದು ಭೀತಿ ಸಾರ್ವಜನಿಕರದ್ದಾಗಿದೆ. ಶಿರಾಲಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನು ಸರ್ವಿಸ್ ರಸ್ತೆಯಿಲ್ಲದೇ 45 ಮೀ. ಬದಲಾಗಿ 30ಮೀ. ಅಗಲೀಕರಣ ಮಾಡುವುದರಿಂದ ಸ್ಥಳಿಯ ಸಾರ್ವಜನಿಕರಿಗೆ ಅನೇಕ ಸಮಸ್ಯೆ ತಲೆದೋರಲಿದ್ದು, ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ಮಕ್ಕಳು ಹಾಗು ವೃದ್ದರು ಪರದಾಡುವ ಪರಿಸ್ಥಿತಿ ಎದುರಾಗಲಿವೆ. ಇಲ್ಲಿನ ಚಿಕ್ಕ ಪುಟ್ಟ ವ್ಯಾಪಾರಸ್ಥರಿಗೆ, ಆಟೋ ಚಾಲಕರಿಗೆ, ಸ್ಥಳಿಯ ಟೆಂಪೋಗಳ ನಿಲುಗಡೆಗೆ ಸಮಸ್ಯೆಯಾಗಲಿವೆ. ಅದರಲ್ಲೂ ವಾಹನ ಪಾರ್ಕಿಂಗ್‍ಗಳ ಸ್ಥಳಾವಕಾಶಕ್ಕೂ ಸಮಸ್ಯೆಯಿದ್ದು, ವ್ಯಾಪಾರಸ್ಥರ ಹೊಟ್ಟೆಗೆ ತಣ್ಣಿರು ಬಟ್ಟೆಯೇ ಗತಿಯಾಗಲಿವೆ.