ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಇಂದು 111ನೇ ಜನ್ಮ ದಿನ. ಶ್ರೀಗಳು ತಮ್ಮ 111ನೇ ವಯಸ್ಸಿನಲ್ಲೂ ಯುವಕರಂತೆ ಉತ್ಸಾಹದಿಂದಲೇ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಿದ್ದಗಂಗಾ ಮಠದ ಎಲ್ಲಾ ಕೆಲಸ ಕಾರ್ಯಗಳ ಬಗ್ಗೆ ಖುದ್ದು ಮುತುವರ್ಜಿ ವಹಿಸುತ್ತಾರೆ. ಶ್ರೀಗಳ ದಿನಚರಿ ಹೇಗಿರುತ್ತೆ ಅನ್ನೋದನ್ನ ನೋಡಿದ್ರೆ ಯುವಕರೂ ನಾಚಬೇಕು.
ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ದಿನಚರಿ
ಬೆಳಗಿನ ಜಾವ 5.30ಕ್ಕೆ ಶ್ರೀಗಳು ಏಳುತ್ತಾರೆ
ಬೆಳಗ್ಗೆ 6 ಗಂಟೆಗೆ ಸ್ನಾನ ನಂತರ ಬೆಳಗ್ಗೆ 8 ಗಂಟೆವರೆಗೂ ಇಷ್ಟಲಿಂಗ ಪೂಜೆ, ಧ್ಯಾನ, ಸಂಕಲ್ಪ, ರುದ್ರಾಕ್ಷಿ ಜಪ ಮಾಡುತ್ತಾರೆ
ಪೂಜೆ ಮುಗಿದ ಬಳಿಕ ಬೆಳಗಿನ ಉಪಹಾರ ಸೇವಿಸುತ್ತಾರೆ
ಒಂದೂವರೆ ಇಡ್ಲಿ, ಹೆಸರು ಬೇಳೆ, ಪಲ್ಯ, ಅರ್ಧ ಲೋಟ ಬೇವಿನ ಕಷಾಯ ಬಳಿಕ ಅರ್ಧ ಲೋಟ ನೀರಿನ ಜೊತೆ ಒಂದು ಮಾತ್ರೆ
ಬೆಳಗ್ಗೆ 8.30ಕ್ಕೆ ಮಠದ ಕಚೇರಿಗೆ ತೆರಳಿ ಬೆಳಗ್ಗೆ 9 ಗಂಟೆವರೆಗೂ ಭಕ್ತರಿಗೆ ದರ್ಶನ
ಬೆ. 9 ಗಂಟೆಗೆ ಹಳೇ ಮಠಕ್ಕೆ ವಾಪಸ್ಸಾಗಿ 10 ಗಂಟೆಯವರೆಗೂ ವಿಶ್ರಾಂತಿ
ಬೆ. 10 ಗಂಟೆಯಿಂದ 11.30ರವರೆಗೂ ಪ್ರಸಾದ ನಿಲಯದಲ್ಲಿ ಭಕ್ತರಿಗೆ ದರ್ಶನ
ಬೆ. 11.30ಕ್ಕೆ ಹಳೇ ಮಠಕ್ಕೆ ವಾಪಸ್ ಆಗುತ್ತಾರೆ. ಸ್ನಾನ ಮಾಡಿ ಮಧ್ಯಾಹ್ನ 12 ಗಂಟೆಯಿಂದ 12.45ರವರೆಗೂ ಪೂಜೆ
ಬಳಿಕ ಸ್ವಲ್ಪ ಅನ್ನ, ಸಾರು, ಹಣ್ಣಿನ ರಸ, ಅರ್ಧ ಲೋಟ ನೀರು ಇದಿಷ್ಟು ಮಧ್ಯಾಹ್ನದ ಭೋಜನ
ಮ. 12.45ರಿಂದ 1 ಗಂಟೆವರೆಗೆ 15 ನಿಮಿಷಗಳ ಕಾಲ ಹಳೇ ಮಠದಲ್ಲಿ ಭಕ್ತರಿಗೆ ದರ್ಶನ
ಮ. 1 ಗಂಟೆಯಿಂದ 2.30ರವರೆಗೆ ವಿಶ್ರಾಂತಿ
ಮ. 2.30ರಿಂದ ಸಂಜೆ 4 ಗಂಟೆವರೆಗೆ ಪ್ರಸಾದ ನಿಲಯದಲ್ಲಿ ಭಕ್ತರಿಗೆ ದರ್ಶನ
ಸಂಜೆ 4ಕ್ಕೆ ಹಳೇ ಮಠಕ್ಕೆ ಆಗಮಿಸುತ್ತಾರೆ
ಸಂಜೆ 5 ಗಂಟೆವರೆಗೂ ಸ್ನಾನ, ಸರಳ ಪೂಜೆ, ಸ್ವಲ್ಪ ಅನ್ನ, ಸ್ವಲ್ಪ ಮುದ್ದೆ ಸೇವನೆ. ಅರ್ಧ ಲೋಟ ಮಜ್ಜಿಗೆ, ಅರ್ಧ ಲೋಟ ನೀರು ಕುಡಿಯುತ್ತಾರೆ
ಸಂ. 5ರಿಂದ 6 ಗಂಟೆವರೆಗೂ ಶ್ರೀಗಳ ಕಚೇರಿಯಲ್ಲಿ ಭಕ್ತರಿಗೆ ದರ್ಶನ
ಸಂ. 6 ರಿಂದ 6.45ರವರೆಗೂ ವಿಶ್ರಾಂತಿ
ಸಂ. 6.45ರಿಂದ 7.30ರವರೆಗೆ ಹಳೇ ಮಠದಲ್ಲಿ ಸಾರ್ವಜನಿಕರಿಗೆ ದರ್ಶನ
ರಾತ್ರಿ 7.30ರಿಂದ 8.30ರವರೆಗೆ ವಿಶ್ರಾಂತಿ
ರಾತ್ರಿ 8.30ರಿಂದ 9 ಗಂಟೆವರೆಗೂ ಹೇಳ ಮಠದಲ್ಲಿ ಭಕ್ತರಿಗೆ ದರ್ಶನ
ರಾತ್ರಿ 9 ರಿಂದ 10.30ರವರೆಗೂ ಸ್ನಾನ, ಶಿವಪೂಜೆ, ಪ್ರಸಾದ. ಪ್ರಸಾದದಲ್ಲಿ ಒಂದು ಖಾಲಿ ದೋಸೆ, ಚಟ್ನಿ, ಅರ್ಧ ಲೋಟ ನೀರು, ಒಂದು ಮಾತ್ರೆ
ರಾತ್ರಿ 10.30ರಿಂದ ವಿಶ್ರಾಂತಿ ಪಡೆಯುತ್ತಾರೆ
ಇದಲ್ಲದೆ ಶ್ರೀಗಳು ಭಕ್ತರಿಗೆ ದರ್ಶನ ಕೊಡುವ ವೇಳೆ ದಿನಪತ್ರಿಕೆ ಮತ್ತು ಪುಸ್ತಕಗಳನ್ನ ಓದುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ದಿನಪತ್ರಿಕೆಗಳನ್ನ ಕಡಿಮೆ ಓದುವ ಶ್ರೀಗಳು, ಡಾ. ರಾಧಾಕೃಷ್ಣನ್, ಸ್ವಾಮಿ ವಿವೇಕಾನಂದ, ಬಸವಣ್ಣರ ಗ್ರಂಥ ಮತ್ತು ವಚನಗಳನ್ನ ಹೆಚ್ಚಾಗಿ ಓದುತ್ತಾರೆ.
ಇನ್ನು, ಮಠಕ್ಕೆ ಸಂಬಂಧಿಸಿದ 125 ವಿದ್ಯಾ ಸಂಸ್ಥೆಗಳಿವೆ. ಇಲ್ಲಿ ಸಾವಿರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಮಠದಲ್ಲೇ 9 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣವನ್ನ ಪಡೆಯುತ್ತಿದ್ದಾರೆ. ಅಲ್ಲದೆ 200 ಹಸುಗಳನ್ನ ಪಾಲನೆ ಮಾಡಲಾಗುತ್ತಿದೆ. ಇದೆಲ್ಲದರ ಬಗ್ಗೆಯೂ ಶ್ರೀಗಳು ಖುದ್ದು ಮುತುವರ್ಜಿ ವಹಿಸುತ್ತಾರೆ.