ಕುಮಟಾ: ಯಕ್ಷಗಾನ ಸಂಶೋಧನಾ ಕೇಂದ್ರದ(ರಿ) ಕುಮಟಾ ವತಿಯಿಂದ ತಾಲೂಕಿನ ಹವ್ಯಕ ಸಭಾ ಭವನದಲ್ಲಿ ನಡೆದ ಏಳು ದಿನದ ಸಾಂಸ್ಕೃತಿಕ ಸಂಭ್ರಮ ಕೊನೆಯ ದಿನ ಶೇಣಿ ಶತಮಾನೋತ್ಸವ ಸಂಸ್ಮರಣೆ ತಾಳಮದ್ದಲೆ ಸರಣಿಯ ೧೦೦ ನೇ ತಾಳಮದ್ದಲೆ ನಡೆಯಿತು.

ಈ ಸಂದರ್ಭದಲ್ಲಿ ಶೇಣಿ ರಾಮಾಯಣ ಶೇಣಿ ಭಾರತಗಳನ್ನು ಬರೆಯುವುದರ ಜೊತೆಗೆ ಶೇಣಿಯವರ ಕುರಿತು ಅಪಾರ ಕೆಲಸಗಳನ್ನು ಮಾಡಿದ ಡಾ.ಜಿ.ಎಲ್.ಹೆಗಡೆಯವರನ್ನು ಶೇಣಿ ಗೋಪಾಲ ಕೃಷ್ಣ ಭಟ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

RELATED ARTICLES  ಕಾರವಾರ :ಯಶಸ್ವಿಯಾಗಿ ನಡೆದ ಕ್ರೀಡಾ ಪುನಶ್ಚೇತನ ಕಾರ್ಯಾಗಾರ

ಇದೇ ಸಂದರ್ಭದಲ್ಲಿ “ಪಟ್ಟಾಭಿಷೇಕ” ತಾಳಮದ್ದಲೆ ನಡೆಯಿತು.ದಶರಥನಾಗಿ ಡಾ.ಜಿ.ಎಲ್.ಹೆಗಡೆ,ಕೈಕೆಯಯಾಗಿ ದಿವಾಕರ ಹೆಗಡೆ ಕೆರೆಹೊಂಡ, ರಾಮನಾಗಿ ಪಿ.ವಿ.ರಾವ್, ಮಂಥರೆಯಾಗಿ ಶಂಭು ಶರ್ಮ ವಿಟ್ಲ, ಲಕ್ಷ್ಮಣನಾಗಿ ಗಣಪತಿ ಹೆಗಡೆ ಕೊಂಡದಕುಳಿಪಾತ್ರ ನಿರ್ವಹಣೆ ಮಾಡಿದರು.

RELATED ARTICLES  ಮೇಯಲು ಬಿಟ್ಟ ದನ ಹುಡುಕಲು ಬಂದವಳು ಶಿವನ ಪಾದ ಸೇರಿದಳು

ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಎ.ಪಿ.ಪಾಠಕ್ ಸಹಕರಿಸಿದರು.

ಶೇಣಿ ಯವರ ಸ್ಮರಣೆಯೊಂದಿಗೆ ಏಳು ದಿನಗಳ ಸಾಂಸ್ಕೃತಿಕ ಸಂಭ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.