ಕಾರವಾರ: ತಾಲೂಕಿನ ಪತ್ರಿಕಾ ಭವನದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆನಂದ‌ ಅಸ್ನೋಟಿಕರ್ ಶಾಸಕ‌ ಸತೀಶ್ ಸೈಲ್ ಹಾಗೂ ಅವರ ಆಪ್ತರ ಮೇಲೆ ವಾಗ್ದಾಳಿ ನಡೆಸಿದರು.

ಶಾಸಕ ಸತೀಶ್ ಸೈಲ್ ಹಾಗೂ ಅವರ ಆಪ್ತ ಶಂಭು ಶೆಟ್ಟಿ ಬಿಣಗಾದ ಆದಿತ್ಯಾ ಬಿರ್ಲಾ ಗ್ರಾಸಿಂ ಇಂಡಸ್ಟ್ರೀಸ್ ನಲ್ಲಿ ಉದ್ಯೋಗ ಕೊಡಿಸಲು ಯುವಕರಿಂದ ಲಕ್ಷಗಟ್ಟಲೆ ಹಣ ಪಡೆಯುತ್ತಾರೆ ಎಂದು ಜೆ.ಡಿ.ಎಸ್. ಘೋಷಿತ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಗಂಭೀರ ಆರೋಪ ಮಾಡಿದರು.

ಇದೇ ಸಂದರ್ಭದಲ್ಲಿ ತಮ್ಮ ಮಾತು ಮುಂದುವರಿಸಿದ‌ ಅವರು ಶಾಸಕರು ಈ ವಿಷಯ ಸುಳ್ಳು ಎಂದು ಹೇಳಿಕೊಳ್ಳಬಹುದು. ಆದರೆ ಹಣ ನೀಡಿದ ೧೦ ಅಭ್ಯರ್ಥಿಗಳನ್ನು ಅವರ ಎದುರಿಗೆ ತಂದು ನಿಲ್ಲಿಸುತ್ತೇನೆ ಎಂದು ಸವಾಲು ಹಾಕಿದರು.

RELATED ARTICLES  ಶಿರಸಿಯಲ್ಲಿ ಜ. 6 ಮತ್ತು 7ರಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ 15ನೇ ರಾಜ್ಯ ಸಮ್ಮೇಳನ

ಕಳೆದ ಚುನಾವಣೆಯಲ್ಲಿ ಬದಲಾವಣೆ ಬಯಸಿ ಮತ ನೀಡಿದ ಮತದಾರರಿಗೆ ಸ್ಥಳೀಯ ಶಾಸಕ ಸತೀಶ್ ಸೈಲ್ ವರ್ತನೆಯಿಂದ ಭೃಮ ನಿರಸನವಾಗಿದೆ. ಕ್ಷೇತ್ರವನ್ನು ಅಭಿವೃದ್ಧಿ ಪಡಿಸದೇ ಬೆಂಬಲಿಗರೊಂದಿಗೆ ಸೇರಿ ಶೇ.೨೦ರಷ್ಟು ಕಮಿಷನ್ ಹಣ ವಸೂಲಿ ಮಾಡುವಲ್ಲಿ ಶಾಸಕರು ತಲ್ಲೀನರಾಗಿದ್ದಾರೆ. ಇದರಿಂದ ಕೈಗೆತ್ತಿಕೊಂಡ ಕಾಮಗಾರಿಗಳು ಕಳಪೆ ಮಟ್ಟದ್ದಾಗಿವೆ. ಅಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಮತದಾರರನ್ನು ಹಣದಿಂದಲೇ ಕೊಂಡುಕೊಳ್ಳುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಅವರಿಗೆ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿಯೂ ಆಗಬೇಕಿಲ್ಲ. ಅವರ ಅವಧಿಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಒಂದು ಕೆಲಸ ಮಾಡದಿರುವುದು ಅವರ ಸಾಧನೆ ಏನು? ಎಂಬುದು ತೋರಿಸುತ್ತದೆ. ಕ್ಷೇತ್ರದ ರಸ್ತೆ, ಸೇತುವೆ, ಕುಡಿಯುವ ನೀರು ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿವೆ ಎಂದು ಆರೋಪಿಸಿದರು.

RELATED ARTICLES  ಸಮುದ್ರದಲ್ಲಿ ಮುಳುಗಿ ಪ್ರವಾಸಿಗ ಸಾವು

ಈ ಸಂದರ್ಭದಲ್ಲಿ ಪ್ರಮುಖರಾದ ರಾಘು ನಾಯ್ಕ,ವಿನಯ್, ಎಸ್,ವೈ ಕಿಶೋರ್ ಹಾಗೂ ಇನ್ನಿತ ಪ್ರಮುಖರು ಹಾಗೂ ಜೆಡಿಸ್ ಹಿರಿಯರು ಹಾಜರಿದ್ದರು.