ಕುಮಟಾ: ತಾಲೂಕಿನ ಅಘನಾಶಿನಿಯ ಶ್ರೀ ಹೊಲೇಟ್ರ ಸಾಂಸ್ಕøತಿಕ ಸೇವಾ ಸಂಘ ಇವರ ಆಶ್ರಯದಲ್ಲಿ ಅಘನಾಶಿನಿ ಹಾಲಕ್ಕಿ ಒಕ್ಕಲಿಗರ ಕಲಾಭವನದ ಹತ್ತಿರ ಅಘನಾಶಿನಿ ಸುಗ್ಗಿ ಉತ್ಸವ – 2018 ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಉದ್ಯಮಿ ಸುಬ್ರಾಯ ವಾಳ್ಕೆ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಇಂತಹ ಗ್ರಾಮೀಣ ಪ್ರದೇಶದಲ್ಲಿ ಒಗ್ಗಟ್ಟಿನಿಂದ ಅತ್ಯುತ್ತಮ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಸಂಘಟಿಸಿದ ಆಯೋಜಕರನ್ನು ಶ್ಲಾಘಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿ.ಜೆ.ಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ಶ್ರೀ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಈ ಪ್ರದೇಶದವರು ಒಗ್ಗಟ್ಟಿನಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ನಮ್ಮ ದೇಶಕ್ಕೆ ಸೇವೆ ನೀಡಿದ ಸೈನಿಕರನ್ನು ಸನ್ಮಾನಿಸಿರುವುದು ಅತ್ಯಂತ ಶ್ಲಾಘನೀಯವಾದದ್ದು. ಇದರಿಂದ ಪ್ರೇರೇಪಿತರಾಗಿ ಯುವಕರು ದೇಶಸೇವೆಗೆ ಮುನ್ನುಗ್ಗುವಂತಾಗಲಿ ಎಂದು ನುಡಿದರು. ಸುಗ್ಗಿ ಹಬ್ಬವು ಈ ಪ್ರದೇಶದಲ್ಲಿ ಹಬ್ಬದ ಸಂಭ್ರಮವನ್ನು ಸೃಷ್ಟಿ ಮಾಡಿದೆ ಅಲ್ಲದೆ ಸ್ಥಳೀಯ ಪ್ರತಿಭೆಗಳಾದ ತನುಷ ಹಾಗೂ ದೀಕ್ಷಾ ಇವರಿಗೆ ಈ ವೇದಿಕೆಯಲ್ಲಿ ಅವಕಾಶ ನೀಡಿರುವುದು ಅರ್ಥಪೂರ್ಣವಾಗಿದೆ. ಅವರು ಈ ಹಿಂದೆ ಅದೆಷ್ಟೋ ಒಳ್ಳೊಳ್ಳೆ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದರೂ ಕೂಡ ಸ್ಥಳೀಯ ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಿರುವುದು ಎಲ್ಲರಿಗೂ ಹರ್ಷವನ್ನು ತಂದಿದೆ ಎಂದು ನುಡಿದು ಅವರ ಉತ್ತಮ ಹಾಡುಗಾರಿಕೆಯನ್ನು ಮೆಚ್ಚಿ ಅವರಿಗೆ ಶುಭ ಹಾರೈಸಿದರು.

RELATED ARTICLES  ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹೊಂಡಗಳು : ಮಳೆಗಾಲದಲ್ಲಿ ಜನರ ಗೋಳು.

ಇದೇ ವೇದಿಕೆಯಲ್ಲಿ ನಿವೃತ್ತ ಸೈನಿಕರಾದ ಶ್ರೀ ರಾಧಾಕೃಷ್ಣ ನಾಯ್ಕ ಹಾಗೂ ಶ್ರೀ ಚಂದ್ರಶೇಖರ ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಿ.ಜೆ.ಪಿ ಮುಖಂಡರಾದ ಡಾ|| ಜಿ.ಜಿ. ಹೆಗಡೆ ಅವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

RELATED ARTICLES  ಸಂಗೀತ ಲೋಕದ ಸಾಧಕಿ ತೇಜಸ್ವಿನಿ ದಿಗಂಬರ ವರ್ಣೇಕರ್

ವೆಂಕಟ್ರಮಣ ಗೌಡ, ಅಶೋಕ ಗಂಗಾಧರ ನಾಯ್ಕ, ಯಶವಂತ ಅಂಬಿಗ, ಗಣ್ಯ ರಘುವೀರ ಶೆಟ್ಟಿ ಹಾಗೂ ಊರನಾಗರಿಕರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಬಿ. ಎಸ್. ಆರ್ ನಾಟಕ ಸಂಘ (ಗುಬ್ಬಿ) ಇವರಿಂದ ಕುಂಟ ಕೋಣ ಮೂಕ ಜಾಣ ಎಂಬ ನಾಟಕ ಪ್ರದರ್ಶಿತಗೊಂಡಿತು.