ಸಿದ್ದಾಪುರ :ರಾಘವೇಶ್ವರ ಶ್ರೀಗಳ ಸೇವಾ ಕಾರ್ಯದಲ್ಲಿ ಮುದಲಿನಿಂದಲೂ ಭಾಗವಹಿಸುವ ಮಾಜಿ ಶಾಸಕ ಹಾಗೂ ಬಿಜೆಪಿ ಪ್ರಮುಖರಾದ ದಿನಕರ ಶೆಟ್ಟಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಶ್ರೀಗಳನ್ನು ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆದರು.

RELATED ARTICLES  ಮುಕ್ತಾ ಲಕ್ಷ್ಮಣ ಪೈ ಇನ್ನಿಲ್ಲ : ನೇತೃದಾನ ಮಾಡಿ ಮಾದರಿಯಾದ ನಿವೃತ್ತ ಶಿಕ್ಷಕಿ

ಸಿದ್ದಾಪುರದ ಬಾನ್ಕುಳಿ ಮಠದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳನ್ನು ಭೇಟಿ ಮಾಡಿ ಆಶಿರ್ವಾದ ಪಡೆದುಕೊಂಡರು.

ಸಾಮಾಜಿಕ ಕಾರ್ಯ ಹಾಗೂ ಇನ್ನಿತರ ಸಾಮಾನ್ಯ ವಿಷಯಗಳ ಕುರಿತಾಗಿ ಮಾತುಕತೆ ನಡೆದಿದೆ ಯಾವುದೇ ರೀತಿಯ ರಾಜಕೀಯಕ್ಕೆ ಸಂಬಂಧಪಟ್ಟ ಭೇಟಿ ಇದಲ್ಲ ಎಂದು ಅವರು ಸ್ಪಷ್ಟಪಡಿಸಿದರು.

RELATED ARTICLES  "ಸಹಾಯ ಹಸ್ತ" ಮೆಡಿಕಲ್ ಕಿಟ್ ಹಸ್ತಾಂತರ

ಬಾನ್ಕುಳಿಯಲ್ಲಿ ನಡೆಯುತ್ತಿರುವ ಗೋ ಸ್ವರ್ಗದ ಪ್ರದೇಶಗಳನ್ನು ವೀಕ್ಷಿಸಿದ ದಿನಕರ ಶೆಟ್ಟಿ ಅಲ್ಲಿಯ ಕಾರ್ಯ ಯೋಜನೆಗಳ ಬಗ್ಗೆ ತಿಳಿದರು.

ಜಗದೀಶ ಭಟ್ಟ, ಹಾಗೂ ಕುಮಾರ ಕೌರಿ ದಿನಕರ ಶೆಟ್ಟಿಯವರ ಜೊತೆಗಿದ್ದರು.