ಕಾಲು, ಮೀನ ಖಂಡ, ಹಿಮ್ಮಡಿ, ಹಿಪ್ಸ್ಗಳಲ್ಲಿ ಕ್ರೊನಿಕ್ ಅಲ್ಸರ್ ಆಗಿ ಅದೇಷ್ಟೋ ಜನಾ ಬಳಲುತ್ತಾ ಇರೋದನ್ನ ನಮ್ಮ ಸುತ್ತಲೂ ನೋಡ್ತಾ ಇರ್ತೀವಿ. ಕ್ರೊನಿಕ್ ಅಲ್ಸರ್ ಅಂದ್ರೆ, ಸುಲಭವಾಗಿ ವಾಸಿಯಾಗದ ಗಂಭೀರ ಪ್ರಮಾಣದ ಗಾಯಗಳು. ಈ ಥರದ ಗಾಯಗಳು ಹೆಚ್ಚಾಗಿ ಆ್ಯಕ್ಸಿಡೆಂಟ್, ಪೆಟ್ಟು ಬೀಳುವುದು, ಆಸ್ಪತ್ರೆಗಳಲ್ಲಿ ದೀರ್ಘಕಾಲಿಕವಾಗಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ, ಡಯಾಬಿಟಿಕ್ ಪೇಷಂಟ್ಸ್ಗಳಲ್ಲಿ ಉಂಟಾಗುವುದು ಸಹಜ.
ದೇಹದ ಕೆಲ ಭಾಗಗಳಲ್ಲಿ ಚರ್ಮ ಕಿತ್ತೋಗಿ ಉಂಟಾಗುವ ನೋವು, ಮಾಂಸಖಂಡಗಳಿಗೆ ಬ್ಯಾಕ್ಟಿರಿಯಾಗಳು ಉಂಟುಮಾಡುವ ಕಿರಿ ಕಿರಿ, ಸಹಜವಾಗಿ ನಡೆಯಲು ಸಾಧ್ಯವಾಗದಂಥ ಸ್ಥಿತಿಗಳಿಂದ ಬಳಲುತ್ತಿರುವವರು ಹಲವಾರು ಬಾರಿ ಟ್ರೀಟ್ಮೆಂಟ್ ಪಡೆದ್ರೂ ಕೆಲವರಿಗೆ ಗುಣವೇ ಆಗಿರುವುದಿಲ್ಲ.
ಹಲವು ವರ್ಷಗಳ ಕ್ರೊನಿಕ್ ಗಾಯ ಅಂದ್ರೆ ಅತಿ ಗಂಭೀರ ಗಾಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬಿಆರ್ ಹೆಚ್ ವೂಂಡ್ ಹೀಲಿಂಗ್ ಟ್ರೀಟ್ಮೆಂಟ್ನಿಂದ ರಿಲೀಫ್ ಸಿಕ್ಕಿದೆ. ಬಹುತೇಕರಲ್ಲಿ ಗಾಯ ವಾಸಿಯಾಗಿದ್ದು, ಇದು ಯಾವುದೇ ಸೈಡ್ ಎಫೆಕ್ಟ್ ಇಲ್ಲದ ಚಿಕಿತ್ಸಾ ಕ್ರಮವಾಗಿದೆ-ದೇವೆಂದ್ರ ಇಳಿಗೇರ್, ಎಂಡಿ ಎಸೆನ್ಷಿಯಲ್ ಹೆಲ್ತ್ ಕೇರ್
ಇನ್ನು ಡಯಾಬಿಟಿಕ್ ರೋಗಿಗಳಲ್ಲಿ ಗಾಯವಾಗಿ ಕೆಲವರಿಗೆ ಕಾಲು ಅಥವಾ ಕೈ ಕತ್ತರಿಸಿ ಹಾಕಿದ್ರೂ ಗಾಯದ ಸಮಸ್ಯೆ ಕಾಡದೇ ಬಿಡುವುದಿಲ್ಲ. ಕತ್ತರಿಸಿ ಹಾಕಲಾದ ಜಾಗದಲ್ಲೇ ಮತ್ತೆ ಗಾಯ ಉಲ್ಬಣಿಸಿ ಜೀವನವೇ ಸಾಕು ಅನ್ನೋ ಮಟ್ಟಿಗೆ ತೊಂದರೆ ನೀಡಿ ಬಿಡುತ್ತೆ. ಈ ರೀತಿಯ ಕ್ರೊನಿಕ್ ಅಲ್ಸರ್ಗೆ ರಾಮಬಾಣವೊಂದು ಸಿದ್ಧವಾಗಿದೆ. ಈ ಅತ್ಯಾಧುನಿಕ ಚಿಕಿತ್ಸಾ ಪದ್ಧತಿಯನ್ನು ಬೆಂಗಳೂರಿನ ಎಸೆನ್ಷಿಯಲ್ ಹೆಲ್ತ್ ಕೇರ್ ಪರಿಚಯಿಸಿದೆ. ಇದನ್ನು ಬಿಆರ್ ಹೆಚ್ ವೂಂಡ್ ಹೀಲಿಂಗ್ ಸಿಸ್ಟಮ್ ಎಂದು ಕರೆಯಲಾಗುತ್ತಿದ್ದು, ಹಲವು ವೈದ್ಯರು ಕೂಡ ಈ ಚಿಕಿತ್ಸೆ ಬಗ್ಗೆ ಇತ್ತೀಚೆಗೆ ಮಹತ್ವ ನೀಡುತ್ತಿದ್ದಾರೆ ಅಂತಾ ಹೇಳಲಾಗ್ತಿದೆ.
ಅಷ್ಟಕ್ಕೂ ಬಿಆರ್ ಹೆಚ್ ವೂಂಡ್ ಹೀಲಿಂಗ್ ಸಿಸ್ಟಮ್ ಅಂದ್ರೇನು? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
ವಿನೂತನ ಚಿಕಿತ್ಸಾ ಕ್ರಮವಾಗಿರುವ ಇದು ಅಲ್ಟ್ರಾಸೌಂಡ್ ಕಿರಣಗಳು ಮತ್ತು ಎಲೆಕ್ಟ್ರಿಕ್ ಕರೆಂಟ್ ಸ್ಟಿಮ್ಯುಲೇಷನ್ನಿನ ವಿಶೇಷ ಕಾಂಬಿನೇಷನ್ ಆಗಿದೆ. ಈ ಚಿಕಿತ್ಸಾ ಕ್ರಮದಲ್ಲಿ ಗಾಯ ವಾದ ಭಾಗಕ್ಕೆ ರಕ್ತ ಪರಿಚಲನೆ ಹೆಚ್ಚುವಂತೆ ಮಾಡಲಾಗುತ್ತದೆ. ಇದು ಗಾಯ ಮಾಯಲು ಪ್ರೇರೇಪಿಸುತ್ತದೆ ಅಂತಾ ಹೇಳಲಾಗಿದೆ. ಅಲ್ಲದೇ, ಗಾಯದ ಆಧಾರದ ಮೇಲೆ ಕೆಲ ಕಾಲ ಈ ಚಿಕಿತ್ಸೆ ಪಡೆಯುವುದರಿಂದ ಇದು, ಗಾಯದ ಕೆಳ ಭಾಗದ ಸೂಕ್ಷ್ಮ ನಾಳಗಳಲ್ಲಿ ರಕ್ತಪರಿಚಲನೆ ಹೆಚ್ಚಿಸುತ್ತದೆ, ಈ ಮೂಲಕ ಹೊಸ ಮಾಂಸಕಣಗಳು ಉತ್ಪತ್ತಿಯಾಗಲು ಸಹಾಯಕವಾಗುತ್ತದೆ ಅನ್ನುತ್ತೆ ಸಂಸ್ಥೆಯ ವಿವರಣೆ. ಜೊತೆಗೆ, ಇದು ಬ್ಯಾಕ್ಟಿರಿಯಾ ಕಾಲನಿಗಳನ್ನು ಕೂಡ ನಾಶ ಮಾಡುವುದರಿಂದ, ಗಾಯ ಉಲ್ಬಣಿಸುವುದು ಅಸಾಧ್ಯವಾಗುತ್ತದೆ ಎನ್ನಲಾಗಿದೆ.
ಬಿಆರ್ ಹೆಚ್ ಚಿಕಿತ್ಸಾ ಕ್ರಮದ ವಿಶೇಷ
ಈ ವಿಧಾನ ಗಾಯವನ್ನು ಮತ್ತಷ್ಟು ಕೆದಕುವುದಿಲ್ಲ. ಇದು ಆಕ್ರಮಣ ಶೀಲ ಅಲ್ಲ. ಅಂದ್ರೆ ಈ ಚಿಕಿತ್ಸಾ ಕ್ರಮ ನಾನ್-ಇನ್ವ್ಯಾಸಿವ್ ಅಲ್ಲ. ಅಲ್ಲದೇ, ಈ ಚಿಕಿತ್ಸಾ ಕ್ರಮದಲ್ಲಿ ಗಾಯ ವಾಸಿಯಾಗಿರುವ ಪ್ರಮಾಣದ ಹೆಚ್ಚಾಗಿದ್ದು ವಿದೇಶಗಳಲ್ಲಿ ಪ್ರಖ್ಯಾತಿಯನ್ನು ಪಡೆದಿದೆ ಎನ್ನುತ್ತಾರೆ ಎಸೆನ್ಷಿಯಲ್ ಹೆಲ್ತ್ ಕೇರ್ ಎಂಡಿ ದೇವೆಂದ್ರ ಇಳಿಗೇರ್. ಅಲ್ಲದೇ, ಬಿಆರ್ಹೆಚ್ ವೂಂಡ್ ಹೀಲಿಂಗ್ ಚಿಕಿತ್ಸೆ, ಕೇವಲ ಗಾಯವನ್ನು ವಾಸಿ ಮಾಡದೇ, ಹೊಸ ಟಿಶ್ಯೂಗಳು ಬೆಳೆಯಲು ಕೂಡ ಸಹಾಯಕವಾಗಿದೆ ಎನ್ನಲಾಗಿದೆ.
ಬಿಆರ್ ಹೆಚ್ ವೂಂಡ್ ಹೀಲಿಂಗ್ ಸಿಸ್ಟಂ ಅತ್ಯುತ್ತಮ ಚಿಕಿತ್ಸಾ ವಿಧಾನವಾಗಿದ್ದರೂ, ನಿಮ್ಮ ವೈದ್ಯರ ಸಲಹೆ ಪಡೆದು ಮುನ್ನುಗ್ಗುವುದು ಉತ್ತಮ. ಯಾವುದೇ ಹೊಸ ಚಿಕಿತ್ಸಾ ವಿಧಾನಕ್ಕೆ ತೆರೆದುಕೊಳ್ಳುವುದಕ್ಕಿಂತ ಮುಂಚೆ, ಆ ಕುರಿತು ನೀವು ಸಾಧ್ಯವಾದಷ್ಟು ತಿಳಿದುಕೊಳ್ಳುವುದು ಅಪೇಕ್ಷಣೀಯ.