ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10ನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ಮರು ಪರೀಕ್ಷೆ ನಡೆಸುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನು ಬುಧವಾರ (ಏಪ್ರಿಲ್‌ 4ರಂದು) ಒಟ್ಟಿಗೆ ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.

ಮರು ಪರೀಕ್ಷೆ ನಡೆಸುವ ಸಿಬಿಎಸ್‌ಇ ನಿರ್ಧಾರದ ವಿರುದ್ಧ ಅರ್ಜಿಸಲ್ಲಿಸಿದ್ದ ಕೇರಳದ ರೋಹನ್‌ ಮ್ಯಾಥ್ಯೂ ಎಂಬ 15 ವರ್ಷದ ವಿದ್ಯಾರ್ಥಿ ತುರ್ತಾಗಿ ವಿಚಾರಣೆ ನಡೆಸುವಂತೆ ಕೋರಿದ್ದಾನೆ.

RELATED ARTICLES  ದಿನಾಂಕ 23/06/2019ರ ದಿನ ಭವಿಷ್ಯ ಇಲ್ಲಿದೆ

ಸೋರಿಕೆ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸಬೇಕು ಮತ್ತು ಮರು ಪರೀಕ್ಷೆ ನಡೆಸದೆ, ಈಗಾಗಲೇ ನಡೆದಿರುವ ಪರೀಕ್ಷೆಗಳ ಆಧಾರದ ಮೇಲೆಯೇ ಫಲಿತಾಂಶ ಘೋಷಿಸಬೇಕು ಎಂದು ಆತ ಮನವಿ ಮಾಡಿದ್ದಾನೆ.

ಮರು ಪರೀಕ್ಷೆ ಯಾವಾಗ?: ಮತ್ತೊಂದೆಡೆ ದೆಹಲಿ ಹೈಕೋರ್ಟ್, ‘10ನೇ ತರಗತಿಯ ಗಣಿತ ಮರು ಪರೀಕ್ಷೆಯನ್ನು ಯಾವಾಗ ನಡೆಸುವ ಯೋಚನೆ ಇದೆ’ ಎಂದು ಸಿಬಿಎಸ್‌ಇಯನ್ನು ಕೇಳಿದೆ.

RELATED ARTICLES  ಮೋಹನ ಹೆಗಡೆ ಹಾಗೂ ಶ್ರೀನಿವಾಸ ಹೆಬ್ಬಾರ್ ಅವರಿಗೆ ನಮ್ಮನೆ ಪ್ರಶಸ್ತಿ : ವಿಭವ್ ಮಂಗಳೂರಿಗೆ ನಮ್ಮನೆ ಯುವ ಪುರಸ್ಕಾರ

ಮರು ಪರೀಕ್ಷೆಗೆ ವಿದ್ಯಾರ್ಥಿಗಳು ಜುಲೈವರೆಗೂ ಏಕೆ ಕಾಯಬೇಕು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್‌ ನೇತೃತ್ವದ ಪೀಠ ಪ್ರಶ್ನಿಸಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ನ್ಯಾಯಾಲಯದ ಉಸ್ತುವಾರಿಯಲ್ಲಿ ನಡೆಸುವಂತೆ ಕೋರಿ ಸೋಷಿಯಲ್‌ ಜೂರಿಸ್ಟ್‌ ಎಂಬ ಸ್ವಯಂ ಸೇವಾ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.