ಹೊನ್ನಾವರ. ತಾಲೂಕಿನ ಕರ್ಕಿ ನಾಕಾ ಹತ್ತಿರ ಅಕ್ರಮ ಗೋ ಸಾಗಾಣಿಕೆ ವಾಹನವನ್ನು ತಡೆದ ಘಟನೆಯ ಸಂದರ್ಭದಲ್ಲಿ ಆ ಮಾರ್ಗವಾಗಿ ಹಾದು ಹೋಗುತ್ತಲಿದ್ದ ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ನಾಮಧಾರಿ ಸಮಾಜದ ಪ್ರಮುಖರಾದ ಸೂರಜ್ ನಾಯ್ಕ ಸೋನಿ ಹಾಗೂ ಇತರ ಕೆಲವು ಪ್ರಮುಖರನ್ನು ಘಟನೆಗೆ ಹೊಣೆಗಾರರನ್ನಾಗಿ ಮಾಡಿ ಸೆಕ್ಷನ್ 307 ರ ಅಡಿಯಲ್ಲಿ ಕೊಲೆಯತ್ನದ ಆರೋಪ ಹೊರಿಸಿ ಬಂಧಿಸಿರುವುದು ಎಲ್ಲರಿಗೂ ತಿಳಿದ ವಿಚಾರ.
ಈ ಘಟನೆ ಕುರಿತಂತೆ ಸೋನಿ ಬೆಂಬಲಿಗರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಸೋನಿಯವರ ಬಿಡುಗಡೆಗಾಗಿ ಅಪಾರ ಬೆಂಬಲಿಗರು ಕಾದು ಕುಳಿತಿದ್ದಾರೆ.
ಸೂರಜ್ ನಾಯ್ಕ ಸೋನಿಯವರ ಸಮಾಜ ಸೇವೆ ಮತ್ತು ರಾಜಕೀಯ ಬೆಳವಣಿಗೆಯನ್ನು ಸಹಿಸಲಾರದ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗಿ ಆಡಳಿತ ವ್ಯವಸ್ಥೆ ಬಂಧಿಸಿರುವದನ್ನು ಖಂಡಿಸಿ ಹೋರಾಟಗಳನ್ನು ನಡೆಸಲಾಗಿತ್ತು.
ಹಿಂದೂ ಮುಖಂಡ ಹಾಗೂ ಪ್ರಭಲ ಬಿಜೆಪಿ ಟಿಕೆಟ್ ಆಕಾಂಕ್ಷಿ ಸೂರಜ್ ನಾಯ್ಕ ಸೋನಿ ಜಾಮೀನಿಗೆ ಸಂಬಂಧಿಸಿದ ವಿಚಾರಣೆಯನ್ನು ಎಪ್ರಿಲ್ 6ಕ್ಕೆ ಮುಂದುಡಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಸೋನಿ ಬೆಂಬಲಿಗರು ಸೋನಿ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ವಿನಾಕಾರಣ ಜೈಲು ಶಿಕ್ಷೆ ಅನುಭವಿಸಿ, ಈಗ ಜಾಮೀನು ಪಡೆಯಲೂ ಆಗುತ್ತಿರುವ ವಿಳಂಬ, ಅಭಿಮಾನಿಗಳಲ್ಲಿ ಸಾಕಷ್ಟು ಅಸಮಧಾನ ಬುಗಿಲೆಳಲು ಕಾರಣವಾಗಿದೆ.
ಸೂರಜ್ ನಾಯ್ಕ ಸೋನಿ ಬಿಡುಗಡೆಗೆ ಪೂಜೆ ಪುರಸ್ಕಾರಗಳು ಮುಂದುವರೆದಿದ್ದು. ಸೋನಿ ಬಿಡುಗಡೆಗೊಳಿಸುವಂತೆ ಅನೇಕ ಸಂಘಗಳಿಂದ ತಹಸಿಲ್ದಾರರಿಗೆ, ರಾಜ್ಯಪಾಲರಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸುವಿಕೆ ಮುಂದುವರೆದಿದೆ. ಪ್ರಭಲ ಮುಖಂಡ ಸೋನಿ ಬಿಡುಗಡೆಗಾಗಿ ಅವರ ಬೆಂಬಲಿಗರು ಕಾದು ಕುಳಿತಿರುವುದಂತು ಸತ್ಯ.