ಸಿದ್ದಾಪುರ; ಹೊಸನಗರ ಶ್ರೀರಾಮಚಂದ್ರಾಪುರಮಠದಲ್ಲಿ ಏಪ್ರಿಲ್ 28 ರಿಂದ ಮೇ 6 ರವರೆಗೆ ಜರುಗುತ್ತಿರುವ ಸಪರಿವಾರ ಶ್ರೀಚಂದ್ರಮೌಳೀಶ್ವರ ದೇವರ ಅಷ್ಟಬಂಧ, ಪ್ರತಿಷ್ಠಾ, ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಹಾಗೂ ಕೆಕ್ಕಾರು ಶ್ರೀರಘೂತ್ತಮಮಠದಲ್ಲಿ ಏಪ್ರಿಲ್ 29 ರಿಂದ ಮೇ 1 ರ ವರೆಗೆ ಜರುಗುತ್ತಿರುವ ಶ್ರೀ ರಾಜರಾಜೇಶ್ವರೀ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆಗಳನ್ನು ಶ್ರೀರಾಮಚಂದ್ರಾಪುರಮಠ ಮಹಾಸಂಸ್ಥಾನದ ಶ್ರೀ ರಾಘವೇಶ್ವರಭಾರತೀ ಶ್ರೀಗಳು ಭಾನ್ಕುಳಿಯ ಶ್ರೀರಾಮದೇವ ಮಠದಲ್ಲಿ ಬಿಡುಗಡೆ ಮಾಡಿದರು.

RELATED ARTICLES  ಅಂಬುಲೆನ್ಸನಲ್ಲಿಯೇ ಕುಳಿತಿದ್ದ ಜವರಾಯ: ಹಾರಿ ಹೋಯ್ತು ಮೂವರು ಕಾರವಾರದವರ ಜೀವ.!

ಪ್ರಧಾನಮಠ ಹಾಗೂ ಶಾಖಾಮಠಗಳಲ್ಲಿ ನಡೆಯುತ್ತಿರುವ ಈ ಅಪರೂಪದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಿಷ್ಯಭಕ್ತರು ಪಾಲ್ಗೊಂಡು ದೇವತಾಕೃಪೆಗೆ ಪಾತ್ರರಾಗಬೇಕೆಂದು ಶ್ರೀಗಳು ಆಶಯವ್ಯಕ್ತಪಡಿಸಿ ಪದಾಧಿಕಾರಿಗಳಿಗೆ, ಆಗಮಿಸಿದ್ದ ಶಿಷ್ಯವೃಂದಕ್ಕೆ ಫಲಮಂತ್ರಾಕ್ಷತೆ ಅನುಗ್ರಹಿಸಿದರು.

RELATED ARTICLES  ಬಂದ್ ಆಯ್ತು ಶಿರಸಿ: ನಡು ಬೀದಿಯಲ್ಲಿ ಚಹಾ ತಿಂಡಿ ತಯಾರಿಸಿ ಪ್ರತಿಭಟನೆ ನಡೆಸಿದ ಪ್ರಮುಖರು!

ಮಹಾಮಂಡಲ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಪ್ರಮುಖರಾದ ವಿ.ಜಗದೀಶ ಶರ್ಮಾ, ಹರಿಪ್ರಸಾದ ಪೆರಿಯಪ್ಪು, ಎಂ.ಕೆ.ಹೆಗಡೆ ಕೂಜಳ್ಳಿ-ಕುಮಟಾ, ಶ್ರೀಕಾಂತ ಪಂಡಿತ, ಎನ್.ಪಿ.ಹೆಗಡೆ ವಂದೂರು, ಮಂಜುನಾಥ ಸುವರ್ಣಗದ್ದೆ, ಶಾಂತಾರಾಮ ಹಿರೇಮನೆ ಸೇರಿದಂತೆ ಶ್ರೀಚಂದ್ರಮೌಳೀಶ್ವರ ಪ್ರತಿಷ್ಠಾಪನಾ ಸಮಿತಿ ಹಾಗೂ ಶ್ರೀರಾಜರಾಜೇಶ್ವರೀ ಪ್ರತಿಷ್ಠಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.