ಕುಮಟಾ: ಅಘನಾಶಿನಿ ಸುಗ್ಗಿ ಉತ್ಸವ 2018 ರ ಸಮಾರೋಪ ಸಮಾರಂಭವನ್ನು ಉದ್ಯಮಿ ರವಿಕುಮಾರ ಶೆಟ್ಟಿ ಉದ್ಘಾಟಿಸಿದರು.
ಆನಂತರ ಮಾತನಾಡಿದ ಅವರು ಹಾಲಕ್ಕಿಗಳ ಸಂಸ್ಕ್ರತಿಯನ್ನು ಸಾರುವ ಸುಗ್ಗಿ ಹಬ್ಬದ ದಿನದಂದು ಸುಗ್ಗಿ ಉತ್ಸವವನ್ನು ಆಚರಿಸುವುದು ಅತ್ಯಂತ ಹೆಮ್ಮೆಯ ಸಂಗತಿ. ಈ ಉತ್ಸವ ಇನ್ನು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಅಧ್ಯಕ್ಷತೆಯನ್ನು ಪ್ರದೀಪ್ ನಾಯಕ ದೇವರಬಾವಿ ವಹಿಸಿದ್ದರು ವೇದಿಕೆಯಲ್ಲಿ ಕ್ರಷ್ಣ ಗೌಡ ಹೊನ್ನಾವರ, ಭಾಸ್ಕರ ಪಟಗಾರ, ಮಂಜುನಾಥ ಪಟಗಾರ, ಎಸ್ ಟಿ ಗೌಡ, ಹಾಗೂ ಇತರರು ಉಪಸ್ಥಿತರಿದ್ದರು. ರಾಜ್ಯ ಜಾನಪದ ಪ್ರಶಸ್ತಿ ವಿಜೇತ ಪುರುಷೋತ್ತಮ ಗೌಡ, ನಿರೂಪಕ ಯೋಗೇಶ್ ಮಿರ್ಜಾನ್, ನ್ರತ್ಯಪಟು ಅಂಕಿತಾ ಹೊಸ್ಕಟ್ಟ ಇವರನ್ನು ಸನ್ಮಾನಿಸಲಾಯಿತು.
ನಂತರ ಜೀ ಟೀವಿ ಸರೀಗಮಪ ಖ್ಯಾತಿಯ ಸಪ್ರಿತ್ ಫಲ್ಗುಣ ಹಾಗೂ ಸಂಗಡಿಗರಿಂದ ಅದ್ದೂರಿ ರಸಮಂಜರಿ ನಡೆಯಿತು.