ಶಿರಸಿ: ಸೋಂದಾ ಸ್ವರ್ಣವಲ್ಲೀ ಸಂಸ್ಥಾನವು ಕೃಷಿ ಪ್ರತಿಷ್ಠಾನದ ನೇತೃತ್ವದಲ್ಲಿ ನಡೆಸುವ ಏ.27, 28ರ ಕೃಷಿ ಜಯಂತಿ ಸಂದರ್ಭದಲ್ಲಿ ಪ್ರದಾನ ಮಾಡಲಾಗುವ ಕೃಷಿಕರನ್ನು ಉತ್ತೇಜಿಸುವ ಪ್ರಶಸ್ತಿಗೆ ತಜ್ಞರ ಸಮಿತಿ ಪರಿಶೀಲಿಸಿ ಅಂತಿಮಗೊಳಿಸಿದೆ.

ಅತ್ಯುತ್ತಮ ಕೂಡು ಕುಟುಂಬ ಪ್ರಶಸ್ತಿಯು ಹೆಗ್ಗರಣಿ ಸಮೀಪದ ಉಂಚಳ್ಳಿ ಬೆಳಕೋಡಿನ ದೇವರು ಕೃಷ್ಣ ಹೆಗಡೆ ಕುಟುಂಬಕ್ಕೆ ಲಭಿಸಿದೆ. 28 ಜನರಿರುವ ಈ ಒಟ್ಟು ಕುಟುಂಬದಲ್ಲಿ ಸಾಮರಸ್ಯದಲ್ಲಿ ಕೃಷಿ ಕಾರ್ಯದಲ್ಲಿ ಮಗ್ನರಾಗಿದ್ದು, ಸಮಾಜಕ್ಕೆ ಮಾದರಿಯಾಗಿದೆ.

ಉತ್ತಮ ಕೃಷಿಕನಿಗೆ ನೀಡಲಾಗುವ ಕೃಷಿ ಕಂಠೀರವ ಪ್ರಶಸ್ತಿ ಶಿರಸಿ ಯಡಹಳ್ಳಿಯ ದಿಂಡಿನ್ ಕುಟುಂಬದ ವಿಶ್ವನಾಥ ಹೆಗಡೆ ಅವರಿಗೆ ಲಭಿಸಿದೆ. ಅಡಿಕೆ ಕೃಷಿಯ ಜೊತೆ ಮಾದರಿಯಾಗಿ ಕಾಳು ಮೆಣಸು ಬೇಸಾಯ ಕೂಡ ಮಾಡುತ್ತಿರುವ ಇವರು ಸಾಮಾಜಿಕ ಚಟುವಟಿಕೆಯಲ್ಲೂ ಸಕ್ರೀಯರಾಗಿದ್ದಾರೆ.
ಸಾಧಕ ಮಹಿಳೆ ಪ್ರಶಸ್ತಿ ಒಬ್ಬಂಟಿಯಾಗಿ ಬಾವಿ ತೋಡಿ ತೋಟ ಉಳಿಸಿಕೊಂಡ ಗಣೇಶ ನಗರದ ಗೌರಿ ನಾಯ್ಕ ಅವರಿಗೆ ಪ್ರದಾನ ಮಾಡಲಾಗುತ್ತದೆ.
ಕೃಷಿ ಕುಶಲಕರ್ಮಿ ಪ್ರಶಸ್ತಿಗೆ ಯಲ್ಲಾಪುರದ ಆನಗೋಡಿನ ಗವೆಗುಳಿ ನಾರಾಯಣ ಹೆಗಡೆ ಅವರಿಗೆ ಲಭಿಸಿದ್ದು, ಅವರು ಆಚಾರಿ, ಗಾರೆ, ಕೃಷಿ, ಪಶು, ನಾಟಿ ವೈದ್ಯಕೀಯ ಸೇರಿದಂತೆ ಅನೇಕ ಸಂಗತಿಗಳಲ್ಲಿ ಪರಿಣಿತರಾಗಿದ್ದಾರೆ. ಅತ್ಯುತ್ತಮ ಸಾಧಕ ಕೃಷಿ ಪೂರಕ ಸ್ವಯಂ ಸೇವಾ ಸಂಸ್ಥೆ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿರಸಿಯ ಮಹಿಳಾ ಸಂಘಟನೆ ವನಸ್ತ್ರೀಗೆ ನೀಡಲು ತೀರ್ಮಾನಿಸಲಾಗಿದೆ.

RELATED ARTICLES  ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ ಆತ್ಮ ತೃಪ್ತಿ ನನಗಿದೆ: ಬಸವರಾಜ್ ಹೊರಟ್ಟಿ

ಅತ್ಯುತ್ತಮವಾಗಿ ಬೆಟ್ಟ ನಿರ್ವಹಣೆ ಜೊತೆಗೆ ನೀರಿಂಗಿಸುವ ಕೈಂಕರ್ಯದಲ್ಲೂ ಕಾರ್ಯ ಮಾಡುತ್ತಿರುವ ಮೂವರನ್ನು ಪುರಸ್ಕರಿಸುವ ಕಾರ್ಯ ಶ್ರೀಮಠದಿಂದ ನಡೆಯುತ್ತಿದ್ದು, ಕೃಷ ಜಯಂತಿ ವೇಳೆ ಅತ್ಯುತ್ತಮ ಬೆಟ್ಟ ನಿರ್ವಹಣೆಗೂ ಪ್ರಶಸ್ತಿ ನೀಡಲಾಗುತ್ತಿದೆ.

RELATED ARTICLES  ಹೆಗಡೆ ಹೆಣ್ಣು ಮಕ್ಕಳ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಲರವ

ಈ ಬಾರಿ ವರ್ಗಾಸರ ಬೆಣ್ಣೆಮನೆ ಗಣಪತಿ ರಾಮಯ್ಯ ಹೆಗಡೆ ಅವರು ಸುಮಾರು 50 ಎಕರೆ ಬೆಟ್ಟವನ್ನು ಕಾಡಾಗಿಸಿ ಸಂರಕ್ಷಣೆ ಮಾಡಿದ್ದಕ್ಕೆ ಪ್ರಥಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ದ್ವಿತೀಯ ಪ್ರಶಸ್ತಿಯನ್ನು ಇಬ್ಬರು ಹಂಚಿಕೊಂಡಿದ್ದು, ಗಣಪತಿ ಮ ಹೆಗಡೆ ಗುಬ್ಬಿಮನೆ, ಹಾಗೂ ವಿನಾಯಕ ಭಟ್ಟ ನರೂರು ಅವರಿಗೆ ಲಭಿಸಿದೆ.
ಪ್ರಶಸ್ತಿ ಆಯ್ಕೆಯಲ್ಲಿ ಈ ಎಲ್ಲರೂ ನೀರಿಂಗಿಸುವ ಕಾರ್ಯಕ್ಕೂ ಮುಂದಾಗಿದ್ದು ಮಾದರಿ ಕಾಡು ರಕ್ಷಣೆ ಕಾರ್ಯ ಮಾಡುತ್ತಿದ್ದಾರೆ ಎಂದು ಆಯ್ಕೆ ಸಮಿತಿಯ ಪರವಾಗಿ ಸುಬ್ರಾಯ ಲ.ಹೆಗಡೆ ತ್ಯಾಗಲಿ ತಿಳಿಸಿದ್ದಾರೆ.

ಕೃಷಿ ಜಯಂತಿ ವೇಳೆ ಪ್ರಶಸ್ತಿ ಪ್ರದಾನವನ್ನು ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ನೆರವೇರಿಸಲಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್.ಎನ್.ಹೆಗಡೆ ಉಳ್ಳಿಕೊಪ್ಪ, ಕಾರ್ಯದರ್ಶಿ ಸುರೇಶ ಹಕ್ಕಿಮನೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.