ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಭಟ್ಕಳ ವಿಧಾನ ಸಭಾ ಕ್ಷೇತ್ರದ ಬ್ಲಾಕ್ ಪ್ರಚಾರ ಸಮಿತಿಗೆ ಅಧ್ಯಕ್ಷರನ್ನಾಗಿ ಮುಂಡಳ್ಳಿಯ ನಾರಾಯಣ ಬಡಿಯಾ ನಾಯ್ಕ ಇವರನ್ನು ನೇಮಿಸಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ನೀಡಿದ್ದಾರೆ.

RELATED ARTICLES  ಅನನ್ಯ ವ್ಯಕ್ತಿತ್ವದ ಶ್ರೀ ರಾಮನನ್ನು ನೀಡಿದ ವಾಲ್ಮೀಕಿ ಪ್ರಾತಃ ಸ್ಮರಣೀಯ

ನಾರಾಯಣ ನಾಯ್ಕ ಅವರು ಈ ಹಿಂದೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಉಪಾಧ್ಯಕ್ಷರಾಗಿ, ಹಿಂದುಳಿದ ವರ್ಗದ ಸೆಲ್‍ನ ತಾಲೂಕಾ ಅಧ್ಯಕ್ಷರಾಗಿ, ಭಟ್ಕಳ ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷರಾಗಿ, ತಾಲೂಕಾ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದು ಇವರ ನೇಮಕಾತಿಗೆ ಕಾರಣ ಎನ್ನಲಾಗಿದೆ.

RELATED ARTICLES  ದಿನಾಂಕ 22/05/2019ರ ದಿನ ಭವಿಷ್ಯ ಇಲ್ಲಿದೆ.