ಮಂಗಳೂರು ಸಮೀಪದ ಕೈರಂಗಳದ ಪುಣ್ಯಕೋಟಿನಗರದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಕೄಪಾಶೀರ್ವಾದದಲ್ಲಿ ಕಾರ್ಯಾಚರಿಸುತ್ತಿರುವ ಅಮೄತಧಾರಾಗೋಶಾಲೆಯಿಂದ ಇತ್ತೀಚೆಗಿನ ದಿನದಲ್ಲಿ ಕಟುಕರಿಂದ ಕಳವಿಗೀಡಾದ ಬಗ್ಗೆ ಪ್ರತಿಭಟಿಸಿ, ಗೋಕಳ್ಳರನ್ನು ಸೆರೆಹಿಡಿದು ಸೂಕ್ತ ಶಿಕ್ಷೆಯಾಗುವಂತೆಯೂ-ಮುಂದಕ್ಕೆ ಈ ರೀತಿಯ ದುಷ್ಕರ್ಮ ಆವರ್ತನೆಯಾಗಬಾರದೆಂದೂ ಸಂಬಂಧಿಸಿದ ಅಧಿಕಾರ ವರ್ಗದವರನ್ನು ಮನಮುಟ್ಟುವ ಉದ್ದೇಶದಿಂದ ಗೋಶಾಲಾ ಸಮಿತಿಯ ಅಧ್ಯಕ್ಷರಾದ ಟಿ ಜಿ ರಾಜಾರಾಮ ಭಟ್ಟರು ನಾಲ್ಕು ದಿನಗಳಿಂದ ನಡೆಸುತ್ತಿರುವ ಆಮರಣಾಂತ ಸತ್ಯಾಗ್ರಹ ಸಂದರ್ಭದಲ್ಲಿ ಹಲವಾರು ಗೋಪ್ರೇಮಿಗಳು ಕೈಜೋಡಿಸಿದರು.

RELATED ARTICLES  ಶಿವರಾತ್ರಿ ಮಹೋತ್ಸವ : ಭದ್ರಕಾಳಿ ಶಿಕ್ಷಣ ಸಂಸ್ಥೆಗೆ "ಸಾರ್ವಭೌಮ" ಪ್ರಶಸ್ತಿ

ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಕೇಶವಪ್ರಸಾದ ಎಡಕ್ಕಾನ, ಗುಂಪೆ ವಲಯ ಅಧ್ಯಕ್ಷ ರಾಮ ಭಟ್ ಅಮ್ಮಕಂಲ್ಲು, ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ಕೋಶಾಧಿಕಾರಿ ಜಯರಾಮ ಚೆಕ್ಕೆ ಮನೆ, ವೈದಿಕ ಪ್ರಧಾನ ರಾಮ ಭಟ್ ಬೆಜಪ್ಪೆ,ತಿರುಮಲೇಶ್ವರ ಭಟ್ ಮರುವಳ, ತ್ರಿವಿಕ್ರಮ ಕಾಪು,ಶ್ರೀ ಮತಿ ನಳಿನಿ ಬೆಜಪ್ಪೆ, ಅರವಿಂದ ಮರುವಳ, ಸುಹಾಸ್ ಬೆಜಪ್ಪೆ, ಸುಷ್ಮಾ ಬೆಜಪ್ಪೆ ಮೊದಲಾದ ಗೋಭಕ್ತರೂ ಸ್ಥಳಕ್ಕೆ ಭೇಟಿಯಿತ್ತು ನೈತಿಕ ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಪಾಲ್ಗೊಂಡರು.

RELATED ARTICLES  ಗ್ರಾ.ಪಂ.ಚುನಾವಣೆ: ಮದ್ಯಪಾನ, ಮದ್ಯ ಮಾರಾಟ, ಸಾಗಾಣಿಕೆ ಹಾಗೂ ಸಂಗ್ರಹಣೆ ನಿಷೇಧ