ಕನ್ನಡದ ಕೆಲವೇ ಕೆಲವು ಸ್ಪುರದ್ರೂಪಿ ವಾರ್ತಾ ವಾಚಕರಲ್ಲಿ ರಂಗನಾಥ್ ಭಾರದ್ವಾಜ್ ಕೂಡ ಒಬ್ಬರು , ಸದಾ ಒಂದಲ್ಲ ಒಂದು ನ್ಯೂಸ್ ಹೆಡ್ ಲೈನ್ನೊಂದಿಗೆ ಪ್ರೇಕ್ಷಕರ ಸುದ್ದಿ ಮಟ್ಟವನ್ನು ಹೆಚ್ಚಿಸುತ್ತಿದ್ದ ರಂಗನಾಥ್ ಭಾರದ್ವಾಜ್ ಇವತ್ತು ಈ ಸುದ್ದಿಯ ಹೆಡ್ ಲೈನ್ ಆಗಿದ್ದಾರೆ.

ರಂಗನಾಥ್ ಭಾರದ್ವಾಜ್ ಅವರ ಆರೋಗ್ಯದಲ್ಲಿ ಗಂಭೀರವಾದ ಏರುಪೇರು ಉಂಟಾಗಿದ್ದು ಅವರು ಅವರಿಗೆ ಮೆದುಳು ಸಂಬಂಧಿ ಕಾಯಿಲೆ ಒಂದು ಕಾಡುತ್ತಿದೆ ಇದರ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಪ್ರಖ್ಯಾತ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿದೆ .

ಇತ್ತೀಚೆಗೆ ಸುದ್ದಿ ಮಾಧ್ಯಮದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ ರಂಗನಾಥ್ ಭಾರದ್ವಾಜ್ ಏಕೆಂದರೆ ಅವರು ತಾವು ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ಆರೋಗ್ಯದ ಗಂಭೀರ ಸಮಸ್ಯೆ ಎದುರಾಗಿದೆ ಆದ್ದರಿಂದ ತಕ್ಷಣವೇ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರೆ.

RELATED ARTICLES  ಪ್ರತಿಭಟನೆಯ ನಂತರವೂ, ವೈದ್ಯಕೀಯ ತಿದ್ದುಪಡಿ ಮಸೂದೆ ತರಲು ಸರ್ಕಾರ ನಿರ್ಧಾರ.

ರಂಗನಾಥ್ ಅವರಿಗೆ ನ್ಯೂಸ್ ಮಾಧ್ಯಮದಲ್ಲಿ ಎಷ್ಟು ಹೆಸರು ಬಂದಿದೆಯೋ ಹಾಗೆ ಕೆಲವು ವಿವಾದಗಳು ಸಹ ಅವರನ್ನು ಹಾಗೆಯೇ ಅಂಟಿಕೊಂಡಿದ್ದವು ಕಿರುತೆರೆ ಟೀವಿ 9ಮಾಧ್ಯಮದಲ್ಲಿ ಇವರ ಹೆಸರು ಚಿರಪರಿಚಿತ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಂಗನಾಥ್ ಅವರಿಗೆ ಕೈಬೀಸಿ ಸುದ್ದಿ ಮಾಧ್ಯಮ ಕರೆದಿತ್ತು ಆಗ ಈಟಿವಿ ಕನ್ನಡದಲ್ಲಿ ನ್ಯೂಸ್ ಆಂಕರ್ ಆಗಿ ಕೆಲಸಕ್ಕೆ ಸೇರಿಕೊಂಡರು .

ಕಿರುತೆರೆಯ ಖ್ಯಾತ ನಿರೂಪಕಿ ರಾಧಿಕಾ ರಾಣಿ ಅವರನ್ನು ರಂಗನಾಥ್ ಭಾರದ್ವಾಜ್ ಮದುವೆಯಾಗಿದ್ದಾರೆ.

RELATED ARTICLES  ಕುಮಟಾದಲ್ಲಿ ಯಸ್ವಿಯಾಗಿ ನಡೆದ ಗೋ ಸಂಜೀವಿನಿ ಜೋಳಿಗೆ ಅಭಿಯಾನ

ಆನಂತರ ಟಿವಿ 9 ಸುದ್ದಿ ಮಾಧ್ಯಮ ಬಹಳ ಜನಪ್ರಿಯವಾದ ಕಾಲದಲ್ಲಿ ರಂಗನಾಥ ಟೀವಿ 9 ಮಾಧ್ಯಮಕ್ಕೆ ಸೇರಿಕೊಂಡರು ಅದಾದನಂತರ ಸುವರ್ಣವಾಹಿನಿಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ನಡೆಸಿದ್ದರು ಇದರ ಮಧ್ಯೆ ನಟನೆಯ ಬಗ್ಗೆ ಒಲವು ಮೂಡಿ ‘ಚೆಲುವಿನ ಗೆಳತಿ’ ಎಂಬ ಚಿತ್ರಕ್ಕೆ ನಾಯಕನಾಗಿಯೂ ಸಹ ಅಭಿನಯ ಮಾಡಿದ್ದರು ಆದರೆ ಈ ಚಿತ್ರ ತೆರೆ ಕಾಣಲಿಲ್ಲ.

ಸಮಯ ನ್ಯೂಸ್ ಚಾನಲ್ ನಲ್ಲಿ ಮುಖ್ಯ ಸಂಪಾದಕರಾಗಿಯೂ ಸಹ ರಂಗನ ಭಾರದ್ವಾಜ್ ಸೇವೆ ಸಲ್ಲಿಸಿದ್ದಾರೆ ಆ ನಂತರ ಈ ಟಿವಿಯ ಪ್ರಧಾನ ಸಂಪಾದಕರಾಗಿದ್ದರು ಇದಾದ ಬಳಿಕ ಮತ್ತೊಮ್ಮೆ ಟಿವಿ 9 ಗೆ ಮರಳಿದ್ದರು.