ಭಟ್ಕಳ: ದೇಶ-ವಿದೇಶಗಳಲ್ಲಿ ಖ್ಯಾತಿಯನ್ನು ಪಡೆದಿರುವ ತಾಲೂಕಿನ ಮುರುಡೇಶ್ವರದ ದಲಿತರ ಬಾಕಡ್ ಕೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀರ ಹದಗೆಟ್ಟಿದ್ದು ಒಂದು ತೊಟ್ಟು ನೀರಿಗೂ ಜನರು ಬವಣೆ ಪಡುವಂತಾಗಿದೆ. ಈ ನಿಟ್ಟಿನಲ್ಲಿ ಮಾವಳ್ಳಿ ಪಂಚಾಯತ್ ವ್ಯಾಪ್ತಿಯ ಬಾಕಡಕೇರಿ ದಲಿತರು ಈ ಬಾರಿ ಅಧಿಕಾರಿಗಳು ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಮಾಡದೇ ಇದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ನಿರ್ದಾರ ಕೈಗೊಂಡಿದ್ದಾಗಿ ತಿಳಿದುಬಂದಿದೆ. ಈ ಕುರಿತಂತೆ ದಲಿತ ಸಂಘರ್ಷ ಸಮಿತಿಯು ಮಾವಳ್ಳಿ ಪಂಚಾಯತ್ ಅಧಿಕಾರಿಗೆ ಮನವಿಯೊಂದನ್ನು ಅರ್ಪಿಸಿದ್ದು 10ದಿನಗಳೊಳಗಾಗಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಆಗ್ರಹಿಸಿದೆ.

ಮಾವಳ್ಳಿ ಪಂಚಾಯತ್ ವ್ಯಾಪ್ತಿಯ ಬಾಕಡಕೇರಿ ಹಾಗೂ ನ್ಯಾಶನಲ್ ಕಾಲೋನಿಯಲ್ಲಿ ಕಳೆದ ಕೆಲ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು ಬಾವಿಯ ಜಲಮೂಲ ಬತ್ತಿಹೋಗಿದ್ದು ಸಮಸ್ಯೆ ತೀವ್ರವಾಗತೊಡಗಿದೆ. ಹಲವಾರು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಅವರಿಂದ ಕೇವಲ ಹುಸಿ ಭರವಸೆ ಸಿಕ್ಕಿತೆ ಹೊರತು ಇದುವರೆಗೂ ಯಾವುದೇ ಪ್ರಯೋಜನವಾಗಲಿಲ್ಲ. ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸದೆ ಇದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಈ ಭಾಗದ ಜನರು ಮತದಾನವನ್ನು ಬಹಿಷ್ಕರಿಸಿ ಪ್ರತಿಭಟಿಸುವುದಾಗಿ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

RELATED ARTICLES  ಹಕ್ಕುಗಳ ಜೊತೆಗೆ ಕರ್ತವ್ಯದ ಅರಿವಿರಲಿ :- ಜಯದೇವ ಬಳಗಂಡಿ.

ಭಟ್ಕಳ ತಾಲೂಕಿನಾದ್ಯಂತ ಹಲವು ಯೋಜನೆಗಳು ಜಾರಿಯಾದರೂ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡದ ಪ್ರದೇಶಗಳಲ್ಲಿ ಯಾವುದೇ ಯೋಜನೆಗಳು ಜಾರಿಯಾಗಿಲ್ಲ, ಹಲವು ಯೋಜನಗಳು ಈ ಭಾಗದಿಂದ ಎತ್ತಂಗಡಿ ಮಾಡಿ ಬೇರೆ ಸಮುದಾಯಗಳಿಗೆ ನೀಡಲಾಗಿದೆ ಎಂಬ ಆರೋಪವನ್ನು ಈ ಭಾಗದ ಜನರು ಮಾಡುತ್ತಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿದ್ದ ಸ್ಥಿತಿಗತಿಗಳೂ ಇಲ್ಲಿ ಕಾಣಬಹುದಾಗಿದ್ದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಾರತಮ್ಯನೀತಿಯನ್ನು ಅನುಸರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ ಎನ್ನಲಾಗಿದೆ.
ಮನವಿಯನ್ನು ಅರ್ಪಿಸಿದ ದಸಂಸ ಮುಖಂಡರು ಮುಂದಿನ ಹತ್ತು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕು ಒಂದು ವೇಳೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಹೋದರೆ ತಾಲೂಕಿನ ಪರಿಶಿಷ್ಠಜಾತಿಗೆ ಸೇರಿದ ಎಲ್ಲ ಸಮುದಾಯವನ್ನು ಒಗ್ಗೂಡಿಸಿ ಚುನಾವಣೆಯನ್ನೇ ಬಹಿಷ್ಕರಿಸುವ ಬೆದರಿಕೆಯನ್ನು ಹಾಕಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES  ಕನ್ಯಾಸಂಸ್ಕಾರ ದ ಕುರಿತು ಹೇಳಿಕೆ ನೀಡದಂತೆ ಪ್ರತಿಬಂಧಕಾಜ್ಞೆ

ಈ ಸಂದರ್ಭದಲ್ಲಿ ಮಾರೂತಿ ಪಾವಸ್ಕರ್, ಈಶ್ವರ ಬಾಕಡ್, ಸುಭ್ರಮಣ್ಯ ಬಾಕಡ್,ನ್ಯಾಯಾವಾದಿ ವೀರೇಂದ್ರ ಮಂಗಳ, ಕಿರನ್ ಶೀರೂರು ಮತ್ತಿತರರು ಉಪಸ್ಥಿತರಿದ್ದರು.