ಕೈರಂಗಳ ಗೋಶಾಲೆ ಸೇರಿದಂತೆ ಇತ್ತೀಚಿಗೆ ಹೆಚ್ಚುತ್ತಿರುವ ಗೋಕಳ್ಳತನ ಹಾಗೂ ಅಪರಾಧಿಗಳನ್ನು ಶಿಕ್ಷಿಸದ ಸರ್ಕಾರದ ಕ್ರಮವನ್ನು ಭಾರತೀಯ ಗೋಪರಿವಾರ ಉಗ್ರವಾಗಿ ಖಂಡಿಸುತ್ತದೆ
~
ಕಳೆದ ನಾಲ್ಕು ದಿನಗಳ ಹಿಂದೆ ಬೆಳಗಿನ ಜಾವ ಮಂಗಳೂರು ಸಮೀಪದ ಕೈರಂಗಳದಲ್ಲಿರುವ ಅಮೃತಧಾರ ಗೋಶಾಲೆಗೆ ನುಗ್ಗಿದ ಶಸ್ತ್ರಸಜ್ಜಿತ ಗೂಂಡಾಗಳು ಒಂದು ಗೋವನ್ನು ಕಾರಿನಲ್ಲಿ ಅಮಾನುಷವಾಗಿ ಹೊತ್ತೊಯ್ದು, ಹಿಂದೆಯೇ ಓಡಿ ಬರುತ್ತಿದ್ದ ವಿಶ್ವನಾಥ್ ಅವರಿಗೆ ತಲವಾರು ಝಳುಪಿಸಿ ಮತ್ತೊಮ್ಮೆ ಬರುತ್ತೇವೆ ಎಂದು ಸವಾಲು ಹಾಕಿ ಹೋಗಿದ್ದಾರೆ.

ತಕ್ಷಣವೇ ದೂರು ಸಲ್ಲಿಸಲಾಗಿದ್ದರೂ ಮರುದಿನದ ವರೆಗೂ ಪೋಲೀಸ್ ಹಾಗೂ ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲರಾದರು. *ಇದರಿಂದ ನೊಂದ ಗೋಶಾಲೆಯ ಮುಖ್ಯಸ್ಥ ಶ್ರೀ ಟಿ.ಜಿ.ರಾಜಾರಾಮ ಭಟ್ ಅವರು ಅಪರಾಧಿಗಳನ್ನು ಬಂಧಿಸುವವರೆಗೂ ಆಮರಣಾಂತ ಉಪವಾಸ ಕೈಗೊಂಡು ಸತ್ಯಾಗ್ರಹ ಪ್ರಾರಂಭಿಸಿದರು.ಅದಾಗಿ ಮೂರನೆ ದಿನ ಅಂದರೆ ನಿನ್ನೆ ಯಾರೋ ಸಂಬಂಧವೇ ಇಲ್ಲದಿರೋ ಮೂರು ಜನರನ್ನ ಬಂಧಿಸಿ ನಮ್ಮ, ವಿಶೇಷವಾಗಿ ರಾಜಾರಾಮ್ ಭಟ್ ಅವರ ಕಣ್ಣೀರೊರೆಸುವ ಪ್ರಯತ್ನ ಮಾಡಿದರು. ಮೂರ್ನಾಲ್ಕು ಬಾರಿ ಜಿಲ್ಲಾಡಳಿತ ಹಾಗೂ ಉನ್ನತ ಪೋಲೀಸ್ ಅಧಿಕಾರಿಗಳು ರಾಜಾರಾಮ ಭಟ್ ಅವರನ್ನು ಉಪವಾಸ ಕೈಬಿಡುವಂತೆ ಮನವೋಲಿಸುವ ವಿಫಲ ಪ್ರಯತ್ನ ಮಾಡಿದರು.ಆದರೆ ರಾಜಾರಾಮ ಭಟ್ ಅವರ ಉದ್ದೇಶ ಸ್ಪಷ್ಟವಾಗಿತ್ತು. *ಒಂದೋ ನೈಜ ಗೋಕಳ್ಳರ ಬಂಧನವಾಗಿ ಈ ಪ್ರಕರಣ ಸಾಯಬೇಕು ಅಥವಾ ಆಮರಣಾಂತ ಉಪವಾಸ ಕುಳಿತಿರುವ ತಾವು ಸಾಯಬೇಕು ಎಂದು.ಅಷ್ಟರಮಟ್ಟಿಗೆ ಗೋರಕ್ಷಣೆಗೆ ಸಮರ್ಪಿಸಿಕೊಂಡವರು ರಾಜಾರಾಮ ಭಟ್. ಇವರ ಗೋನಿಷ್ಠೆಯ ಹಿಂದಿನ ಪ್ರೇರಣೆ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತಿ ಮಹಾಸ್ವಾಮಿಗಳವರು.

RELATED ARTICLES  ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಆರೋಗ್ಯದಲ್ಲಿಏರುಪೇರು: ಆಸ್ಪತ್ರೆಗೆ ದಾಖಲು!

ನಾಲ್ಕನೇ ದಿನಕ್ಕೆ ಉಪವಾಸ ಸತ್ಯಾಗ್ರಹ ಕಾಲಿಟ್ಟರೂ, ಸರ್ಕಾರ ಮತ್ತು ಪೋಲಿಸ್ ಇಲಾಖೆ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ. ನಿನ್ನೆಯಿಂದ ಅವರ ಮಗಳು ಸೌಮ್ಯ ಸಹ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. *ಇಂದು ನಡೆದ ಸಂತ ಸಮಾವೇಶದಲ್ಲಿ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳು, ಮಾಣಿಲದ ಮೋಹನದಾಸ ಪರಮಹಂಸ ಸ್ವಾಮಿಗಳು, ಕೇಮಾರು- ಈಶವಿಠಲದಾಸ ಸ್ವಾಮಿಗಳು ಭಾಗವಹಿಸಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅಪರಾಧಿಗಳನ್ನು ಬಂಧಿಸುವಲ್ಲಿನ ಸರ್ಕಾರದ ವಿಫಲತೆಯನ್ನು, ಇದರ ಹಿಂದೆ ಕುಮ್ಮಕ್ಕು ಕೊಡುತ್ತಿರುವ ಪ್ರಭಾವಿ ರಾಜಕಾರಣಿಗಳ ನಡೆಯನ್ನು ಭಾರತೀಯ ಗೋಪರಿವಾರ ಉಗ್ರವಾಗಿ ಖಂಡಿಸುತ್ತದೆ.ಮತ್ತು ನೈಜ ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಿ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸರ್ಕಾರವನ್ನು ಹಾಗೂ ಸ್ಥಳೀಯ ಆಡಳಿತವನ್ನು ಆಗ್ರಹಿಸುತ್ತದೆ. ನಾಲ್ಕು ದಿನಗಳಿಂದ ಉಪವಾಸ ಕುಳಿತಿರುವ ರಾಜಾರಾಮ್ ಭಟ್ ಅವರ ಆರೋಗ್ಯಕ್ಕೆ ಸ್ವಲ್ಪವೇ ಹಾನಿಯಾದರೂ ಅದು ಜ್ವಾಲಾಮುಖಿಯಂತೆ ಹೊರಹೊಮ್ಮಲಿದೆ. ಇಲ್ಲಿಯವರೆಗೆ ಅಹಿಂಸೆಯ ಪ್ರತಿಭಟನೆ ನಡೆದಿದ್ದು, ಮುಂದಿನ ದಿನಗಳಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳಲಿದ್ದು, ಇದರ ಸಂಪೂರ್ಣ ಹೊಣೆ ರಾಜ್ಯ ಸರ್ಕಾರದ್ದೇ ಆಗಿರುತ್ತದೆ* ಎಂದು ಭಾರತೀಯ ಗೋಪರಿವಾರ ಈ ಮೂಲಕ ಸರ್ಕಾರವನ್ನು ಎಚ್ಚರಿಸುತ್ತದೆ.

RELATED ARTICLES  ದಿನಾಂಕ 15/06/2019 ರ ರಾಶಿ ಭವಿಷ್ಯ ಇಲ್ಲಿದೆ.

ಗೋಕಳ್ಳರನ್ನು ಶೀಘ್ರವಾಗಿ ಬಂಧಿಸಬೇಕು, ಹಿಂದಿನ ಗೋಕಳ್ಳತನ ಪ್ರಕರಣಗಳನ್ನೂ ಇತ್ಯರ್ಥಗೊಳಿಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು. *ಗೋವುಗಳ ರಕ್ಷಣೆಗಾಗಿ ಗೋಭಕ್ತರು ಕಾನೂನು ಕೈಗೆ ತೆಗೆದುಕೊಳ್ಳುವ ಸಂದರ್ಭ ಉಂಟುಮಾಡಬೇಡಿ, ಗೋವುಗಳ ರಕ್ಷಣೆಗಾಗಿ ಯಾವುದೇ ಹಂತದ ಹೋರಾಟಕ್ಕೂ ಭಾರತೀಯ ಗೋಪರಿವಾರ ಸಿದ್ಧವಿದೆ* ಎಂದು ಈ ಮೂಲಕ ತಿಳಿಯಪಡಿಸುತ್ತದೆ‌.‌

ರಾಜಾರಾಮ ಭಟ್ ಅವರ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಭಾರತೀಯ ಗೋಪರಿವಾರದ ಸಂಪೂರ್ಣ ಬೆಂಬಲ ಇದ್ದು, ಹಲವಾರು ಕಾರ್ಯಕರ್ತರು ಈಗಾಗಲೇ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ. ನಾಡಿನಾದ್ಯಂತ ವ್ಯಾಪಕವಾಗಿ ಈ ರೀತಿಯ ಹೋರಾಟಗಳನ್ನು ನಡೆಯುವ ಮೂಲಕ ಸರ್ಕಾರಕ್ಕೆ ಒತ್ತಡ ಹಾಕಬೇಕಿದೆ. ಶ್ರೀಯುತ ರಾಜಾರಾಮ ಭಟ್ ಹಾಗೂ ಅವರ ಕುಟುಂಬದ ಆರೋಗ್ಯಕ್ಕಾಗಿ ನಾವೆಲ್ಲರೂ ಪ್ರಾರ್ಥಿಸೋಣ,

ವಂದೇ ಗೋಮಾತರಂ.
ಶಿಶಿರ ಅಂಗಡಿ
ಸಹ ಕಾರ್ಯದರ್ಶಿ
Bharatiya GouParivara – ಭಾರತೀಯ