ಕಾರವಾರ:  ಕುಮಟಾ-ಹೊನ್ನಾವರದ ಬಿಜೆಪಿ ಮುಖಂಡ ಸೂರಜ್ ನಾಯ್ಕ ಸೋನಿ ಅವರ ವಿರುದ್ಧ ದಾಖಲಾಗಿರುವ ಕೊಲೆ ಯತ್ನ ಪ್ರಕರಣದಲ್ಲಿ‌ ಸೋನಿಯವರಿಗೆ ಕಾರವಾರ ನ್ಯಾಯಲಯ ಜಾಮೀನು ನೀಡಿದೆ.

ಜಾನುವಾರನ್ನು ಅಕ್ರಮ ಸಾಗಣೆ ಮಾಡುತ್ತಿದ್ದ ಇಬ್ಬರ ಮೇಲೆ ಕರ್ಕಿ ನಾಕಾದಲ್ಲಿ ಮಾರ್ಚ 7ರಂದು ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಈ ಸಂಬಂಧ 9ರಂದು ಸೂರಜ್ ನಾಯ್ಕ ಸೋನಿ ಹಾಗೂ ಏಳು ಮಂದಿಯ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಇಂದು ಕಾರವಾರ ನ್ಯಾಯಾಲಯ ಸೋನಿಯವರಿಗೆ ಹಾಗೂ ಇತರ‌ ಬಂಧಿತರಿಗೆ ಜಾಮೀನು ನೀಡಿದ್ದು ಅವರ ಬೆಂಬಲಿಗರಿಗೆ ಹರ್ಷ ಉಂಟುಮಾಡಿದೆ.

RELATED ARTICLES  ಕೊರೋನಾ ಭಯ ಬೇಡ, ಜಾಗೃತಿ ಇರಲಿ- ಡಾ.ಅಶೋಕ ಭಟ್ಟ ಹಳಕಾರ.

‘ಕರ್ಕಿ ನಾಕಾದಲ್ಲಿ ಅಕ್ರಮವಾಗಿ ಗೋಸಾಗಣೆ ಮಾಡುತ್ತಿದ್ದವರ ಮೇಲೆ ನಡೆದ ಹ‌ಲ್ಲೆ ಪ್ರಕರಣದಲ್ಲಿ ಸೂರಜ್ ನಾಯ್ಕ ಸೋನಿ ಭಾಗಿಯಾಗಿಲ್ಲ. ಎಲ್ಲಿಗೋ ಹೋದವರು ವಾಪಸ್ ಬರುತ್ತಿದ್ದಾಗ ನಡೆಯುತ್ತಿದ್ದ ಹಲ್ಲೆಯನ್ನು ನೋಡಿದ್ದಾರೆ. ಅಷ್ಟಕ್ಕೇ ಅವರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ ಎಂದು ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು.

RELATED ARTICLES  ಇಂದಿನ(ದಿ-22/12/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ಇದೀಗ ಸೋನಿ ಬೆಂಬಲಿಗೆ ಸ್ವಲ್ಪ‌ಮಟ್ಟಿಗೆ ಸಮಾಧಾನ ಸಿಕ್ಕಿದ್ದು ಸೋನಿಯವರ ಬರುವಿಕೆಗಾಗಿ ಕಾದು ಕುಳಿತಿದ್ದಾರೆ.ಅವರ ಸ್ವಾಗತಕ್ಕೆ ಭಾರೀ ಸಿದ್ಧತೆಗಳು ನಡೆದಿವೆ ಎನ್ನಲಾಗಿದೆ.ನಾಳೆ ಕುಮಟಾಕ್ಕೆ ಸೂರಜ್ ನಾಯ್ಕ ಸೋನಿ ಆಗಮಿಸಲಿದ್ದು ಅವರ ಬರುವಿಕೆಯನ್ನು ಕಾತುರದಿಂದ ಕಾಯುತ್ತಿರುವುದಾಗಿ ಅವರ ಬೆಂಬಲಿಗರು ತಿಳಿಸಿದ್ದಾರೆ.