ಕುಮಟಾ: ಎಲ್ಲೆಡೆ ಚುನಾವಣಾ ಕಾರ್ಯ ಚಟುವಟಿಕೆಗಳು ಗರಿಗೆದರಿವೆ . ಎಲ್ಲ ಪಕ್ಷಗಳು ಹಾಗೂ ಅಭ್ಯರ್ಥಿಗಳು ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ .ಅದೇ ರೀತಿ ಕುಮಟ ದಲ್ಲಿಯೂ ಈವರೆಗೆ ಕಾರ್ಯ ನಿರ್ವಹಿಸುತ್ತಿದ್ದ ಬ್ಲಾಕ್ ಕಾಂಗ್ರೆಸ್ ತನ್ನ ನೂತನ ಕಾರ್ಯಾಲಯದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಂಡಿತ್ತು . ಕುಮಟಾ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ನ ನೂತನ ಕಚೇರಿಯ ಉದ್ಘಾಟನೆಯನ್ನು ಕಾಂಗ್ರೆಸ್ ಮುಖಂಡರಾದ ಆರ್ ವಿ ದೇಶಪಾಂಡೆ ನೆರವೇರಿಸಿದರು .

ಕುಮಟಾದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಡಿಪೋ ಕ್ರಾಸ್ನ ಎದುರಿನಲ್ಲಿ ನೂತನ ಬ್ಲಾಕ್ ಕಾಂಗ್ರೆಸ್ ಕಚೇರಿ ವಿದ್ಯುಕ್ತವಾಗಿ ಇಂದು ಉದ್ಘಾಟನೆಗೊಂಡಿತು.

RELATED ARTICLES  ಲಿಂಗಾಯತ ಸಮಾವೇಶ ಕಾಂಗ್ರೆಸ್ಸಿನದ್ದಲ್ಲ: ಆರ್.ವಿ.ಡಿ.ಸ್ಪಷ್ಟನೆ

ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಅನುಕೂಲತೆಗೆ ಅಗತ್ಯವಾಗಿರುವ ಬ್ಲಾಕ್ ಕಾಂಗ್ರೆಸ್ ಕಛೇರಿಯನ್ನು ಹೆದ್ದಾರಿ ಯ ಸಮೀಪದಲ್ಲಿಯೇ ಸ್ಥಾಪಿಸಿ‌ ತನ್ನ ಕಾರ್ಯಾಚರಣೆಗೆ ಬಳಸಲಾಗುವುದೆಂದು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್ ‌ನಾಯ್ಕ‌ ಹೇಳಿದರು.ಇದೇ ಸಂದರ್ಭದಲ್ಲಿ ಅನೇಕರು ಕಾಂಗ್ರೆಸ್ ಪಕ್ಷಕ್ಕೆ‌ ಸೇರ್ಪಡೆಗೊಂಡರು.

ಇದೇ ಸಂದರ್ಭದಲ್ಲಿ ಮಾತನಾಡಿದ ಆರ್.ವಿ ದೇಶಪಾಂಡೆಯವರು ಸಿದ್ಧರಾಮಯ್ಯ ಸರಕಾರದ ಜನಪರ‌ಯೋಜನೆಗಳ ಬಗ್ಗೆ ವಿವರಿಸಿದರು. ಅತ್ಯುತ್ತಮ ರೀತಿಯಲ್ಲಿ ಜನತೆಗೆ ಅನುಕೂಲ ಕಲ್ಪಿಸಿದ ಸರಕಾರ ಕಾಂಗ್ರೆಸ್ ಸರಕಾರ ಎಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಭಾವಿಕೇರಿ ಬೆಳ್ಳಿಹಬ್ಬದ ಗಣೇಶೋತ್ಸವದಲ್ಲಿ ಪ್ರತಿಭಾ ಪುರಸ್ಕಾರ

ಈ‌ ಸಂದರ್ಭದಲ್ಲಿ‌ ಶಾಸಕಿ ಶಾರದಾ ಶೆಟ್ಟಿ, ಕಾಂಗ್ರೆಸ್ ಮುಖಂಡ ರವಿಕುಮಾರ ಶೆಟ್ಟಿ,ಕಾಂಗ್ರೆಸ್ ಮುಖಂಡ ಭೀಮಣ್ಣ ನಾಯ್ಕ, ಪುರಸಭೆಯ ಅಧ್ಯಕ್ಷರಾದ ಮಧುಸೂದನ್ ಶೇಟ್, ಹೊನ್ನಾವರ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.